‘ಭೂಕಂಪ’ ಬಂದರೆ ಜಗತ್ತಿನ ಜನರು ಭಯಭೀತರಾಗುತ್ತಾರೆ. ಏಕೆಂದರೆ ಸಾವು, ನೋವು, ಆಕ್ರಂದನ, ಆಸ್ತಿ ಪಾಸ್ತಿ ಹಾನಿ, ಹೀಗೆ ಗೋಳಿನ ಕಥೆ ಮುಂದುವರಿಯುತ್ತದೆ. ಭೂಮಿ ನಡುಗಿ ಇತ್ತೀಚೆಗೆ ಗುಜರಾತ ಜನರನ್ನು ತಲ್ಲಣಗೊಳಿಸಿ ಸಾವು ನೋವನ್ನುಂಟು ಮಾಡಿದ ನೆನಪು ಮರೆಯಾಗಿಲ್ಲ ಜಗತ್ತಿನ ಮೂಲೆ ಮೂಲೆಗಳಲ್ಲಿಯೂ ಈ ಭಯಾನಕ ಕಂಪನಗಳು ಆಗಾಗ ಆಗುತ್ತಲೇ ಇರುತ್ತವೆ.
ಇಂಥಹ ಭೀಕರವಾದ ಭೂಕಂಪ ಸಂಭವಿಸಬಹುದೆಂದು ಗೊತ್ತಾದರೆ ಸುರಕ್ಷಿತವಾಗಿರಬಹುದು. ಇದು ಜನಗಳ ಆಂತರ್ಯದ ಧ್ವನಿಯಾಗಿದೆ. ಇದುವರೆಗೂ ನಿಖರವಾಗಿ ಭೂಕಂಪದ ಸುಳಿವನ್ನು ಕೊಟ್ಟಿರುವದಿಲ್ಲ ಅದರೆ ಜಪಾನಿನ ಸಂರೋಧಕರು ಮುನ್ನಚ್ಚರಿಕೆ ಕೊಡಬಹುದೆನ್ನುತ್ತಾರೆ. ಎಚ್ಚರಿಕೆ ನೀಡುವುದು ಶಬ್ದ ಹೊರಹೊಮ್ಮುವ ಮೂಲಕವಲ್ಲ
ನೀಲಿಗೆಂಪು ಬೆಳಕಿನ ಮಿಂಚನ್ನು ಹರಿಸುವ ಮೂಲಕ, ಎಂದು ಹೇಳುತ್ತಾರೆ. ಇದೀಗ ಜಪಾನಿನ ಕೂಬೆಯ ಭೂಕಂಪ ಇದನ್ನು ದೃಢಪಡಿಸಿದೆ. ಕೂಬೆಯ ಭೂಕಂಪದ ಮೊದಲು (ಹತ್ತಾರು ನಿಮಿಷಗಳ ಮೊದಲು) ನೀಲಿ ಮತ್ತು ಕೆಂಪು ಬೆಳಕು ಕಾಣಿಸಿಕೊಂಡಿತೆಂದು ಜನರ ವರದಿ. ಆ ಬಗೆಯ ಬೆಳಕು ಒತ್ತಡಕ್ಕೊಳಗಾದಾಗ ಮರಳಿನ ಕಲ್ಲುಗಳಿಂದ ಉದ್ಭವಾಗುತ್ತದೆಂದು ಜಪಾನಿನ ಸಂಶೋಧಕ ಕಲಾಗಚೆಯವರು ಅಭಿಪ್ರಾಯಪಡುತ್ತಾರೆ.
ಭೂಕಂಪನ ಪ್ರದೇಶದಲ್ಲಿ ಕಲ್ಲು ಒತ್ತಡದಿಂದಾಗಿ ಪುಡಿಯಾಗುವುದಕ್ಕೆ ಮೊದಲು ಮಿಂಚು ಬೆಳಕು ಹುಟ್ಟಿ 100 ಮಿಲಿ ಸೆಕೆಂಡುಗಳವರೆಗೆ ಮುಂದುವರೆಯುವುದು. ಸಿಲಿಕಾ(ಮರಳಿನ ಕಣ) ದಿಂದ ಬಂಡೆಗಳನ್ನೂ ಅದುಮಿ ಒತ್ತಡ ಹೇರಿದಾಗ ಆ ಬಗೆಯ ಮಿಂಚಿನ ಬೆಳಕು ಹೊರಬರುವುದೆಂದು ತಜ್ಞರ ಅಭಿಪ್ರಾಯವಾಗಿದೆ. ಈ ಕುರಿತು ಪ್ಪಯೋಗಗಳು ಮುಂದುವರೆದಿವೆ.
******
- ಬರಲಿವೆ ಮಾತನಾಡುವ ಕಂಪ್ಯೂಟರ್ಗಳು - January 11, 2021
- ಬರಡು ನೆಲವನ್ನು ಖಸುಗೊಳಿಸುವ ಶೋಧನೆ - December 28, 2020
- ಅಂಗೈ ಆಳತೆಯೆ ವಿಮಾನಗಳು! - December 14, 2020