ಹೌದಪ್ಪ ಹೌದೋ ನೀನೇ ದೇವರಾ
ನಿಂದ ನೀ ತಿಳಿದರ ನಿನಗಿಲ್ಲೋ ದೂರಾ ||ಪ||

ನೀರಿಲ್ಲದ ಜಳಕ ಮಾಡಿರಬೇಕೋ
ಅರಿವೆಯಿಲ್ಲದ ಮಡಿಯ ಉಟ್ಟಿರಬೇಕೋ
ಊಟಯಿಲ್ಲದ ಹೊಟ್ಟೆ ತುಂಬಿರಬೇಕೋ ||೧||

ನಿದ್ದೆಯೊಳಗೆ ಸದಾ ಎಚ್ಚರವಿರಬೇಕೋ
ತಂಬಾಕಿಲ್ಲದ ಬತ್ತಿ ವಳೆ ಸೇದಿರಬೇಕೋ ||೨||

ಶರೆ ಕುಡಿಯದೇ ನಿಸೆಯಾಗಿರಬೇಕೋ
ಎಬಡಾತಬಡಾ ನಾಲಿಗೆ ಬಿದ್ದಿರಬೇಕೋ
ಮೋಜಿಲಿ ಹೋಗಿ ಶಿಶುನಾಳಧೀಶನ ಪಾದಕೆ ಬಿದ್ದಿರಬೇಕೋ ||೩||

*****