ನೀ ಮಾಡುವಿಯೆಂದರೆ ಮಾಡು ಚಿಂತಿ

ನೀ ಮಾಡುವಿಯೆಂದರೆ
ಯಾರ ಬ್ಯಾಡಂತಾರ ಮಾಡಪ್ಪ ಚಿಂತಿ ||ಪ||

ನೀ ಮಾಡೋದು ಘಳಿಗಿಸಂತಿ
ಮೇಲ್ ಮಾಳಿಗಿ ಕಟ್ಟಬೇಕಂತಿ
ಆನೆ ಅಂಬಾರಿ ಏರಬೇಕಂತಿ
ಎಂಟು ಬಣ್ಣದ ಕೌದಿ ಮರತಿ ||೧||

ಬದುಕು ಬಾಳೇವು ನಂದೇ ಅಂತಿ
ಒಳ್ಳೇ ಒಳ್ಳೇದು ಮನೆಯ ತುಂಬುತಿ
ಗಂಡಗೈ ಅವಧೂತರು ತಾವ್ ಬಂದು
ತಕ್ಕೊಂಡು ಹೋದರೆ ಇಲ್ಲೇ ಕುಂತಿ ||೨||

ಮುದ್ದುಗೋವಿಂದನ ಪಾದದೊಳಗೈತಿ
ಕಳಕೊಂಡು ಹುಡುಕಿದರಿನ್ನೆಲ್ಲೈತಿ
ಶಿಶುನಾಳಧೀಶನ ದಯೆಯೊಳಗೈತಿ
ರಸಿಕನುಸುರಿದ ಕವಿತೆಯಲ್ಲೈತಿ ||೩||

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೌದಪ್ಪ ಹೌದೋ ನೀನೇ ದೇವರಾ
Next post ಬೂದಿ ಬೀಳುತಿತ್ತು

ಸಣ್ಣ ಕತೆ

  • ಸಂತಸದ ಚಿಲುಮೆ

    ಅಕ್ಬರ ಮಹಾರಾಜ ಒಮ್ಮೆ ಆಸ್ಥಾನದಲ್ಲಿ ‘ಸಂತಸದ ಚಿಲುಮೆ ಎಲ್ಲಿದೆ’ ಎಂದು ಅಲ್ಲಿದ್ದವರನ್ನೆಲ್ಲಾ ಕೇಳಿದ. ಆಸ್ಥಾನದ ಪಂಡಿತ ಮಹಾಶಯನೊಬ್ಬ ಎದ್ದುನಿಂತು - ಮಹಾರಾಜ ಸಂತಸದ ಚಿಲುಮೆ ನಿಜಕ್ಕೂ ಎಲ್ಲಿದೆ… Read more…