ಅಬ್ಬಾ! ಯೀ ಯೆಂಗ್ಸ್ರೇ ಯೀಗೇ…

ಅಬ್ಬಾ! ಯೀ ಯೆಂಗ್ಸ್ರೇ ಯೀಗೇ…

Hengasaru

ಅಬ್ಬಾ! ಯೀ ಯೆಂಗ್ಸ್ರೇ ಯೀಗೇ…
ಅಪ್ಪಟ ಕಾಗೆಯಾ ಆಗೇ…
ಕರೀ ಗಡೆಗೆಲಿ, ವಂದ್ಗಳಿರೆ…
ಕೂಗಿ ಕೂಗಿ… ಕರೆವರೂ… ತಮ್ಮೇ ಬಳ್ಗವ್ನೆಲ್ಲ…
ಯಿರಾದಿಲ್ದೆ, ಯಿರಾದೆಲ್ಲಾ… ಯಿಕ್ಕಿ ಯಿಕ್ಕಿ…
ತಮ್ಮೊಟ್ಗೆ, ತಣ್ಣೀರ್‍ಬಾಟ್ಟೆನ್ವೂ, ವರ್‍ನಾಡ್ನಿ ಅನ್ಪೂರ್ಣೀಯರು!

ಆಹಾ! ಯೀ ಯೆಂಗ್ಸ್ರೇ ಯೀಗೇ…
ಘಮಿ ಘಮ್ಸಿವಾ… ಸಂಪ್ಗೆ, ಮಲ್ಗೆ, ಕೇದ್ಗೆ, ದವ್ನದಾ ಆಗೇ…
ಬಲು ಬಲು ಕಂಪ್ನಿ, ಯಿಂಪ್ನಿ, ಸೊಂಪ್ನಿ, ಕಸ್ತೂರಿ ಪರ್‍ಮೀಳ್ದಾ ಆಗೇ…
ಮಕ್ರಂದ, ಜೇನು, ತೇನು, ಕಾಕಂಬಿಯಾ ಆಗೇ…
ಅರ್ಥವಾಗ್ದ ಯೀ ಕವ್ನಾಗಳ ಆಗೇ…
ಕೌಸಲ್ಯ, ರುಕ್ಮಣಿ, ಸತ್ಯಭಾಮೆ, ಮಂಡ್ದೋರಿ, ಸಾವಿತ್ರಿಯಾ ಆಗೆ…
ಬೇಕಿರೇ… ಯಮ್ನೊಡ್ನೇ ಸೆಣ್ಸುವಾಧೀರೆ… ಧೀರೆಯರು.
ಬೇಕಿಲ್ಲವೋ… ಯೀಲ್ಗೇ ಅಂಜ್ಸಿದೇ…
ವನ್ವಾಸ್ಕಟ್ವೂ ಕೈಕೆಯರು!
ತ್ರಿಮೂರ್ತಿಗಳ್ನೇ ಸಿಸ್ಗೂಳ ಮಾಡಿ,
ಯದೆಯುಣ್ಸೆ, ಯಡ್ಗಾಲಲಿ ಯದ್ಗೊದ್ದು
ಕಬ್ಬಿಣ್ದ ಕಡ್ಲೆಗಳ, ‘ಕುಚ್ಚಿ’ ಕೊಟ್ಟ, ಪತಿವ್ರತೆಯರು!
ಶಿಖಂಡಿ, ಪುತ್ನೀ, ಮೋಯ್ನಿ, ಕಾಮ್ನಿ, ರೂಪದೀ…
ಭಸ್ಮಾ ಸುರ್‍ನೇನು? ವಶಿಷ್ಠ, ವಿಶ್ವಾಮಿತ್ರ, ಯಿಂದ್ರಾ,
ಚನ್ದ್ರಾ, ಸೂರ್‍ಯರ ಸಪ್ಸಿ… ಸಪ್ಸೀ…
ಯೀ ಜಗ್ವನಾಳ್ದಿವ್ರು…
ಯಿವ್ರು ಕನ್ನಡ ಧಾರಾವಾಹಿ, ವುದ್ದಾಲ್ಕ ಮುನಿಯ ಯೆಂಡ್ತಿ,
ಚಂಡಿ, ಚಾಮುಂಡಿ, ಋಣ್ಕೆಯಾ ಆಗೇ…
ಘಾಟು… ಮೋಟು, ಬ್ಯಾಡ್ಗೀ ಮೆಣ್ಸನ್ಕಾಯಿಯಾ ಆಗೇ…
ಬಳ್ಳಾರಿ ಸೀಮೆ ಜಾಲಿಯಾ ಆಗೇ…
ನೀರೂ, ನೆರ್‍ಳೂ, ಗೊಬ್ರಿಲ್ದೇ… ಅಬ್ಬಿ, ವುಬ್ಬಿ, ತಬ್ಬಿ,
ಅಚ್ಗೇ, ಬೆಚ್ಗೇ, ವಳ್ಳೆ ‘ಜಲ್ಲೇ’ ದುರ್‍ಗಿಯಾ ಆಗೇ…


ವೋಹೋ! ಯೀ ಯೆಂಗ್ಸ್ರೇ ಯೀಗೇ…
ಸಿವ್ನಾ ಉಡಿಯೇರಿ ಕುಂತ್ವರಾ ಆಗೇ…
ಯೀ ಜಗ್ದ ಕಣ್ಣಾಲ್ಗಿಳು…
ಯಿವ್ರಿಲ್ದೇ ಜಗ್ವೆಲ್ಲಿದೆ?
ಯೆಶ್ಟಾಗ್ಲೀ ಅರ್ಧನಾರೇಶ್ವರಿಯರಲ್ವೇ?
ಮಹಾವಿಷ್ಣುವ್ನಿ ವೃದಯ ಕಮ್ಲದಲ್ವರೂ…
ಬ್ರಹ್ಮನ ನಾಲ್ಗ್ಮೇಲ್ವರೂ…
ಕಲಿಯುಗ್ದ ಸಿನೀ ತಾರೆಯರೂ…
ಹನ್ನೆರಡು ಅವ್ತಾರ್‍ಗಿಳೂ…


ಅಯ್ಯೋಯ್ಯೋ! ಯೀ ಯೆಂಗ್ಸ್ರೇ ಯೀಗೇ…
ಯೇಗೆಂದೂ, ಅಶ್ಟು ಸುಲ್ಭೂದೀ, ಯೇಳ್ದಾ ಆಗೇ…
ತಲ್ಗೆ ಕೈ ಕ್ವಟ್ಟು, ಕುಳಿತಾ… ಬಡ್ವಿ, ದಿಮ್ಮೆನ್ಸೆಳಾಗೇ…
ಮೀನಿನೆಜ್ಜೆ, ಗೆಜ್ಜೆನಾದ, ಶೃತಿ, ಲಯ, ಸಂಗೀತ, ಪಲ್ವಿ,
ವೇದ, ಶಾಸ್ತ್ರ, ವೂರು, ಕೇರಿ, ಸಕಲ ಪುರಾಣ್ದಾ ಆಗೇ…
ಅಂಕಗಣ್ತೆ, ರೇಖಾಗಣ್ತೆ, ಆಲ್ಜಿಬ್ರಾದಾ ಆಗೇ…
ಸೂಲಂಗ್ವಿಂಟಾಽಽ ಕರೀ ಕರೀ ಕಬ್ಬಿನಾಽಽ ಆಗೇ…
ಸಜ್ಜಿ ಬೆಳ್ಸಿಯಾ ರಸ್ಗವ್ಳಾದಾಽ ಆಗೇ…

ಮಾವು, ಅಲ್ಸೂ, ಸುಲ್ದಿ ರಸಬಾಳೆಯಾ ಆಗೇ…
ಯಿಟ್ರೇ ವರಾ, ಕ್ವಟ್ರೇ ಸಾಪಾಽಽ
ರಾಮಬಾಣ್ದಾ ಕುಡಿನೋಟ್ದಾವ್ರು…
ಯಿಡ್ದಿರೆ ಕರ್‍ಡಿಯಂಗೇ… ಬಿಟ್ರೇ ಕರಂಟ್ನಿಂಗೇ…
ಮುದ್ಸಿರೇ… ಬೆಣ್ಣೆಯಂಗೇ…
ಗದ್ರಿಸಿರೇ… ಜ್ವಾಲಾಮುಖಿಯಂಗೇ…
ಜಗ್ದಗ್ಲಾ ಮುಗ್ಲಿಗ್ಲಾ… ಸೂರ್‍ಯ, ಚಂದ್ರ, ಅರುಂಧತಿ ನಕ್ಷತ್ರದಾ ಆಗೇ…
ಥಳ್ಥಾಳಾ… ಫಳ್ಫಾಳಾ… ವೊಳೆ ವೊಳ್ವೆ, ಬಿಸ್ಬೀಸೀ ಕೆನೆಯಾಲು!!
ಮಸ್ರ್‍ನಿ ಮಂಗಮ್ಮನಾಽಽ ಆಗೇ…
ವಕ್ಳು ಬಳ್ಳಿ, ತಾಯಿ ಬೇರ್‍ನಾ ಆಗೇ…
ಗಾಳಿ, ನೀರೂ, ಬೆಂಕಿ, ಅನ್ನಾ, ಪ್ರಾಣಧಾತುವ್ನಿಂತಿವ್ರು!


ಛೇ… ಛೇ! ಯೀ ಯೆಂಗ್ಸ್ರೇ ಯೀಗೇ…
ಸಾಕ್ಷಾತ್ ಬುದ್ಧನಾ ಆಗೇ…
ಯೀ ಜಗ್ವೆಲ್ಲ ಮಲ್ಗಿರ್‍ಲು… ಯಿವ್ರೊಬ್ರೆ ಯೆದ್ದುಯೆದ್ದು ವರ್‍ಡುವ್ರು!
ಯೆತ್ವರ, ವತ್ವರ, ಮತ್ವರ, ಧಿಕ್ಕರ್‍ಸಿ, ಕರ್‍ಳುಬಳ್ಳಿ ಕತ್ರಿಸಿ,
ದುಕ್ಕವತ್ತರ್‍ಸಿ, ನಡ್ನೀರ್‍ಲಿ ಕೈಕ್ವಟ್ಟು, ಧಿಕ್ಕೆಟ್ಟು…
ಅಡ್ಬಿಟ್ಲಿ, ಯಡ್ವಟ್ಲಿ, ಪ್ರೀತಿ, ಪ್ರೇಮ್ದಾಗಾಳ್ಕೇ ಸಿಲ್ಕೀ ಧೃತಿಗೆಟ್ಟು…
ನೇಣ್ಗುಂಬ್ವೇರೂ… ಲೈಲಾ, ಅರ್ನ್ಕಾಲಿ, ಪಾರ್‍ವತಿಯರು…


ಪಾಪ! ಯೀ ಯೆಂಗ್ಸ್ರೇ ಯೀಗೇ…
ಅಪ್ಪಟ ಕುಂತಿ, ಸೂರ್ಪನಖಿ, ಅಹಲ್ಯೆ ಮಂಥರೆ, ಅಮೃತಮತಿಯರಾ
ಆಗೇ…
ವೂದಾದ್ನ ವದ್ದು ವದ್ದು…
ಅಷ್ಟ್ರಾವಕ್ರ್‍ನ ಕಾಲ್ಗೇ ಬಿದ್ದು ಬಿದ್ದು…
‘ಪಲ್ಲ್ಮೇಯ ಲೇಸು, ನಲ್ಲರ ಮೈಯೊಳೆಂದು ಬೇಡ್ವು…’
ಅಕ್ಕನ ಚಾಳ್ಗೆ ಚಾಳ್ಸಿಯಿಟ್ಟವರು.
‘ಭಲೇ… ಭಲೇಽಽ ಬವುಪರಾಕ್’…
ಗಿನ್ನಿಸ್ ದಾಖಲೆ ಯಿವ್ರುದೇಽಽ


ಭಳಿರೇ… ಭಲೇ! ಯೀ ಯೆಂಗ್ಸ್ರೇ ಯೀಗೇ…
ಸೀತೆ, ಸಾವಿತ್ರಿ, ಸುಮತಿ, ದೌಪದಿ, ದಮಯಂತಿ,
ಚಂದ್ರ್‍ಮತಿ, ಬಾಲ್ನಾಗಮ್ಮರಾ ಆಗೇ…
ನಿತ್ಯ, ‘ಅಲಾಯಿ ಕುಣಿ’ಯಂದೇಳ್ವು, ನೂತ್ನದ್ವರೂ…
ಪುಟ್ಕಿಟ್ಟಾ, ಚಿಕ್ಕ ಚೊಕ್ಕ, ಚಿನ್ಮಾಯ್ನಿಂದೆಯ್ರು…
‘ಸಾನಾಽಭವರು, ಸಾನಾ….’ ಮೂರ್‍ತಿಗ್ಳಿವ್ರು…
ತ್ಯಾಗ್ಕೆ, ಭೋಗ್ಕೆ, ಬಲ್ದಾನ್ಕೆ ಬಲು ಬಲು… ಯೆಸ್ರೂ!
ದೇಸಾ, ಭಾಸೇ, ಕುಲಾ, ಮತಾ, ಜಾತಿ… ಯಾವ್ದಾದ್ರೇನು??
ಯಲ್ರ ವೀರ್‍ಯಾ, ರಕ್ತದಾ ಮಾದರಿ, ಬಣ್ಣೊಂದೇ!!
ಗಂಡ್ಸರೆಂದ್ರೆ: ವೂರು.
ಯೆಂಗ್ಸರೆಂದ್ರೆ: ಕೇರಿ.
ಯೀ ವೂರ್‍ನಿ ಪಾಪದ ಕೂರು: ಯೀ ಕೇರಿ.
ಯೀ ಭೇದ, ಭಾವ, ವನ್ಸಾ, ವುಪ್ಸಾ, ವಡೀ, ಬಡೀ, ಕಡೀ, ನಿತ್ಯಾನರ್‍ಕಾ!
ಯೀ ಕಸಾಯೀ ಖಾನೆಯ ಸಂಸ್ಕೃತಿ, ನಾಗ್ರೀಕತೆ, ಸನಾತ್ನ ಧರ್‍ಮಾವೆಂದು,
ಬಿಂಬಿಸ್ವು ಕರ್‍ಮಾ ತಪ್ಪುವ್ದೆಂದೋ?!
ಯೀ ಮುಸ್ಕಿನಾ ಗುದ್ದಾಟ್ಕೆ ಅಂತ್ಯವೆಂದೋ…??
ಯೀ ಭಂಡ್ಗಂಡ್ರು, ತಾಯ್ಗಿಂಡ್ರು… ತವ್ರಿಗಟ್ದಿರೂ ತಪ್ಪಲ್ವೆನ್ನುವಾ…
ಯೀ ಕರುಣಾಮಯ್ಗಿಳಿರ್‍ವೂತನ್ಕಾ…
ಯೀ ಗಂಡ್ಸರ ‘ಪುಡ್ಗೋಸಿ’… ಮಾತ್ರ ಭದ್ರ!!

ಆಽ… ಆಽಽ! ಯೀ ಯೆಂಗ್ಸ್ರೇ ಯೀಗೇ…
ಸೇಮು ಸಬ್ರಿಯಾ ಆಗೇ…
ಬರ್‍ಬೋರಿ ಕಾಯ್ಲು, ತಿನ್ಸಿಲು, ಭಕ್ತಿಗೆ, ಮುಕ್ತಿಗೆ, ಪ್ರೀತಿಗೆ,
ಶಕ್ತಿಗೆ, ಕ್ಷಮೆಗೆ, ದಯೆ, ಮೋಕ್ಷ, ಧೀಕ್ಷೆಗೆ!!
ಯೆಂದೋ ಬರೋರ್‍ಗಾಗಿ, ಬಿಸ್ಬೆಲ್ಲ ತರಾರ್‍ರಿಗಾಗಿ…
ಬಾಯ್ದಾಯಿ ಬಿಡ್ತಾ…
ಕಾಲ್ಬಾಲಿಯಿದ್ವಾರಾ ಕಡ್ಗೆಣ್ಸೆ…
ವಿಲ್ವಾಲ್ವಾದ್ದಾಡ್ವೂ… ನಿತ್ಯಾನಾರ್‍ಕಿಗಳು!


ಅವ್ದು! ಯೀ ಯೆಂಗ್ಸ್ರರೇ ಯೀಗೇ…
ವಳ್ಳೆ ಫಲ್ವಾತ್ತಾದ ಯರ್‍ವಿಲ್ದಾ ಆಗೇ…
ವಂದ್ಕಾಳು ಬಿತ್ತಿರೆ, ನೂರ್‍ಕಾಳು ಕೊಡ್ವೂ ಅಕ್ಷಯ ಪಾತ್ರೆಗ್ಳು!
ಬೆಟ್ದಾಶ್ಟು ಕಶ್ಟಾವತ್ತೂ, ಯೆತ್ತು ವತ್ತೂ…
ಯೀ ಜಗ್ವಾ ಪೊರ್‍ವೆ, ಬಳ್ಳರಿ ದುರ್ಗಿಯರೂ…
ಆಹಾ!! ಯೀ ಯೆಂಗ್ಸ್ರೇ ಯೀಗೇ…
ವಳ್ಳೆ ವುಪ್ಪಿನಾ ರುಚಿ ‘ಸುಚಿ’ಯಾ ಆಗೇ…
ಬೇಕೇ ಬೇಕು!
ಸಾಕೇ ಸಾಕು…!
ಸಿಹಿ ಸಿಹಿ…ಽಽ
ಸಕ್ರೀ… ಮೂಟೆಯಾ ಆಗೇ…
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಕೃತ ಕಾಮಿ
Next post ಶ್ರೀ ಕೃಷ್ಣನಂತೊಂದು ಮುಗಿಲು

ಸಣ್ಣ ಕತೆ

 • ಜೀವಂತವಾಗಿ…ಸ್ಮಶಾನದಲ್ಲಿ…

  ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

 • ಹಳ್ಳಿ…

  ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

 • ಗುಲ್ಬಾಯಿ

  ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

 • ಅಮ್ಮ

  ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

 • ರಣಹದ್ದುಗಳು

  ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

cheap jordans|wholesale air max|wholesale jordans|wholesale jewelry|wholesale jerseys