ಯುರೋಪ

ಕ್ರಿ.ಪೂ. 4000 ವರ್ಷಗಳಷ್ಟು ಹಿಂದೆಯೇ ಯುರೋಪ ಖಂಡ ಪ್ರಾಚೀನ ಇತಿಹಾಸ, ಸಂಸ್ಕೃತಿಯನ್ನು ಹೊಂದಿತ್ತೆಂದು ಅನೇಕ ದಾಖಲೆಗಳ ಮುಖಾಂತರ ಕಂಡುಕೊಳ್ಳಲಾಗಿದೆ. ಉದಾಹರಣೆಗೆ ನಾಲ್ಕು ಸಾವಿರ ವರ್ಷಗಳಷ್ಟು ಹಿಂದೆಯೇ
ಗ್ರೀಸಿನಲ್ಲಿ ಉನ್ನತ ನಾಗರಿಕ ಸಮಾಜ ಅಸ್ತಿತ್ವದಲ್ಲಿದ್ದದ್ದು ತಿಳಿದು ಬರುತ್ತದೆ. ಭಾರತದಷ್ಟೇ ಪ್ರಾಚೀನ ಸಂಸ್ಕೃತಿ ಇರುವ ದೇಶ ಅದು. ಕ್ರಿ.ಪೂ. 450 ರಲ್ಲೇ ಗ್ರೀಕರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿರ್ಮಿಸಿದ್ದರೆಂದು ಪ್ರತೀತ ಇದೆ. ಆಗಲೇ ವಿಜ್ಞಾನ ತಂತ್ರಜ್ಞಾನ ಕಲೆ ಸಾಹಿತ್ಯ ನಾಟಕಗಳಲ್ಲಿ ಕ್ರೀಡೆಗಳಲ್ಲಿ ಪ್ರಸಿದ್ಧರಾಗಿದ್ದರು. ಗ್ರೀಸ್  ಜಗತ್ತಿಗೆ ಯುರೋಪ ನಾಗರೀಕತೆಗೆ ಕೇಂದ್ರವಾಗಿತ್ತು. ಹಾಗೆಯೇ ರೋಮ್, ಇಟಲಿ ದೇಶಗಳೂ ಪ್ರಾಚೀನ ಸಂಸ್ಕೃತಿಯನ್ನು ಹೊಂದಿದಂಥವುಗಳು. ಪ್ರಪಂಚದ ಎಲ್ಲ ಖಂಡಗಳಲ್ಲೂ ವಸಾಹತು ಸಾಮ್ರಾಜ್ಯ ಸ್ಥಾಪಿಸಿದ ದೇಶ ಬ್ರಿಟನ್ ಈ ಶತಮಾನದ ಎರಡು ಮಹಾಯುದ್ಧಗಳ ನಂತರ ತನ್ನೆಲ್ಲ ವಸಾಹತುಗಳನ್ನು ಕಳೆದುಕೊಂಡಿತು. ಫ್ರಾನ್ಸ್, ಜರ್ಮನ್, ಬೆಲ್ಲಿಯಂ. ಸ್ಥಿಡ್ಜರ್‌ಲ್ಯಾಂಡ್. ಸ್ಪೇನ್. ಸ್ವಿಡನ್ ಮುಂತಾದ ಯುರೋಪಿನ ಪ್ರಮುಖ ರಾಷ್ಟ್ರಗಳು ವಿಧ ವಿಧವಾದ ಸಾಂಸ್ಕೃತಿಕ ಹಿನ್ನೆಲೆಯನ್ನು ತಿಳಿಸುವಲ್ಲಿ ಪ್ರಮುಖವಾಗುತ್ತವೆ.

ಇಂತಹ ಯುರೋಪಿನ ದೇಶಗಳಿಗೆ ಅನೇಕ ಕಾರಣಗಳಿಂದ ಹೋಗಿ ಬಂದ ನಮ್ಮ ಪ್ರವಾಸಿಗರು ಅನೇಕ. ಲೇಖಕರಾಗಿ ಪ್ರವಾಸಕಧನಗಳನ್ನು ರಚಿಸಿ ಅಲ್ಲಿಯ ನಾಡು ನುಡಿಗಳನ್ನು ತಿಳಿಸಿದವರೆಂದರೆ ಕರವೀರಪ್ಪ ಅಂದಾನಪ್ಪ ಕುಲಕುರ್ಣಿ (ಯುರೋಪ ಖಂಡದ ಪ್ರವಾಸ), ಶಿವರಾಮಕಾರಂತರ (ಅಪೂರ್ವಪಶ್ಚಿಮ), ವಿ.ಕೆ.ಗೋಕಾಕರ (ನಾ ಕಂಡ ಪಡುವಣ), ದೊಡ್ಡೇರಿ ವೆಂಕಟಗಿರಿರಾವ್ (ಏಕಾಕಿ ಪ್ರವಾಸಿ), ದಿನಕರ ದೇಸಾಯಿ (ನಾ ಕಂಡ ಪಡುವಣ). ಟಿ.ಕೆ. ರಾಮರಾವ್ (ಗೊಳದ ಮೇಲೊಂದು ಸುತ್ತು)  ಹೊ.ಶ್ರೀನಿವಾಸಯ್ಯ (ನಾ ಕಂಡ ಜರ್ಮನಿ). ದೆ.ಜ.ಗೌ (ಪ್ರವಾಸಿಯ ದಿನಚರಿ). ವಸಂತಕವಲಿ (ರಾಗ: ತಾನಸೇನ ದಡದಲಿ) ತಿಪ್ಪೇಸ್ವಾಮಿ (ಕಲಾವಿದ ಕಂಡ ಫ್ರಾಂನ್ಸ್ ),  ಎಸ್‌.ರಾಮಸ್ವಾಮಿ (ಇಂಗ್ಗೆಂಡಿನಲ್ಲಿ ಅಲೆಮಾರಿ) ಕು.ಶಿ. ಹರಿದಾಸ ಭಟ್ಟ (ಇಟಾಲಿಯಾ ನಾನು ಕಂಡಂತೆ). ಹೋ. ಶ್ರೀನಿವಾಸಯ್ಯ (ಜಯಶ್ರೀ ಕಂಡ ಯುರೋಪ, ನವರತ್ನರಾಮ್ (ಪ್ಯಾರಿಸ್ಸಿನಿಂದ ಪ್ರೇಯಸಿಗೆ) ಡಾ.ಜಿ.ಗೋಪಾಲ್ (ವೈದ್ಯನ ವಿದೇಶ ಪ್ರವಾಸ).  ಎನ್‌.ಲಕ್ಷ್ಮೀನಾರಾಯಣ (ನಿರ್ದೇಶಕನ ವಿದೇಶ ಯಾತ್ರೆ) ವ್ಯಾಸರಾಯು ಬಲ್ಲಾಳ್
(ನಾನೊಬ್ದ ಭಾರತೀಯ ಪ್ರವಾಸಿ). ಶ್ರೀರಂಗರಾಜು (ವೇಲ್ಸ್‌ ದಿನಚರಿಯಿಂದ) ಐ.ಅರ್. ತಿಪ್ಪೇಸ್ವಾಮಿ (ಕಲಾವಿದ ಕಂಡ ಫ್ರಾನ್ಸ್),  ಅನುಪಮಾ ನಿರಂಜನ (ಅಂಗೈಯಲ್ಲಿ ಯೂರೋ ಅಮೇರಿಕಾ) ಲತಾ ಗುತ್ತಿ (ಯೂರೋ ನಾಡಿನಲ್ಲಿ).
ಸುಭಾಷಿಣಿ (ಜರ್ಮನಿಯ ಒಡಲಲ್ಲಿ), ಪ್ರಭಾಕರ ಶಿಶಿಲ (ದೇಶ ಯಾವುದಾದರೇನು?) ಹೇಮಲತಾ ಮಹಿಷಿ (ಯುರೋದರ್ಶನ), ನೇಮಿಚಂದ್ರ (ಒಂದು ಕನಸಿನ ಪಯಣ) ಇಂದಿರಾಶಿವಣ್ಣ (ಹಾಲೆಂಡಿನಿಂದ ಲಂಡನ್‌ವರೆಗೆ),
ಮೀನಾ ಮೈಸೂರು (ಎತ್ತಣಿಂದೆತ್ತ), ಸದಜೂಕಾಟ್ಕರ್ (ಮುಕ್ಕಾ ಪೋಸ್ಟ್‌ ಲಂಡನ್), ಮಲ್ಲಿಕಾರ್ಜುನ ಪಾಟೀಲ (ಶೇಕ್ಸ್‌ಪಿಯರನ ಇಂಗ್ಲೇಂಡಿನಲ್ಲಿ). ತ್ರಿವೇಣಿ ಶಿವಕುಮಾರ (ನಿಸರ್ಗಪ್ರಿಯರ ನಾಡುಗಳಲ್ಲಿ), ಡಿ.ಕೆ.ನಾಗರಾಜ್ (ನಾ ಕಂಡ ಮ್ಯಾಂಚೆಸ್ಟರ್) ಅಂದನೂರು ಶೋಭ (ಯೂರೋಪಿನಲ್ಲಿ ಒಂದು ಸುತ್ತು) ಮುಂತಾದವುಗಳು.

ಯುರೋಪಿನ ಇತಿಹಾಸದಲ್ಲಿ ಕ್ರಿಶ. 15ನೆಯ ಶತಮಾನದ ಆರಂಭವು ಆಧುನಿಕ ಯುಗದ ಆರಂಭಕ್ಕೆ  ನಾಂದಿಯಾಯಿತೆನ್ನುವುದು ಎಲ್ಲ ಲೇಖಕರು ತಮ್ಮ ತಮ್ಮ ಕೃತಿಗಳಲ್ಲಿ ಹೇಳುತ್ತ ಮುಂದುವರೆಯುತ್ತಾರೆ. ಯೂರೋಪಿನ ಜನಜೀವನದಲ್ಲಿ ಕಂಡು ಬರುವ ನವೋದಯವೇ ಈ ಪುನರುಜ್ಜೀವನ. (ಆಂಗ್ಲ ಬಾಷೆಯಲ್ಲಿ ರನೈಸಾನ್ಸ್‌)

“ಪುನರುಜ್ಜೀವನ ಚಳುವಳಿಯ ಎಲ್ಲ ಚಟುವಟಿಕೆಗಳಿಗೆ ಇಟಲಿಯು ಕೇಂದ್ರ ಸ್ಥಳವಾಗಿತ್ತು. ಇಟಲಿಯ ಧನಿಕ ವರ್ತಕರು ಕಾನ್‌ಸ್ಟೆಂಟೀನೋಪಲ್‌ನಿಂದ ಬಂದ ವಿದ್ವಾಂಸರಿಗೆ ಅಶ್ರಯ ನೀಡಿ ಅವರು ಅಧ್ಯಯನವನ್ನು ಮುಂದುವರೆಸಲು ಪ್ರೋತ್ಸಾಹಿಸಿದರು. ಕ್ರಿಶ. 15 ಮತ್ತು16ನೆಯ ಶತಮಾನದಲ್ಲಿ ಇಟಲಿಯು ಪ್ರಖ್ಯಾತ ಸಾಹಿತಿಗಳಿಗೆ. ಕವಿಗಳಿಗೆ, ಕಲಾವಿದರಿಗೆ, ವಿಜ್ಞಾನಿಗಳಿಗೆ ಜನ್ಮವಿತ್ತಿತು. ಪುನರುಜ್ಜೀವನ ಚಳುವಳಿಯು ನಂತರದಲ್ಲಿ ಅಖಂಡ ಯೂರೋಪಿನ ಚಳುವಳಿಯಾಗಿ ಮಾರ್ಪಟ್ಟಿತು. 16 ಮತ್ತು 17ನೆಯ ಶತಮಾನಗಳಲ್ಲಿ ವಿವಿಧ ರಾಜ್ಯಗಳಲ್ಲಿ ಸುಪ್ರಸಿದ್ಧ ಬರಹಗಾರರು ಜನ್ಮವೆತ್ತಿದರು. ಅವರೆಲ್ಲರೂ ತಮ್ಮ ದೇಶಿಯ ಭಾಷೆಗಳಲ್ಲಿ ಉತ್ಕೃಷ್ಟ ಕೃತಿಗಳನ್ನು ರಚಿಸಿದರು. ಇವರಲ್ಲಿ ಪ್ಲಾರೆನ್ಸಿನ ಮ್ಯಾಕವೆಲ್ಲಿ. ಸ್ಟೇನಿನ ಸರ್ಬಾಂಟೀಸ್, ಜರ್ಮನಿಯ ಮಾರ್ಟಿನ್ ಲೂಥರ್, ಇಂಗ್ರೆಂಡಿನ ಸರ್‌ಥಾಮಸ್ ಮೂರ್,
ಹರ್ಬರ್ಟ್‌ಸ್ಪೆನ್ಸರ್, ಜಾನ್‌ಮಿಲ್ಡನ್, ಕ್ರಿಸ್ಟೋಫರ್ ಮಾರ್ಲೊ, ಬೆನ್ ಜಾನ್‌ಸನ್, ಛಾಸರ್, ವಿಲಿಯಂ ಷೇಕ್ಸ್‌ಪೀಯರ್ ಮೊದಲಾದವರು ಮಹತ್ವಪೂರ್ಣ ಕೊಡುಗೆ ಸಲ್ಲಿಸಿದರು. ಪುನರುಜ್ಜೀವನವು ಶಿಲ್ಪಕಲೆ. ಚಿತ್ರಕಲೆ, ಸಂಗೀತಕಲೆ. ವಿಜ್ಞಾನಕ್ಕೆ ಪ್ರೋತ್ಸಾಹಿಸಿತು. ಈ ಯುಗದಲ್ಲಿ ಇಟಲಿಯಲ್ಲಿ ಪ್ರಖ್ಯಾತ ಶಿಲ್ಲಿಗಳು ಜನ್ಮ ತಾಳಿದರು. ಮೈಖೆಲ್ ಎಂಜಲೋ ಲಿಯೋನಾರ್ಡೋ ವಿನ್ಸಿ, ರಾಫೆಲ್, ಟಿಟಿಯನ್ ಪ್ರಖ್ಯಾತರು. ಹಾಗೆಯೇ ಇಟಲಿಯ ಗೆಲಿಲಿಯೋ, ಪೋಲೆಂಡಿನ ಕೋಪರ್ನಿಕಸ್. ಐಸಾಕ್ ನ್ಯೂಟನ್, ವಿಲಿಯಂ ಹಾರ್ವೆ ಮುಂತಾದವರು ಮಹತ್ವಪೂರ್ಣ ವೈಜ್ಞಾನಿಕ  ಸಂಶೋಧನೆಗಳು ಈ ಯುಗದಲ್ಲಿ ಜರುಗಿದವು” ಎಂದು ಬಹಳಷ್ಟು ವಿವರವಾಗಿ ಆರ್‌.ಜಿ.ಶಿವಣ್ಣನವರು ತಮ್ಮ ‘ವಿಶ್ಚ ಇತಿಹಾಸದ ರೂಪ ರೇಖೆಗಳಲ್ಲಿ’ ತಿಳಿಸಿಕೊಡುತ್ತಾ ಹೋಗಿದ್ದಾರೆ.

ಜಗತ್ತಿನಾದ್ಯಂತ ಮನುಷ್ಯನ ಸ್ವಭಾವ ಹೆಚ್ಚೂ ಕಡಿಮೆ ಒಂದೇ ಅನಿಸಿದರೂ ಅಲ್ಲಲ್ಲಿಯ ಭೌಗೋಳಿಕ. ರಾಜಕೀಯ. ಐತಿಹಾಸಿಕ, ಸಾಮಾಜಿಕ ಹಿನ್ನೆಲೆಯಲ್ಲಿ ಅನೇಕ ವೈವಿಧ್ಯತೆಗಳು ಕಾಣಸಿಗುತ್ತವೆ. ಹೀಗಾಗಿ  ಪ್ರಪಲಚದಲ್ಲಿ ಸಾವಿರಾರು ಸಂಸ್ಕೃತಿಗಳು ಇಂದು ನಮಗೆ ಕಾಣಿಸುತ್ತವೆ. “ಭೂ ರಚನೆ, ನೈಸರ್ಗಿಕ ಜಾಯಮಾನ ಮತ್ತು ವಾಯುಗುಣಕ್ಕನುಸಾರವಾಗಿ ಸಾಮಾಜಿಕ ಸಂಪ್ರದಾಗಯಗಳಲ್ಲಿ ಭೇದ ಪ್ರಬೇದಗಳು ತೋರಿದರೂ ಮಾನವನ ಮೂಲಭೂತ ಗುಣ ಸ್ಥಭಾವಗಳು ಜಗತ್ತಿನಲ್ಲೆಲ್ಲ ಒಂದೇ ಎಂಬುದಂತೂ ನಿಜ. ಹಿನ್ನೆಲೆ ಸಂಸ್ಕಾರ, ಸಾಧನೆ,ಮತ್ತು
ಪ್ರಾಕೃತಿಕ ಸೌಲಭ್ಯಗಳಿಗನುಗುಣವಾಗಿ ವಿಶ್ವ ಚೈತನ್ಯ ಸ್ಥರೂಪದ ಜ್ಞಾನ ವಿಜ್ಞಾನಗಳು ಒಂದೊಂದು ಕಡೆ ಒಂದೊಂದು ವಿಧವಾಗಿ ವಿಕಾಸಗೊಳ್ಳುತ್ತವೆ. ಅವು ವಿಕಾಸಗೊಂಡಾಗ ಜಗತ್ತಿನ ಎಲ್ಲಿ ಮಾನವರ ಆಸ್ತಿಯಾಗುತ್ತವೆ. ಯಾರು ಅವನ್ನು ತಮ್ಮವನ್ನಾಗಿ ಮಾಡಿಕೊಳ್ಳುತ್ತಾರೋ ತಮ್ಮ ಬದುಕಿನ ಭಾಗವನ್ನಾಗಿ ಸ್ವೀಕರಿಸುತ್ತಾರೋ ಅವರು ಬಲ್ಲಿದರಾಗುತ್ತಾರೆ’ ಎಂದು ದೇ.ಜ.ಗೌ. ಅವರು ‘ನಿಚ್ಚ ಹಸುರಿನ ನಾಡಿನಲ್ಲಿ’ ಕೃತಿಯಲ್ಲಿ ಹೇಳುತ್ತಾರೆ.

ಯೂರೋಪಿನ ನಾಗರಿಕ ಲಕ್ಷಣಗಳನ್ನು ಗುರುತಿಸುವಲ್ಲಿ ಶಿವರಾಮ ಕಾರಂತರು ತಮ್ಮ ‘ಅಪೂರ್ವ ಪಶ್ಚಿಮ’ ಕೃತಿಯಲ್ಲಿ ಹೀಗೆ ಹೇಳುತ್ತಾರೆ. ಅಲ್ಲಿಯ ಜನ ತಾವು ಉಳಿಯಲು ತಮ್ಮ ದೇಶ ಉಳಿಯಲು ಎಂಥ ತ್ಯಾಗಕ್ಕೂ ಅವರು ಸಿದ್ಧರೆಂಬುದಾಗಿ ತಿಳಿಯುತ್ತಾರೆ. ತಮ್ಮ ದೇಶ ಬದುಕದೇ ತಾವು ಬದುಕಲಾರೆವು ಎಂಬ ಪ್ರಜ್ಞೆ ಅವರಿಗಿದೆ. ದೇಶದ ಸಂಪತ್ತಿನ ಉತ್ಪನ್ನ ಹೆಚ್ಚದೆ ತಮ್ಮ ವರಮಾನ ಹೆಚ್ಚಾಗಲಾರದೆಂಬ ತಿಳಿವು ಅವರಿಗಿದೆ. ಅಂತೆಯೇ ಈ ಜನ ಉಣಬಲ್ಲರು, ಉಡಬಲ್ಲರು, ಕುಡಿಯಬಲ್ಲರು, ಕುಣಿಯಬಲ್ಲರು. ಜೀವನವನ್ನು ಅನಂದದಿಂದ ತುಂಬಿಸಿಕೊಳ್ಳುವ ಶಕ್ತಿ ಇವರಿಗಿದೆ. ಉತ್ಸಾಹ ಇದೆ. ಅದಕ್ಕೆ ಸಮತೂಕದಲ್ಲಿ ಅವರು ಚೆನ್ನಾಗಿ ದುಡಿಯಬಲ್ಲರು, ಕಷ್ಟಪಡಬಲ್ಲರು. ಹೀಗಾಗಿ ಸಾಹಸ ಪ್ರಯತ್ನ ಅವರ ರಕ್ತದಲ್ಲಿಯೇ ಹರಿದಾಡುತ್ತಿರುತ್ತದೆ. ಹಾಗೆಯೇ ಅವರ ಚುರುಕುತನವನ್ನು ಕಾರಂತರು ಹೀಗೆ ಸೂಕ್ಷ್ಮವಾಗಿ ಗುರುತಿಸುತ್ತಾರೆ ಹೋಟೆಲ್ ಅಂಗಡಿಗಳಲ್ಲಿಯ ಹುಡುಗಿಯರ ಚುರುಕುತನ ನಮ್ಮ ಪ್ರಾಯಸ್ತರಲ್ಲಿಯೂ ಕಾಣೆವು. ಮನೆಯಲ್ಲಿ ಆಳುಗಳನ್ನು ಇರಿಸಿಕೊಳ್ಳುವ ಪರಿವಾಠ ಕಡಿಮೆ. ಅಂಥ ಸೇವಕರು ಬೇಕಾದಲ್ಲಿ ತಾಸಿಗೆ ಇಂತಿಷ್ಟು ವೇತನಕೊಡಬೇಕಾಗುತ್ತದೆ. ಅವನೊಬ್ಬ ಸೇವಕ ಎಂಬ ದೃಷ್ಟಿಯಿಂದ ಕಾಣುವಂತೆಯೇ ಇಲ್ಲ. ಆತನೂ ಮಿತ್ರನೇ. ಅತ ದಿನಕ್ಕೊಂದು ಘಂಟೆ ಕಾಲ ಮನೆಗೆ ಬಂದು ದುಡಿಯುವವನಾದರೆ ನಿಯಮಿತ ವೇಳೆಗೆ ಬಂದಾನು, ವಂಚನೆ ಇಲ್ಲದೆ ದುಡಿದಾನು, ನಿಯಮಿತ ವೇಳೆಗೆ ಹೋದಾನು ಎನ್ನುತ್ತಾರೆ.

ಸ್ನಾನದ ವಿಷಯದಲ್ಲಿ ಯೂರೋಪಿಯನ್ನರ ಇತಿಹಾಸವನ್ನು ಅತೀ ಮನೋರಂಜಕವಾಗಿ ದಿನಕರ ದೇಸಾಯಿಯವರು ತಮ್ಮ ಪ್ರವಾಸ ಕೃತಿ ‘ನಾ ಕಂಡ ಪಡುವಣ’ದಲ್ಲಿ ಹೇಳುತ್ತಾರೆ. ಶೀತಲ ಪ್ರದೇಶವಾದ ಯೂರೋಪದಲ್ಲಿ ಬಚ್ಚಲುಗಳನ್ನು ನಿರ್ಮಿಸುವುದು ಸುಲಭವಾದುದಲ್ಲವೆಂದು ಹೇಳುತ್ತಾ ಪ್ರತಿಯೊಂದು ಬಚ್ಚಲು ಮನೆಯಲ್ಲಿ ಆರು ಅಡಿ ಉದ್ದದ ಟಬ್ ಬೇಕು. ಬಿಸಿ ನೀರು ಬೇಕು. ಹೊರಗಿನ ತಂಪುಗಾಳಿಯು ಒಳಸೇರದಂತೆ ಬಚ್ಚಲು ಮನೆಯು ಭಧ್ರವಾಗಿರಬೇಕು. ಇಂಥ ವ್ಯವಸ್ಥೆಯನ್ನು ಪ್ರತಿಯೊಂದು ಮನೆಯಲ್ಲಿ ಮಾಡುವುದು ಸುಲಭವಲ್ಲವೆಂದಿದ್ಧಾರೆ. ಅದಕ್ಕೆಂದೇ ಪ್ರತಿ ನಗರದಲ್ಲಿ ಸಾಮಾನ್ಯ ಜನರ ಸಲುವಾಗಿ ಸಾರ್ವಜನಿಕ ಸ್ನಾನಗೃಹಗಳಿದ್ದು ಹತ್ತಿಪ್ಪತ್ತು ಬಚ್ಚಲುಗಳು ಒಂದಕ್ಕೊಂದು ಹೊಂದಿಕೊಂಡಿರುತ್ತವೆ. ಅವುಗಳಿಗೆ ಬೇರೆ ಬೇರೆ ಗೋಡೆಗಳಿರುವುದಿಲ್ಲ. ಹೀಗಾಗಿ ಎಲ್ಲರೂ ನಗ್ನಾವಸ್ಥೇಯಲ್ಲಿಯೇ ಪರಸ್ಪರ ಮುಖ ನೋಡಿ ಸ್ನಾನ ಮಾಡಬೇಕಾಗುತ್ತದೆ. 16ನೆಯ ಶತಮಾನದಲ್ಲಿ ಅರಸರೂ ಸಹ ವಾರಕ್ಕೊಮ್ಮೆ ಸ್ನಾನ
ಮಾಡುತ್ತಿರಲಿಲ್ಲ. ಇಂಗ್ಲೇಂಡಿನ ರಾಣಿಯಾದ ಪ್ರಥಮ ಎಲಿಜಬೆತ್ ಅವಳು ಮೂರು ತಿಂಗಳಿಗೊಮ್ಮೆ ಸ್ನಾನ ಮಾಡುತ್ತಿದ್ದಳಂತೆ. ಪ್ರಾನ್ಸ್ ದೇಶದ ನಾಲ್ಕನೆಯ ಹೆನ್ರಿಯು ಸ್ನಾನ ಮಾಡುವಾಗ ಜತೆಯಲ್ಲಿ ಡಾಕ್ಲರರು ಹಾಜರಿರುತ್ತಿದ್ದರಂತೆ. ಸ್ನಾನ ಮಾಡುವುದು ಅಪಾಯಕಾರಿ ಎಂದು ಜನರ ತಿಳುವಳಿಕೆಯಾಗಿತ್ತು. ಅಲ್ಲಿಯ ಶೀತಲ ವಾಯುಗುಣವೇ ಈ ಕಾರಣವಿರಬೇಕೆಂದಿದ್ದಾರೆ.

ಹಾಗೆಯೇ 1918ರವರೆಗೆ ಗ್ರೇಟ್ ಬ್ರಿಟನ್ನಿನಲ್ಲಿ ಓಟಿನ ಅಧಿಕಾರವಿರಲಿಲ್ಲವೆಂದು ತಿಳಿಸುತ್ತ 1912ರಲ್ಲಿ Vote for women (ಸ್ತ್ರೀ ಮತಾಧಿಕಾರ) ಆಂದೋಲನವು ಹೇಗೆ ಉಗ್ರರೂಪ ತಾಳಿತೆನ್ನುವುದು ಹೇಳಿರುವರು. ಪಾರ್ಲಿಮೆಂಟ್ ಮುಂದೆ ಸತ್ಯಾಗ್ರಹ ಹೂಡುವುದು, ಸಾಮಾನ್ಯ ಕಾನೂನನ್ನು ಉಲ್ಲಂಘಿಸುವುದು, ಆಸ್ತಿಯನ್ನು ನಾಶಪಡಿಸುವುದು, ಅಂಚೆಪೆಟ್ಟಗೆಗಳನ್ನು ಸುಡುವುದು. ತಂತಿಗಳನ್ನು ತುಂಡರಿಸುವುದು, ಖಾಲಿ ಮನೆಗಳಿಗೆ ಬೆಂಕಿ ಹಚ್ಚುವುದು  ಮುಂತಾದ ಹಿಂಸಾತ್ಮಕ ಕೃತ್ಯಗಳು ನಡೆದುದಾಗಿ ತಿಳಿಸುತ್ತಾರೆ. ಇದರಿಂದ ನೂರಾರು ಸ್ತ್ರೀಯರನ್ನು ಸೆರೆಮನೆಗೆ ಹಾಕಲಾಯಿತು. ಕೊನೆಗೆ ಅಂದೊಲನವು ಯಶಸ್ವಿಯಾಗಿ 1918 ರಲ್ಲಿ ಮತಾಧಿಕಾರ ದೊರೆತ ಬಗೆಗೆ ಪ್ರಸ್ತಾಪಿಸಿರುವರು. 1948ರಲ್ಲಿ ಅಲ್ಲಿ ಸಾಮಾಜಿಕ ಭಧ್ರತಾ ಪದ್ಧತಿ ಜಾರಿಗೆ ಬಂದನಂತರ ಅದರ ಪ್ರಮುಖ ಉದ್ದೇಶಗಳೇನಾಗಿದ್ದವು ತಿಳಿಸಿರುವರು. ಅನಾರೋಗ್ಯ, ನಿರುದ್ಯೋಗ, ಅತೀವ ಬಡತನ, ಮುಪ್ಪು ಇಂತಹ ಅನಿಷ್ಟಗಳಿಲದ ಆದಷ್ಟು ಸುರಕ್ಷಿತವಾಗಿರಬೇಕೆಂದು ಉದ್ದೇಶಹೊಂದಲಾಗಿತ್ತು. ಮುಪ್ಪಿನ ಕಾಲದಲ್ಲಿ ವಿಶ್ರಾಂತಿ ವೇತನ, ವಸತಿ ಗೃಹಗಳು, ಮುಂತಾದ ಭದ್ರತೆಯ ಉದ್ದೇಶಗಳ ಬಗೆಗೆ ವಿವರಣೆಗಳಿವೆ.

ಎಚ್.ವಿ.ಶ್ರೀರಂಗರಾಜು ಅವರ ‘ವೇಲ್ಸ್‌ ದಿನಚರಿಯಿಂದ’ ಕೃತಿಯು ಇಂಗ್ಲೇಂಡಿನ ಪ್ರೇಕ್ಷಣೀಯ ಸ್ಥಳಗಳನ್ನು ಪರಿಚಯಮಾಡಿಕೊಡುತ್ತದೆ. ಶ್ರೀರಂಗರಾಜು ಅವರು ಖ್ಯಾತ ಶಿಕ್ಷಕರಾಗಿರುವುದರಿಂದ ಅಲ್ಲಿಯ ಶಿಕ್ಷಣದ ಪದ್ಧತಿಗಳ ಬಗೆಗೆ ಹೆಚ್ಚಾಗಿ ಚರ್ಚಿಸಿದ್ದಾರೆ. ಆಕ್ಸ್‌ಫರ್ಡ್ ಮತ್ತು ಕೆಂಬ್ರಿಡ್ಜ್‌ಗಳ ಶಿಕ್ಷಣದ ಗುಣಮಟ್ಟ, ಅಧ್ಯಯನದ ಕ್ರಮ ನಮಗೆ ತಿಳಿಸಿಕೊಡುತ್ತಾರೆ ಅನೇಕ ವಿಷಯಗಳ ಬಗೆಗೆ ಭಾರತ ಮತ್ತು ಇಂಗ್ಲೆಂಡ್‌ಗಳನ್ನು ಹೋಲಿಕೆ ಮಾಡಿ ನೋಡಿ “ಸೂರ್ಯ” ಎಂದೂ ಮುಳುಗದ ಬ್ರಿಟಿಷ್ ಸಾಮ್ರಾಜ್ಯ ಎಂದೆನ್ನಿಸಿಕೊಂಡಿರುವ ಸಾಮ್ರಾಜ್ಯ ಈಗ ವಿಶ್ವದ ಬೇರೆ ಬೇರೆ ರಾಷ್ಟ್ರಗಳಂತೆ ಅದೂ ಒಂದು ನಗರವಾಗಿದೆ ಎನ್ನುವರು. ಇಲ್ಲಿ ಯಾವ ಅಬ್ಬರಗಳಿಲ್ಲವೆಂದು ಬೇರೆ ಬೇರೆ ಲೇಖಕರೂ ಹೇಳಿರುವರು.

ಯುರೋಪಿನ ಪ್ರತಿಯೊಂದು ದೇಶದಲ್ಲೂ ಅದರೊಳಗಿನ ಪ್ರತಿಯೊಂದು ಊರುಗಳಲ್ಲಿಯೂ ನೋಟಕನ ಗಮನ ಸೆಳೆಯುವ ಸುಂದರ ಕಟ್ಟಡಗಳುಳ್ಳ ಚರ್ಚುಗಳು ಎದ್ದು ಕಾಣುತ್ತವೆ. ಪ್ರತಿಯೊಂದು ಚರ್ಚಿಗೂ ಅದರದೇ ಆದ ಕಥೆ,
ಮೌಲ್ಯಗಳು ಇದ್ದೇ ಇವೆ. ನೂರಾರು ಸಾವಿರಾರು ಚರ್ಚುಗಳು ನಮ್ಮಲ್ಲಿಯ ದೇವಸ್ಥಾನಗಳಲ್ಲಿ ದೀಪ ಕರ್ಪೂರಗಳು ಬೆಳಗುವಂತೆ ಅಲ್ಲಿಯೂ ಮೇಣದ ಬತ್ತಿಗಳು ಮಂದ ಪ್ರಕಾಶವಾಗಿ ಬೆಳಗುತ್ತಿರುತ್ತವೆ. ಅರ್ಚಕರ ಮಂತ್ರ ಘೋಷ
ಮುಗಿಯುತ್ತಿದ್ದಂತೆಯೇ ಸಾಲು ಗಂಟೆಗಳಿಂದ ಉದ್ಭವಿಸುವ ಮದುರ ನಿನಾದದಂತೆಯೇ ಇಲ್ಲಿ ಬೈಬಲ್ಲಿನ ಪಠನ ಮುಗಿದ ಮೇಲೆ ಅರ್ಗನ್ ವಾದ್ಯದಿಂದ ತರಂಗ ತರಂಗಗಳಾಗಿ ಹೊಮ್ಮುವ ಇಂಪಿನ ನಾದ ನಿಶ್ಚಬ್ದ ತುಂಬಿದ್ದ ಚರ್ಚುಗಳ ಮೂಲೆ ಮೂಲೆಗಳಲ್ಲಿ ಹರಡಿ, ಭಕ್ತ ವೃಂದದ ಹೃದಯ ಮಂದಿರದಲ್ಲಿ ಪ್ರತಿದ್ದನಿಸುತ್ತದೆ. ಬಾಳಿನಲ್ಲಿ ಬಗೆಹರಿಯದ ಸಂಕಷ್ಟಗಳು ಎದುರಾಗಿ ದಿಕ್ಕು ತೋರದಾದಾಗ ಆ ಮಹೋನ್ನತ ಶಕ್ತಿಗೆ ಶರಣಾಗಿ, ಸಾಷ್ಟಾಂಗವೆರಗಿ ಕೆನ್ನೆಗಳನ್ನು ತಟ್ಟಿಕೊಂಡು ಶಾಂತಮುದ್ರೆಯ ಅ ದೇವನ ಮೊರೆ ಹೋಗುವಂತೆ ಇಲ್ಲಿ ಭವ್ಯವಾದ ಶಿಲುಬೆಯೆದುರಿಗೆ ಮೊಣಕಾಲೂರಿ ಕುಳಿತು ತಲೆಬಾಗಿಸಿ ಮಾಡಿದ ಪಾಪಗಳನ್ನೆಲ್ಲಾ ನಿವೇದಿಸಿಕೊಂಡು, ಮನ್ನಿಸಿ ದಾರಿತೋರೆಂದು ನೊಂದ ಹೃದಯವು ತಲ್ಲಣದಿಂದ ಬೇಡುವಾಗ, ಅದೇ ದೈನ್ಯತೆ, ಅದೇ ಅಸಹಾಯಕತೆ. ಅದೊಂದೇ ನಂಬಿಕೆ !
ಪೂರ್ವ ಪಶ್ಚಿಮ ಹೃದಯಗಳ ಕಲ್ಪನೆಗಳು, ರೀತಿ ನೀತಿಗಳು ಬಗೆಬಗೆಯವಾದರೂ ಅವು ಅಂತಿಮವಾಗಿ ಸಂಗಮವಾಗುವ ಕ್ಷೇತ್ರ ಮಾತ್ರ ಒಂವೇ, ಅದರ ಹಿನ್ನೆಲೆ ಬಾವನೆಗಳೂ ಒಂದೇ ಎಂದು ಬಹಳ ಮಾರ್ಮಿಕವಾಗಿ ನವರತ್ನರಾಮ್ ತಮ್ಮ “ಪ್ಯಾರಿಸ್ಸಿನಿಂದ ಪ್ರೇಯುಸಿಗೆ” ಪ್ರವಾಸ ಕಥನದಲ್ಲಿ ಹೇಳಿದ್ದಾರೆ.

ಯೂರೋಪಿನ ಮ್ಯೂಸಿಯಂಗಳ ಬಗೆಗೆ ಚರ್ಚುಗಳ ಬಗೆಗೆ ನಮ್ಮ ಪ್ರವಾಸಿಗರು ಸಾಕಷ್ಟು ವಿವರಗಳನ್ನು ಕೊಟ್ಟಿದ್ದಾರೆ. ಆಯಾ ದೇಶಗಳ ರಾಜಕೀಯ. ಧಾರ್ಮಿಕ, ಸಾಮಾಜಿಕ ಬದುಕಿನ ಒಟ್ಟಾರೆ ಸಂಸ್ಕೃತಿಯ ಮೊತ್ತವನ್ನು ಒಂದೆಡೆ ಕಾಣುವ ಅವಕಾಶ ಮ್ಯೂಸಿಯಂಗಳಲ್ಲಿ ಸಿಗುತ್ತದೆ. ಯುರೋಪಿನ ಪ್ರತಿಯೊಂದು ದೇಶಗಳು ಅದರೊಳಗಿನ ಚಿಕ್ಕ ದೊಡ್ಡ ನಗರಗಳಿಂದ ಹಳ್ಳಿಗಳವರೆಗೆಲ್ಲ ಮ್ಯೂಸಿಯಂಗಳು ತುಂಬಿವೆ. ರೋಮ್‌ನಲ್ಲಿ 30, ಪ್ಯಾರಿಸ್ಸಿನಲ್ಲಿ 36, ವಿಯೇನ್ನಾದಲ್ಲಿ
40 ಹೀಗೆ ಪ್ರಮುಖ ನಗರಗಳಲ್ಲಿ 30, 40, 50 ಮ್ಯೂಸಿಯಂಗಳು ಕಾಣಿಸುತ್ತವೆ. ಆ ದೇಶದವರ ಕಲಾಭಿಮಾನ ಪ್ರೀತಿ ಅತ್ಯುನ್ನತವಾದುದು. ಪ್ರತಿಯೊಂದು ವಸ್ತುವನ್ನು ಜೋಪಾನವಾಗಿ ಸಂಗ್ರಹಿಸಿಡುವ ಕಲೆ. ಅಧ್ಯಯನಕಾರರಿಗೆ
ಅನುಕೂಲವಾಗುವಂತೆ ವಿಷಯಗಳಿಗನುಗುಣವಾಗಿ ವರ್ಗೀಕೃತ ಮಾಡಿ ಹೊಂದಿಸಿಟ್ಟಿರುವ ರೀತಿ ಮೆಚ್ಚುವಂತಹುದು. ಲಂಡನ್ನಿನ ‘ಬ್ರಿಟಿಷ್ ಮ್ಯೂಸಿಯಂ’. ಪ್ಯಾರಿಸ್ಸಿನ ‘ಲೂವೃ ಮ್ಯೂಸಿಯಂ’. ರೊಂನ ‘ವಾಕಿಟಿಕನ್ ಮ್ಯೂಸಿಯಂ’,
ಫ್ಲಾರೆನ್ಸಿನ ‘ಉಫಿಝಿಗ್ಯಾಲರಿ’ ಮ್ಯೂನಿಕ್ ನಗರದ ‘ಡ್ಯೂಷ್ ಮ್ಯೂಸಿಯಂ, ಅಮಸ್ಟರಡಾಮ್‌ದ ‘ರಿಕ್ಸ್‌ಮ್ಯೂಸಿಯಂ’ ಬಗೆಗಂತೂ ಲತಾ ಗುತ್ತಿ ತಮ್ಮ ‘ಯೂರೋನಾಡಿನಲ್ಲಿ’ ಆಶ್ಚರ್ಯ ಸಂತೋಷ ವ್ಯಕ್ತಪಡಿಸಿದ್ದಾರೆ. ಕೆಲವಡೆಗೆ ನಮ್ಮ
ದೇಶದ ಮ್ಯೂಸಿಯಂಗಳೊಂದಿಗೆ ಹೋಲಿಸಿಕೊಳ್ಳುತ್ತಾ ಅಸಮಾಧಾನ, ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಕ್ರಿಶ್ಚಿಯನ್ನರಿಗೆ ಯೂರೋಪಿನ ಪವಿತ್ರ ಯಾತ್ರಾಸ್ಥಳ ‘ವೆಟಿಕನ್’. ಇದು ರೋಮ್ ನಗರದಲ್ಲಿರುವ ಪುಟ್ಟ ಸ್ವತಂತ್ರ ರಾಷ್ಟ್ರ. ಇದು ಕೆಥೋಲಿಕ್ ಗುರುಗಳಾದ ಪೋಪರ ಕೇಂದ್ರ. ಕ್ಕಾಧೋಲಿಕ್ ಕ್ರೈಸ್ತರಿಗೆ ಜೆರುಸಲೇಂ ದೊಡ್ಡ ಯಾತ್ರಾ
ಸ್ಥಳವಾಗಿದ್ದರೂ ಕೂಡಾ ರೋಮ್‌ ಕ್ರಿಸ್ತನ ಜನ್ಮ ಭೂಮಿಯಾಗಿರುವಷ್ಟೇ ಪ್ರಾಮುಖ್ಯತೆ ಹೊಂದಿದೆ ಎಂದು ಎಲ್ಲ ಲೇಖಕರು ತಮ್ಮ ಕಥನಗಳಲ್ಲಿ ವಿವರವಾಗಿ ಗುರುತಿಸಿದ್ಧಾರೆ. ಮ್ಯೂಸಿಯಂಗಳಲ್ಲಿರುವ, ಚರ್ಚುಗಳಲ್ಲಿ ಇರುವ ಚಿತ್ರಕಲೆ
ಶಿಲ್ಪಕಲೆಗಳ ಬಗೆಗಂತೂ ಯುರೋಪಿನ ನಮ್ಮ ಪ್ರವಾಸ ಸಾಹಿತಿಗಳ ಕೃತಿಯಲ್ಲಿ ತುಂಬಿಹೋಗಿವೆ.

‘ಪ್ರವಾಸಿ ದಿನಚರಿ’ ಇದು ದೇ.ಜವರೇಗೌಡರ ದಿನಚರಿ ರೂಪದ ಪ್ರವಾಸ ಕಥನ. ಲೇಖಕರು ಯುರೋಪಿನ ಪ್ರಮುಖ ದೇಶಗಳಲ್ಲಿ ಸಂಚರಿಸಿದ್ದಾರೆ. ಆ ದೇಶಗಳ ಇತಿಹಾಸ, ಸಾಮಾಜಿಕ ಸಾಂಸ್ಕೃತಿಕ ಚಿತ್ರಣಗಳೆಲ್ಲ ಇಲ್ಲಿ ದಾಖಲಿಸಿರುವರು. ಇಂಗ್ಲೆಂಡಿನಲ್ಲಿ ಕುಲಪತಿಗಳ ಸಮ್ಮೇಳನದಲ್ಲಿ ಭಾಗವಹಿಸಿರುವುದರಿಂದ ಅಲ್ಲಿ ನಡೆದ ಚರ್ಚಗಳ ಬಗೆಗೆ, ಪ್ರಬಂಧಗಳ ಬಗೆಗೆ ವಿವರವಾಗಿ ತಿಳಿಸಿರುವರು. ಕೆಂಬ್ರಿಡ್ಜ್‌ ವಿಶ್ವ ವಿದ್ಯಾಲಯದ ಪರಿಚಯ, ರಾಯಲ್ ಬಟಾನಿಕಲ್ ಗಾರ್ಡನ್ನದ ಸಸ್ಯ ಪ್ರಪಂಚದ ಪರಿಚಯ ನಮಗಿಲ್ಲಿ ಅಗುತ್ತದೆ.

‘ರಾಗ : ತಾನ ಸೇನ ದಡದಲ್ಲಿ’ ಬೆರಿಗಳಶಾರು ಆಕಾಶವಾಣಿ ಸಂಗೀತ ಕಲಾವಿದರಾದ ವಸಂತ ಕವಲಿಯವರ ಪ್ರವಾಸ ಕೃತಿ. ಯುರೋಪಿನ ಪ್ಯಾರಿಸ್ ಲಂಡನ್ ನಗರಗಳಲ್ಲಿ ಸುತ್ತಾಡಿದ್ದಾರೆ. ಅಲ್ಲೆಲ್ಲ ಸಂಗೀತ ಕಚೇರಿಗಳನ್ನು
ನಡೆಸಿಕೊಟ್ಟಿರುವುದು ಅಲ್ಲಿಯವರು ಇವರನ್ನು ಗೌರುಸಿದ್ದು ಪುಸ್ತಕದ ತುಂಬೆಲ್ಲ ತುಂಬಿಕೊಂಡಿದೆ.

ತಿಪ್ಪೇಸ್ವಾಮಿಯವರ ಫ್ರಾನ್ಸ್‌ ದೇಶದ ಪ್ರವಾಸ ಕಥನ ‘ಕಲಾವಿದ ಕಂಡ ಫ್ರಾನ್ಸ್‌’ ಲೇಖಕರು ಕಲಾವಿದರಾದುದರಿಂದ ಪ್ರಾನ್ಸಿನಲ್ಲಿ ತಾವು ಕಂಡ ಕಲಾ ಶಾಲೆಗಳು, ಮ್ಯೂಸಿಯಂಗಳ ಬಗೆಗೆ ಸಂತಸಪಟ್ಟಿರುವರು. ಕಲೆ ಕಟ್ಟಡಗಳೊಳಗಷ್ಟೇ
ತುಂಬಿಕೊಂಡಿಲ್ಲ ಹೊರಗಡೆಯೂ ತುಂಬಿಕೊಂಡಿದೆ. ಅದು ಅ ಜನರ ಮನೆಗಳಿಂದಲೇ ಅವರ ಊಟ ಉಡುಪು- ಗಳಿಂದಲೇ ಕಾಣಬಹುದು ಎನ್ನುವರು. ಹಾಗೆಯೇ ಪ್ರಾನ್ಸ್‌ದ ಜನಜೀವನ ಬಗೆಯೂ ತಿಳಿಸಿಕೊಟ್ಟಿರುವರು.

‘ಏಕಾಕಿ ಪ್ರವಾಸಿ’ ದೊಡ್ಡೇರಿ ವೆಂಕಟಗಿರಿರಾವ್ ಅವರ ಯುರೋಪಿನ ಪ್ರವಾಸ ಕಥನ ಅದ್ಭತವಾದುದು. ಆರು ವಾರಗಳ ಅವಧಿಯಲ್ಲಿ ಏಕಾಕಿಯಾಗಿ ಅಥೆನ್ಸ್, ರೋಮ್, ಫ್ಲಾರೆನ್ಸ್‌, ವಿಯೆನ್ನ, ಮ್ಯೂನಿಕ್, ಬರ್ನ್, ಆಮ್‌ಸ್ಟೆರ್‌ಡ್ಯಾಂ,
ಪ್ಯಾರಿಸ್, ಲಂಡನ್, ಮುಂತಾದ ದೇಶಗಳ, ನಗರಗಳಲ್ಲಿ ಸುತ್ತಾಡಿರುವರು. ಅವರು ಕಲಾ ಪ್ರೇಮಿ ಅಗಿರುವುದರಿಂದಲೋ ಏನೋ ಪ್ರತಿ ನಗರದಲ್ಲಿ ತಾವು ವೀಕ್ಷಿಸಿದ ಚರ್ಚುಗಳ ಬಗೆಗಾಗಲಿ, ಮ್ಯೂಸಿಯಂಗಳ ಬಗೆಗಾಲಿ, ಜಿತ್ರಕಲೆ ಶಿಲ್ಪಕಲೆಗಳ ಬಗೆಗಾಗಲಿ ವಿವರವಾಗಿ ಬರೆದಿರುವರು. ಯುರೋಪಿನ ಕಲೆಗಳ ಬಗೆಗೆ ಆಸಕ್ತಿ
ಕೂತೂಹಲ ಇರುವವರು ಅವಶ್ಯವಾಗಿ ಈ ಪುಸ್ತಕವನ್ನೊಮ್ಮೆ ಓದಿ ಪ್ರವಾಸಕ್ಕೆ ಹೊರಡಬಹುದು.

ಕು.ಶಿ. ಹರಿದಾಸ ಭಟ್ಟರು ‘ರಂಗಾಯಣ’ದಲ್ಲಿ ರೋಮ್ ನಗರದಲ್ಲಿ ನಡೆದ ವಿಶ್ವರಂಗ ಸಮ್ಮೇಳನದಲ್ಲಿ ಭಾಗವಹಿಸಿ ಆ ಚಟುವಟಿಕೆಗಳ ಬಗೆಗೆ ಪರಿಚಯ ಮಾಡಿಕೊಡುತ್ತಾ ಹೋಗಿದ್ದಾರೆ. ಅದರೊಂದಿಗೆ ಅಲ್ಲಿಯ ಜನರ ಮನಸ್ಸು ಎಷ್ಟೋ
ಚುರುಕುಳ್ಳದ್ದು ಎಂದು ಹೇಳುತ್ತಾ ನಮ್ಮ ವಿದ್ವಾಂಸರೆನಿಸಿಕೊಂಡವರ ಮನಸ್ಸುಗಳು ಹೇಗೆ ಕೆಲಸ ಮಾಡುತ್ತವೆ ಎಂದು ಹೇಳುತ್ತಾರೆ. ನಮ್ಮ ಕಲೆ ಎಂದರೆ ಪಾಶ್ಚಾತ್ಯಕಲೆಯೇ ಶ್ರೇಷ್ಟ ಎಂಬ ಭ್ರಮೆಗೊಳಗಾದ ನಾವು, ಪಾಶ್ಚಾತ್ಯರು ಏಶಿಯಾದ ರಂಗಕಲೆಯ ಬಗೆಗೆ ಅಸಕ್ತಿ ತೋರಿಸುತ್ತಿರುವುದು ನೋಡಿ ನಾವು ನಮ್ಮ ಕಲೆಯ ಕಡೆಗೆ ಮೊದಲು ಗಮನ ಕೊಡಬೇಕಾದುದು ಅವಶ್ಯ ಎಂದಿದ್ದಾರೆ. ಈ ಪ್ರವಾಸ ಕಥನದಲ್ಲಿ ಅವರಿಗೆ ಆತ್ಮೀಯರಾದ ಕೆಲವು ವ್ಯಕ್ತಿಗಳ ಪರಿಚಯಗಳು ದೀರ್ಘವಾಗಿ ಬಂದಿವೆ.

ಹೋ. ಕ್ರೀನಿವಾಸಯ್ಯನವರು ‘ನಾ ಕಂಡ ಜರ್ಮನಿ’ಯಲ್ಲಿ ಅಲ್ಲಿಯವರ ಸ್ವಾಭಿಮಾನದ ಬಗೆಗೆ ಒಂದೆರಡು ಮಾತು ಹೇಳಿ ನಮಗೆ ಚಕಿತಪಡಿಸುತ್ತಾರೆ. ಎರಡನೆಯ ಮಹಾಯುದ್ಧದಲ್ಲಿ ಜರ್ಮನಿ ಸೋತಿತು. ಆಹಾರದ ಅಭಾವವೇ
ಸೋಲಿಗೆ ಕಾರಣವೆಂದು ಅಲ್ಲಿಯ ಕೆಲಸಗಾರರಿಗೂ ಗೊತ್ತು. ತಾವು ಕಷ್ಟ ಪಟ್ಟು ದುಡಿಯದಿದ್ದರೆ ದೇಶಕ್ಕೆ ಕಷ್ಟವಾಗುವುದಲ್ಲದೆ ಹೊಟ್ಟೆಗಿಲ್ಲದೆ ಸಾಯಬೇಕಾಗುತ್ತದೆ ಎನ್ನುತ್ತಾರೆ. ಕಾರ್ಖಾನೆಯಲ್ಲಿ ಯಾರನ್ನೇ ಕೇಳಲಿ ‘ನಾನು ಕೆಲಸ ಮಾಡಬೇಕು ಇಲ್ಲದಿದ್ದರೆ ದೇಶ ಮುಂದ ಬರುವುದಿಲ್ಲ್ಪ’ ಎನ್ನುತ್ತಾರೆ. ಅಂಗಡಿಗಳಲ್ಲಿ ಜರ್ಮನಿಯ ವಸ್ತುಗಳನ್ನು ಬಿಟ್ಟು ಬೇರೆ ಮಾರುವುದೇ ಕಡಿಮೆ. ತಮ್ಮ ದೇಶದ್ದೇ ಶ್ರೇಷ್ಟ ಎನ್ನುತ್ತಾರೆ. ‘ಹೊರದೇಶದ ಅನೇಕ ವಸ್ತುಗಳ ಬೆಲೆ ಕಡಿಮೆ ಇದ್ದರೂ ಕೊಳ್ಳುವವರು ಕಡಿಮೆ’ ಎಂದು ಬಹಳಷ್ಟು ದಿನಗಳವರೆಗೆ ಅಲ್ಲಿಯೇ ಇದ್ದು ಲೇಖಕರು ಗಮನಿಸಿರುವರು.

“ನಿರ್ದೇಶಕನ ವಿದೇಶ ಯಾತ್ರೆ” ಇದು ಕನ್ನಡ ಚಲನಚಿತ್ರರಂಗದ ನಿರ್ದೇಶಕರಾದ ಎನ್‌.ಲಕ್ಷ್ಮೀನಾರಾಯಣ ಅವರ ಪ್ರವಾಸ ಕೃತಿ. ಇವರು ಲಂಡನ್ನಿನ ಚಲನ ಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಜಗತ್ತಿನ ಪ್ರಮುಖ ನಿರ್ದೇಶಕರ
ಪ್ರಮುಖ ಚಿತ್ರಗಳನ್ನು ನೋಡಿ ಸಂತಸಪಟ್ಟ ಅನುಭವಗಳ ದಾಖಲೆಗಳಿವೆ.

ಹೋ,ಶ್ರೀನಿವಾಸಯ್ಯನವರು ‘ಜಯಶ್ರೀ ಕಂಡ ಯುರೋಪ’ ಪ್ರವಾಸ ಕಥನವನ್ನು ಬರೆದಿರುವರು. ತಮ್ಮ ಪತ್ನಿ ಜಯಲಕ್ಷ್ಮಿಯವರೊರದಿಗೆ ಯುರೋಪಿನ ಅನೇಕ ದೇಶಗಳಲ್ಲಿ ಸುತ್ತಾಡಿರುವರು. ಜರ್ಮನಿಯ ಬಗೆಗೆ ಬಹಳ  ಆತ್ಮೀಯವಾಗಿ ಬರೆದಿರುವರು. ಮೂವತ್ತು ವರ್ಷಗಳಷ್ಟು ಮೊದಲು ಬೆಂಗಳೂರಿನ ಅಫೀಸಿನ ಮುಖಾಂತರ ತರಬೇತಿಗೆ ಬಂದದ್ದು ನೆನಪಿಸಿಕೊಳ್ಳುತ ಅಂದಿನ ಸಂದರ್ಭಗಳನ್ನು ಮೆಲುಕು ಹಾಕಿದ್ದಾರೆ ಜೊತೆಗೆ ಅನೇಕ ಸಾಮಾಜಿಕ ರೀತಿ ನೀತಿಗಳನ್ನು ವಿವರಿಸಿರುವರು.

ಹೋ. ಶ್ರೀನಿವಾಸಯ್ಯನವರ ಇನ್ನೊಂದು ಪ್ರವಾಸ ‘ಶಶಿಕಂಡ ಜರ್ಮನಿ’ ಇಲ್ಲಿ ಶಶಿ ಎನ್ನುವ ಹುಡುಗಿ ತನ್ನ ಗೆಳತಿ ಗೀತಾಳಿಗೆ ಜರ್ಮನಿಯನ್ನು ಪರಿಚಯಿಸಿದ ಸಂದರ್ಭಗಳಿವೆ. ಇದರಲ್ಲಿ ಜರ್ಮನಿಯ ಜನಜೀವನ. ದೇಶಪ್ರೇಮ,
ಚಳಿಗಾಲ, ಬೇಸಿಗೆಕಾಲ, ಹಬ್ಬ, ಉದ್ಯೋಗ ಮುಂತಾದವುಗಳ ವಿವರಣೆಗಳು ಸಿಗುತ್ತವೆ. ದೊಡ್ಡವರೂ ಓದಿ ಅನಂದಿಸಬಹುದಾದಂತಹ ಕೃತಿ ಇದಾಗಿದೆ.

ಡಾ.ಜಿ.ಗೋಪಾಲರ ‘ವೈದ್ಯನ ವಿದೇಶ ಪ್ರವಾಸ’ದಲ್ಲಿ ಯುರೋಪಿಯನ್ನರ ಮುಷ್ಕರ, ಪ್ರತಿಭಟನೆಗಳ ಬಗೆಗೆ ಹೇಳುತ್ತ ಯಾರೋಪಿಯನ್ನರ ಪ್ರತಿಭಟನೆ ಶಾಂತರೀತಿಯಾಗಿ ಇರುತ್ತದೆ. ಕಪ್ಪು ಬಟ್ಟೆ ಧರಿಸುವುದು, ಘೋಷಣೆಗಳನ್ನು
ಬೋರ್ಡ್‌ಗಳ ಮೇಲೆ ಬರೆದು ಪ್ರದರ್ಶಿಸುವುದು, ಹೀಗೆ ವ್ಯಕ್ತ ಪಡಿಸುತ್ತಾರೆ. ಕೂಗಾಟ ಚೇರಾಟಗಳಿಂದ ಸುತ್ತ ಮುತ್ತಲಿನ ಪರಿಸರದ ಶಾಂತಿ ಕದಡಿಸುವುದಿಲ್ಲಿ. ಹಿಂಸಾಮಾರ್ಗದಿಂದ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕೆಂದರೆ ಕಷ್ಟ-ನಷ್ಟಗಳಿಗೆ ಹೊಣೆಗಾರರು ತಾವೇ ಆಗುತ್ತೇವೆಂಬ ಅರಿವು ಅವರಿಗೆ ಇದೆ ಎಂದು ವಿವರಿಸಿರುವರು

ಪಾಶ್ಚಾತ್ಯದಲ್ಲಿ ವಿಜ್ಞಾನ ತಂತ್ರಜ್ಞಾನ ಉನ್ನತಿ ಮೇರುಮಟ್ಟಕ್ಕೇರುತ್ತಿದ್ದರೆ ಅಷ್ಠೇ ಅಶ್ಲೀಲತೆ ಕೆಳಮಟ್ಟಕ್ಕೆ ಇಳಿಯುತ್ತಿದೆ. ಕೀಳು ದರ್ಜೆಯ ಅಭಿರುಚಿಗಳು ಹೆಚ್ಚಾಗುತ್ತಿವೆ. ಪ್ರವಾಸಿ ನಗರದಲ್ಲಿ ಯಂತೂ ಲೈಸನ್ಸ್‌ ಕೈಯಲ್ಲಿ ಇಟ್ಟುಕೊಂಡೇ ನಿರ್ಭಿಡೆಯಾಗಿ ಅಶ್ಲೀಲ ಚಟುವಟಿಕೆಯಲ್ಲಿ ತೊಡಗಿರುವ ಗಂಡು ಹೆಣ್ಣುಗಳು ಕಾಣಸಿಗುತ್ತಾರೆ ಎಂದು ಪ್ರಬಾಕರ ಶಿತಿಲ, ಹೇಮಲತಾ ಮಹಿಷಿಯವರು ತಮ್ಮ ಪ್ರವಾಸ ಕಥನದಲ್ಲಿ ಅನೇಕ ಉದಾಹರಣೆಗಳೊಂದಿಗೆ ಪ್ರಸ್ತಾಪಿಸಿದ್ದಾರೆ.

ಅನುಪಮಾ ನಿರಂಜನರು 1975ರಲ್ಲಿ ಬರ್ಲಿನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಸಮ್ಮೇಳನಕ್ಕೆ ಭಾರತೀಯ ನಿಯೋಗದ ಒಬ್ದ ಸದಸ್ಯೆಯಾಗಿ ಹೋಗಿ ಬಂದು ಅಲ್ಲಿಯ ತಮ್ಮೆಲ್ಲ ಅನುಭವಗಳನ್ನು ‘ಸ್ನೇಹಯಾತ್ರೆ’ ಎನ್ನುವ ಪ್ರವಾಸ ಕಥನದಲ್ಲಿ ಹೇಳಿದ್ಧಾರೆ. ಯುರೋಪಿನ ದೇಶಗಳಲ್ಲಿ ಅರೋಗ್ಯ ಪಾಲನೆಗೆ, ವೃದ್ಧರಿಗೆ ವೃದ್ಧಾಪ್ಯ ವೇತನ ಮುಖಾಂತರ ಅನೇಕ ಸವಲತ್ತುಗಳು ಕೊಡುತ್ತಿರುವುದಾಗಿ ಗುರುತಿಸಿದ್ಧಾರೆ. ಜರ್ಮನ್ ಮಹಿಳೆಯರ ಜೀವನದಲ್ಲಿ ಕಂಡು ಬರುವ ತೃಪ್ತಿಗೆ ಕಾರಣವೇನೆಂಬುದನ್ನು ತಿಳಿಯಲು ಲೇಖಕಿ ಹಲವು ಸಂದರ್ಶನಗಳಿಂದ ಮಾಹಿತಿ ಪಡೆದಿರುವರು. ವೃದ್ಧರಿಗೆ  ವೇತನ, ನೂತನ ದಂಪತಿಗಳಿಗೆ 5000 ಮಾರ್ಕು ಬಡ್ಡಿರಹಿತ ಸಾಲ (ಇದನ್ನು ತೀರಿಸಲೇಬೇಕೆಂಬ ನಿಯಮವೇನೂ ಇಲ್ಲ).  ಹೆರಿಗೆಗೆ ಮುಂಚೆ ಆರುವಾರ ಹಾಗೂ ಹೆರಿಗೆಯ ನಂತರ 12ವಾರ ಸಂಬಳ ಸಹಿತ ರಜೆ; ಹೆಣ್ಣಾದರೂ ಒಂದೇ ಗಂಡಾದರೂ ಒಂದೇ ಎಂಬ ಮನೋಭಾವನೆ. ಹೆಣ್ಣಾಗಲೀ ಗಂಡಾಗಲೀ ದೊಡ್ಡವರಾದ ಮೇಲೆ ಇಬ್ಬರೂ ದುಡಿಯಲೇಬೇಕು. ಈ ಸವಲತ್ತುಗಳಿರುವ ಸಮಾಜದಲ್ಲಿ ನೆಮ್ಮದಿ ಕಾಣಬರುವುದು ಸಹಜ ತಾನೇ’ ಎನ್ನುತ್ತಾರೆ.

ಜರ್ಮನಿಯ ಇತಿಹಾಸವನ್ನು ಹೇಳುತ್ತಾ ಹಿಟ್ಗರನ ದುರಾಸೆ ಬುದ್ಧಿಯಿಂದಾಗಿ ಎರಡನೆಯ ಜಾಗತಿಕ ಯುದ್ದದ ಸಂದರ್ಭಗಳನ್ನು ಯುದ್ಧದಲ್ಲಿ ಅಪಾರವಾದ ಸಾವು, ನೋವು, ನಷ್ಟಗಳಿಗೆ ಗುರಿಯಾದ ಜರ್ಮನಿಯ ಬಗೆಗೆ ಹೇಳುತ್ತಾರೆ. ನಂತರ ಹಾಳುಬಿದ್ದ ಬರ್ಲಿನ್ ನಗರವನ್ನು ಕಳೆದ 25 ವರ್ಷಗಳ ಅವಧಿಯಲ್ಲಿ ಪುನರ್ ನಿರ್ಮಿಸಿ ಸಮೃದ್ಧವಾಗಿ ತಲೆ ಎತ್ತುವಂತೆ ಮಾಡಿದ ಜನರ ತ್ಯಾಗ, ನಿಷ್ಠೆ, ದೇಶಪ್ರೇಮಗಳ ಬಗೆಗೆ ಅನೇಕ ವಿವರಣೆಗಳಿವೆ.

ರಾಶಿಯವರ ‘ಕೊರವಂಜಿಯ ಪಡುವಣ ಯಾತ್ರೆ’ ಪ್ರವಾಸ ಕೃತಿ. ರಾಶಿ. ಯವರು ಮೂಲತಃ ನಗೆಗಾರ ಅಥವಾ ಹಾಸ್ಯಸಾಹಿತಿಯಾಗಿ ನಮಗೆ ಕಾಣುತ್ತಾರೆ. ಅವರೊಬ್ದ ವೈದ್ಯರಾಗಿದ್ದರೂ ಸಾಹಿತ್ಯದ ಮುಖಾಂತರವೇ ಹೆಚ್ಚು
ಪರಿಚಿತರು. ಇಲ್ಲಿ ತಮ್ಮ ಪಡುವಣದ ಪ್ರವಾಸದಲ್ಲಿ ಯುರೋಪಿನ ವೈದ್ಯಕೀಯ ಕ್ಷೇತ್ರದ ಸಾಧನೆಗಳ ಬಗೆಗೆ ವಿವರವಾಗಿ ತಿಳಿಸಿರುವರು.

ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲು ಎಚ್‌.ಎಂ.ಮಹೇಶ್ವರಯ್ಯನವರು ಜರ್ಮನಿಗೆ ಹೋಗಿದ್ದಾರೆ. ಅಲ್ಲಿ ತಾವು ಕಂಡು ಅನುಭವಿಸಿದ ಅನೇಕ ಅನುಭವಗಳು ‘ಬೆಳಕಿನ ನಾಡಿನಲ್ಲಿ’ ದಾಖಲಿಸಿದ್ಧಾರೆ. ಲೇಖಕರು ಕಿಟ್ಟಲ್‌ರವರ ಸಮಾಧಿ ಹುಡುಕಿ ಹುಡುಕಿ ನಿರಾಶರಾದದ್ದು ಓದುವಾಗ ನಮಗೂ  ನಿರಾಶೆಯಾಗುತ್ತದೆ. ಜರ್ಮನಿಯಿಂದ ಮುಂದೆ ಲಂಡನ್ನಿಗೆ ಪ್ರವಾಸಿಸಿದ ಲೇಖಕರು ಅಲ್ಲಿಯ ಇಡಿಯಾದ ಸಮೃದ್ಧತೆಯನ್ನು ಕಂಡು ಸಂತಸಪಟ್ಟಿದ್ದು ತಿಳಿದು ಬರುತ್ತದೆ.

ನಾಗತಿಹಳ್ಳಿ ಚಂದ್ರಶೇಖರ ಅವರ ‘ಅಯನ’ ಪ್ರವಾಸ ಕಥನದಲ್ಲಿ ಹೆಚ್ಚಾಗಿ ಫ್ರಾನ್ಸ್ ದೇಶದ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ಅವರೊಬ್ಬ ಮೇಷ್ಟ್ರು ಆಗಿದ್ದುದರಿಂದ ಸಹಜವಾಗಿಯೇ ಅವರು ಆ ದೇಶದ ಸಾಮಾಜಿಕ, ಸಾಹಿತ್ಯಕ, ಸಾಂಸ್ಕೃತಿಕ ಬಗೆಗೆ ವಿವರವಾಗಿ ತಿಳಿಸಿಕೊಡುವಲ್ಲಿ ಸಂತಸಪಟ್ಟಿದ್ಧಾರೆ. ಜೊತೆಗೆ ನಮ್ಮ ದೇಶದ ಸಮಸ್ಯೆಗಳನ್ನು  ಅಲ್ಲಲ್ಲಿ ಲೌಲನಿಕವಾಗಿ ಚರ್ಚಿಸುತ್ತ ಬೇಸರವೂ ಪಟ್ಟುಕೊಂಡಿರುವರು. (ಹೊರದೇಶಗಳಲ್ಲಿ ಅಡ್ಡಾಡುವಾಗ ಈ ತರಹದ ಅನುಭವ ಅನಿಸಿಕೆಗಳು ಎಲ್ಲರಿಗೂ ಅಗಿರುವುದು ಸಹಜವೇ, ಕೆಲವರು ಹೆಚ್ಚು ಕೂಗಾಡಿಕೊಂಡಿದ್ಧಾರೆ. ಇನ್ನೂ ಕೆಲವರು ಅವನ್ನೆಲ್ಲ ಬದಿಗಿಟ್ಟು ಸಂತೋಷವಾಗಿ ನೆಮ್ಮದಿಯಾಗಿಯೂ ಅಡ್ಡಾಡಿ ಬಂದಿದ್ಧಾರೆ. ಅನೇಕ ಪುಸ್ತಕಗಳಲ್ಲಿ ಈ ತರಹದ ಲೇಖಕರ ಅನುಭವಗಳು ಸಿಗುತ್ತವೆ) ನಾಗತೀಹಳ್ಳಿಯವರು ಈ ಸಂದರ್ಭದಲ್ಲಿಯೇ ಅಮೇರಿಕಾಕ್ಕೆ ಹೋಗಿಬಂದಿದ್ದರೂ ಇಲ್ಲಿ ಅಮೇರಿಕದ ಬಗೆಗೆ ಹೆಚ್ಚಿನದೇನೂ ತಿಳಿಸಿಲ್ಲ್ಪ ಇವರದೇ ಅಮೇರಿಕಾ ! ಅಮೇರಿಕಾ, ಪ್ರವಾಸಕಥನದಲ್ಲಿ ಅನೇಕ ವಿಷಯಗಳನ್ನು ತಿಳಿದುಕೊಳ್ಳಬಹುದು ಇದು ಸಿನೇಮಾ ಕೂಡಾ ಆಗಿ ಬಹಳ ಮೆಚ್ಚುಗೆ ಪಡೆಯಿತು.

ಅಶಾದೇವಿ ನೂಲಾರವರ ಪ್ರವಾಸ ಕೃತಿ ‘ನನ್ನ ಪ್ರವಾಸ ಕಥನ’ ಇವರು ಯೂರೋಪಿನ ಅನೇಕ ದೇಶಗಳನ್ನು ಸುತ್ತಾಡಿರುವರು. ಇದೊಂದು ಸಾಮೂಹಿಕ ಪ್ರವಾಸವಾಗಿರುವುದರಿಂದ ಕೆಲವೊಂದು ಮಿತಿಗಳಿದ್ದವು. ತಾವು ಬಯಸಿದಂತೆ ಮುಖ್ಯವಾದ ಇನ್ನೂ ಕೆಲವು ದೇಶಗಳನ್ನು ನೋಡಲಾಗಲಿಲ್ಲವೆಂದು ಹೇಳಿಕೊಂಡಿರುವರು. ಆದರೂ ತಾವು ನೋಡಿದ ದೇಶಗಳ ಬಗೆಗೆ ಸಾಮಾಜಿಕ. ಸಾಂಸ್ಕೃತಿಕವಾಗಿ ಅನೇಕ ವಿವರಣೆಗಳನ್ನು ಕೊಟ್ಟಿದ್ದಾರೆ

‘ಥೇಮ್ಸ್‌ನಿಂದ ಟೈಬರ್‌ವರೆಗೆ’ ಇದು ವೆಂಕಟೇಶ ಮಾಚಕನೂರರ ಪ್ರವಾಸ ಕಥನ. ಹದಿನೈದು ದಿನಗಳ ಒಂದು ಗುಂಪು ಪ್ರವಾಸದಲ್ಲಿ ಲಂಡನ್, ಪ್ಯಾರಿಸ್, ಬೆಲ್ಜಿಯಂ, ರೋಂ, ದುಬೈ ಸುತ್ತಾಡಿಕೊಂಡು ಬಂದಿದ್ಧಾರೆ. ಇದು ಕೇವಲ
ಸುತ್ತಾಟವಾಗದೆ, ಯುರೋಪ ದೇಶಗಳ ಅಭಿವೃದ್ಧಿ ಕಂಡು ನಮ್ಮ ದೇಶ ಎಂದು ಯಾವಾಗ ಆ ಹಂತ  ತಲುಪುವುದೆಂದು ಬೇಸರ ವಕ್ತಪಡಿಸಿರುವರು. ಜೊತೆಗೆ ಇಂದಿನ ರಾಜಕೀಯತ್ವ, ಶಕ್ತ ಪ್ರಾಮಾಣಿಕ ಮುಂದಾಳತ್ವ ತಳಮಟ್ಟದಿಂದಲೇ ಸುರುವಾದರೆ ಏನೆಲ್ಲಿ ಅಭಿವೃದ್ಧಿ ಸಾಧ್ತವೆನ್ನುವರು.

ಪ್ರೋ.ಎಸ್‌.ರಾಮಸ್ವಾಮಿಯವರ ‘ಪ್ರಾನ್ಸಿನಲ್ಲಿ ಅಲೆಮಾರಿ’ ಕೃತಿ ಫ್ರಾನ್ಸಿನ ಬಗೆಗೆ ಅನೇಕ ವಿಷಯಗಳನ್ನು ತಿಳಿಸಿಕೊಡುತ್ತದೆ. ಯುರೋಪಿನ ಒಂವೇ ದೇಶ ಪ್ರಾನ್ಸ್‌ದಲ್ಲಿ ಅಲೆಮಾರಿಯೇ ಹಾಗೆ ಸುತ್ತಾಡಿರುವುದರಿರಿದ ಅವರು ಪ್ರತಿಯೊಂದು ವಿಷಯವನ್ನು ಅಳವಾಗಿಯೇ ತಿಳಿದುಕೊಳ್ಳಲು ಪ್ರಯತ್ನಿಸಿರುವರು. ಸಾಮಾಜಿಕ ಸಾಂಸ್ಕೃತಿಕ ಬದುಕನ್ನು ಸೂಕ್ಷ್ಮವಾಗಿ ಕಂಡಿದ್ದಾರೆ. ಪ್ರೆಂಜಿಗರ ಬಾಷಾಭಿಮಾನ. ಸಾಹಿತ್ಯಾಭಿಮಾನದ ಬಗೆಗೆ ಲೇಖಕರು ಬೆರಗಾಗಿರುವರು. ಅಲ್ಲಿಯ ಟ್ಯಾಕ್ಸಿ ಡ್ರೈವರ್ ಕೂಡಾ  ಪುಸ್ತಕ ಓದುಗಾರನಾಗಿರುತ್ತಾನಂತೆ. ವೃತ್ತ ಪತ್ರಿಕೆಗೆಳಿಗಿಂತ ಕ್ಲಾಸಿಕ್ ಕೃತಿಗಳನ್ನು ಓದುವ ಅವರ ಪುಸ್ತಕ ಪ್ರೀತಿಗೆ ನಾವೂ ಬೆರಗಾಗುತ್ತೇವೆ.

ಅಂದನೂರು ಶೋಭ ಅವರ ‘ಯುರೋಪಿನಲ್ಲಿ ಒಂದು ಸುತ್ತು’ ಪ್ರವಾಸ ಕಥನದಲ್ಲಿ ಇವರು ಅನೇಕ ದೇಶಗಳಲ್ಲಿ ಸುತ್ತಾಡಿರುವುದು ತಿಳಿದುಬರುತ್ತದೆ. ಪ್ರತಿ ದೇಶಗಳ ಬಗೆಗೆ ವಿವರಣಾತ್ಮಕ ಪರಿಚಯ ನಮಗಾಗುತ್ತವೆ ಅಲ್ಲಲ್ಲಿಯ ಸಂಸ್ಕೃತಿ. ವೇಷಭೂಷಣಗಳಿಂದ ಹಿಡಿದು ದಾರ್ಮಿಕ. ರಾಜಕೀಯ, ಇತಿಹಾಸ, ಶಿಲ್ಪ ಚಿತ್ರಕಲೆಗಳು, ಚರ್ಚುಗಳು, ಪ್ರವಾಸೋದ್ಯಮದ  ಮುಂತಾದವುಗಳ ಬಗೆಗೆ ಸುಂದರವಾಗಿ ತಿಳಿಸಿರುವರು ಯುರೋಪಿಗೆ ಹೋಗುವ ಪ್ರವಾಸಿಗರು ಅಲ್ಲಿಯ ಅನೇಕ ಮಾಹಿತಿಗಾಗಿ ಈ ಕೃತಿ ಓದಿಕೊಂಡು ಹೋದರೆ ತುಂಬಾ ಅನುಕೂಲವಾಗುತ್ತದೆ.

ಜರ್ಮನಿಗೆ ಹೋಗಿ ಬಂದ ಸುಛಾಷಿಣಿ ಅವರು ‘ಜರ್ಮನಿಯ ಒಡಲಲ್ಲಿ’ ಕೃತಿಯಲ್ಲಿ, ಜರ್ಮನ್ ದೇಶ ಹಲವು ವಿಶ್ವವಿಖ್ಯಾತರನ್ನು ಪಡದ ಹೆಮ್ಮೆಯ ತಾಣವೂ ಹೌದು ಎಂದಿದ್ಧಾರೆ. ಹದಿನೈದು ಹದಿನಾರನೆಯ ಶತಮಾನದಲ್ಲಿ ಪೋಪ್‌ಗಳ ನಿರಂಕಂಶ ಪ್ರಭುತ್ವವನ್ನು ಪ್ರಶ್ನಿಸಿ ವಿಚಾರಗಳನ್ನು ಮಂಡಿಸಿದ ಮಾರ್ಟಿನ್‌ಲೂಥರ್, ಹತ್ತೊಂಬತ್ತನೆಯ ಶತಮಾನದಲ್ಲಿ ಯುರೊಪಿನ ಮೊದಲ ರಾಜಕೀಯ ಮುತ್ಸರ್ದಿ ಅಟೋವಾನ್ ಬಿಸ್ಮಾರ್ಕ್, ಹತ್ತೊಂಬತ್ತು ಇಪ್ತತ್ತನೆಯ ಶತಮಾನದ ಪ್ರಖ್ಯಾತ ಭೌತ ಶಾಸ್ತ್ರಜ್ಞ ಆಲ್ಬರ್ಟ್ ಐನ್‌ಸ್ಟೀನ್ ಮುಂತಾದ ಖ್ಯಾತನಾಮರ ಸಾದನೆಗಳ ನಡುವೆಯೂ ಹಿಟ್ಲರನ ನಾಜಿ ಪಕ್ಷದ ದುರಾಡಳಿತ ಕಪ್ಪು ಕಲೆಯಾಗಿ ಉಳಿದಿದೆ ಎಂದಿದ್ದಾರೆ. ಹಿಟ್ಲರ್‌ನ ನಾಜಿ ಪಕ್ಷ ಸೆರೆಯಾಳುಗಳನ್ನು ಹಿಂಸಿಸಿ ಕೊಂದ ತಾಣಕ್ಕೆ (ಕಾನ್ಸೆಂಟ್ರೇಶನ್ ಕ್ಯಾಂಪ್) ಭೇಟಿ ನೀಡಿದ್ದಾರೆ. ಅಂದು ಸೆರೆಯವಳುಗಳ ಕ್ರೂರ ಹತ್ಯೆಗೆ ಬಳಸುವ ಕೊಕ್ಕೆ ಇರುವ ತಂತಿಯ ಬೇಲಿಗಳು. ಶವದ ಬಲೆ, ಅನಿಲ ಕೊಠಡಿಗಳು ಕಂಡು ದಿಗ್ಭ್ರಾಂತರಾಗಿದ್ಧಾರೆ. ಸುಮಾರು ಅರವತ್ತು ಲಕ್ಷ ಯುಹೂದಿಗಳ ಮಾರಣ ಹೋಮ ಇಲ್ಲಿ ಆಗಿದೆ. ಇಲ್ಲಿ ನಡೆದ ಹಿಂಸಾಕೃತ್ಯಗಳಿಂದ ಬದುಕುಳಿದ ಕೆಲವರು ತಮ್ಮ ಜೀವನ ಚರಿತ್ರೆಗಳನ್ನು ಬರೆದು ಅನುಭವಗಳನ್ನು ಹಂಚಿಕೊಂಡಿದ್ದಾರೆ. “ಅನ್‌ನೋನ್ ಡೈರಿ ಅಫ್ ಲಾಡ್ಸ್ ಗೆಟೋ” ಎಂಬ ಒಂದು ಗಮನಾರ್ಹ ಕೃತಿಯ ಬಗೆಗೆ ಸುಭಾಷಿಣಿಯವರು ಅದರಲ್ಲಿಯ ಕೆಲವು ಸಂದರ್ಭಗಳನ್ನು ತಮ್ಮ ಕೃತಿಯಲ್ಲಿ ಹೀಗೆ ಹಿಡಿದಿಟ್ಟಿದ್ದಾರೆ.

“ನಾನು ಈ ವಾರ ಒಂದು ತಪ್ಪನ್ನು ಎಸಗಿದೆ. ಇದು ನಮ್ಮನ್ನು ಎಂತಹ ಅಮಾನವೀಯತೆಯ ಮಟ್ಟಕ್ಕೆ ಇಳಿಸಲಾಗಿದೆ ಎಂಬುದಕ್ಕೆ ನಿದರ್ಶನವಾಗಬಹುದು”. ನನ್ನ ರೊಟ್ಟಯನ್ನು ಮೂರು ದಿನಗಳ ಅವಧಿಯಲ್ಲಿ ಅಂದರೆ ಭಾನುವಾರ ಮುಗಿಸಿದ್ದೆ. ಈಗ ಮುಂದಿನ ಶನಿವಾರವೇ ನನ್ನ ಹೊಸ ರೊಟ್ಟಿಯ ತುಂಡಿಗಾಗಿ ಕಾಯಬೇಕಾಗಿತ್ತು. ಇಲ್ಲಿ ಒಂದು ವಾರಕ್ಕೆಂದು ಮೂವತ್ಮೂರು ಔನ್ಸ್‌ ರೊಟ್ಟಿ ನೀಡಲಾಗುತ್ತೆ. ನನಗೆ ವಿಪರೀತ ಹಸಿವು ಕಾಡುತ್ತಿತ್ತು. ಅಗಾಗ ಹೋಗಿ  ಕೇಳುವವರಿಗೆ ಸೌಟಿನಲ್ಲಿ ನೀಡಲಾಗುವ ಸೂಪ್ (ಸಾರು) ನ್ನೇ ನಾನು ಅವಲಂಬಿಸಿದ್ದೆ. ಇದು ಮೂರು ಆಲೂಗಡ್ಡೆ ಚೂರುಗಳು ಮತ್ತು ಸ್ವಲ್ಪ ಹಿಟ್ಟನ್ನು ಒಳಗೊಂಡಿದೆ. ಸೋಮವಾರ ಬೆಳಿಗ್ಗೆ ನಾನು ಖಿನ್ನನಾಗಿ ನನ್ನ ಹಾಸಿಗೆಯಲ್ಲಿ ಬಿದ್ದುಕೊಂಡಿದ್ದಾಗ ಅಲ್ಲಿ ನನ್ನ ಪ್ರಿಯ ತಂಗಿಯ ರೊಟ್ಟಿಯ ಚೂರು ಇರುವುದು ಕಂಡಿತ್ತು. ನಾನು ನನ್ನ ಪ್ರಲೋಭನೆಗಳನ್ನು ಹತ್ತಿಕ್ಕಿಕೊಳ್ಳಲಾಗದೆ ಗಬಗಬನೆ ಅದನ್ನು ಪೂರ್ತಿ ತಿಂದೆ. ನನ್ನ ಆತ್ಮ ಸಾಕ್ಷಿಯ ತೀವ್ರ ಪರಿತಾಪ ನನ್ನನ್ನು ಕೊರೆಯುತ್ತಿದ್ದಕ್ಕಿಂತ ಹೆಚ್ಚಾಗಿ ನನ್ನ ಪುಟ್ಟ ತಂಗಿ ಮುಂದಿನ ಐದು ದಿನ ಏನು ತಿನ್ನುವಳೆಂಬ ಕಾಳಜಿ ಕಾಡುತ್ತಿತ್ತು. ನಾನೊಬ್ದ ತಿರಸ್ಕರಣೀಯ ಅಸಹಾಯಕ ಅಪರಾಧಿಯೆಂದೆನಿಸುತ್ತಿತ್ತು. ನನ್ನನ್ನು ರಕ್ಷಿಸಿಕೊಳ್ಳಲು ನಾನು ಜನರಿಗೆ ಹೇಳಿದ್ದೆ. ‘ಇದನ್ನು ಒಬ್ದ ಅಜಾಗರೂಕ ಮತ್ತು ನಿಷ್ಕರುಣಿ ಕಳ್ಳ ಕದ್ಧಿರಬೇಕು’ ಎಂದು. ನಾನು ಆ ಕಲ್ಪನೆಯ  ಕಳ್ಳನ ಮೇಲೆ ಶಾಪಗಳನ್ನು ಮತ್ತು ಖಂಡನೆಗಳನ್ನು ಎರಚಿದ್ದೆ.

“ನನಗೇನಾದರೂ ಅತ ಸಿಕ್ಕರೆ ನನ್ನ ಕೈಯಾರೆ ಅವನಿಗೆ ನೇಣ ಹಾಕುತ್ತೇನೆ’ ಎಂದಿದ್ದೆ ಆವೇಶದಿಂದ, ಎಂದು ಬರೆಯುತ್ತಾನೆ”. ಅವನ ಭಾವ ಬರವಣಿಗೆಯನ್ನು ಓದುವಾಗ ಕಣ್ಣುಗಳು ಒದ್ದೆಯಾಗುತ್ತವೆ ಎನ್ನುತ್ತಾರೆ ಲೇಖಕಿ.

ಯಕ್ಷಿಣಿ ಕತೆಗಳ ಹರಿಕಾರರೆಂದು ಕರೆಯಲಾಗುವ ಗ್ರೀಮ್ ಸೋದರರ ಊರಾದ ಕಾಸಲ್‌ನಲ್ಲಿ ಅಡ್ಡಾಡುವಾಗ ಅವರು ಬರೆದ ಸ್ಲೀಪಿಂಗ್ ಬ್ಯೂಟಿ, ಸಿಂಡ್ರೆಲ್ಲಾ ಮುಂತಾದ ಕಧೆಗಳನ್ನು ಬರೆದು ಜಗತ್ಪ್ರಸಿದ್ಧರಾದವರನ್ನು ನೆನಪಿಸಿಕೊಂಡೆ
ಎನ್ನುತ್ತ ನಮಗೂ ಮತ್ತೊಮ್ಮೆ ನೆನಪಿಸಿಕೊಡುತ್ತ ವಿಸ್ಮಯರಾಗಿದ್ದಾರೆ ಸುಭಾಷಿಣಿ.

ನೇಮಿಚಂದ್ರ ಅವರ ‘ಒಂದು ಕನಸಿನ ಪಯಣ’ ಇದಲ್ಲೋ ಊರು ಸುತ್ತಿ ಬಂದ ಪ್ರವಾಸ ಕಥನವಾಗಿ ಮುಗಿಯದೆ, ಧಾರಾಳವಾಗಿ ಉಪಕಥೆಗಳನ್ನೂ ಒಳಗೊಂಡಿದೆ. ಅದು, ಸ್ತ್ರೀವಾದಿ ಲೇಖಕಿ ಆಫ್ರಾಳ ಕಥೆಯಾಗಿರಬಹುದು,  ವಿಜ್ಞಾನಿ
ರೋಸ್‌ಲಿಂಡ್‌ ಕತೆ, ಖಗೋಳ ಶಾಸ್ತ್ರಜ್ಞೆ ಕ್ಯಾರೋಲಿನ್‌ ಹರ್ಷಲ್ ಕತೆಯಾಗಿರಬಹುದು. ದಟ್ಟ ಏಕಾಂಗಿತನದ ಬ್ರಾಂಟೆಯ ಬೋಡು ಬೆಟ್ಟಗಳಾಗಿರಬಹುದು, ಐನ್‌ಸ್ಟೈನ್‌ರ ಪತ್ನಿಯ ವಿವರಗಳಾಗಿರಬಹುದು. ಆನ್ ಪ್ರಾಂಕ್‌ಳ ಕತೆಯಾಗಿರಬಹುದು, ಎಲ್ಲವೂ ರೋಚಕವಾಗಿ ಹೃದಯ ಸ್ಪರ್ಶವಾಗುವಂತೆ ತಮ್ಮ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ಅವರ ಕುತೂಹಲದ ಮನಸ್ಸು ಯೂರೋಪಿನ ಅಕರ್ಷಕ ಸ್ಥಳಗಳನ್ನು ಅಷ್ಟಕ್ಕಷ್ಟೇ ಇಟ್ಟು ಕೊರೆವ ಚಳಿ ಮಳೆಯಲ್ಲಿ ಅಲೆದಾಡಿ ತಮಗೆ ಬೇಕೆಂದಿದ್ದೆಲ್ಲ ನೋಡಿ ಸಂತೋಷಪಟ್ಟಿದ್ದಾರೆ.

‘ಪ್ಯಾರಿಸ್ಪಿನಿಂದ ಪ್ರೇಯಸಿಗೆ’ ನವರತ್ನರಾಂ ರವರ ಪ್ರವಾಸ ಕಥನ ಪ್ರೇಗ್‌ ಜನಜೀನವ, ಅಲ್ಲಿಯ ಐಶಾರಾಮಿ ಬದುಕು ಮುಂತಾದುವುಗಳ ಬಗೆಗೆ ತಮ್ಮ ಹೆಂಡತಿಗೆ ಪತ್ರ ಮುಖಾಂತರ ತಿಳಿಸಿಕೊಟ್ಟಿದ್ದಾರೆ. ಸುಮಾರು ಇಪ್ಪತ್ತು ಪತ್ರಗಳಿವೆ.
ಇವುಗಳಲ್ಲಿ ಅಲ್ಲಿ ತಾವು ಅನುಭವಿಸಿದ ಭಾಷಾ ತೊಂದರೆ, ಪ್ರೆಂಚ್ ಜನರ ಶೃಂಗಾರ ವಿಲಾಸ ಜೀವನಗಳ ಶೈಲಿ. ಪ್ರೇಕ್ಷಣೀಯ ಸ್ಥಳಗಳ ಬಗೆಗಿನ ವಿವರ, ಅಲ್ಲಿಯ ಬಾರ್‌ಗಳು, ನೃತ್ಯಗಳ ಪರಿಚಯ, ಅಲ್ಲಿಯ ಬಡತನದ ಸೂಕ್ಷ್ಮ ಒಳನೋಟಗಳು ಹೀಗೆ ಹತ್ತು ಹಲವಾರು ಸಂಗತಿಗಳು ಪತ್ರಗಳಲ್ಲಿ ಬರೆಯುತ್ತಾ ಹೋಗಿದ್ಧಾರೆ. ಇವುಗಳೆಲ್ಲದರ ಸಂಗ್ರಹ ರೂಪವೇ ಈ ಒಂದು ಪ್ರವಾಸ ಕಥನ.

ಟಿ.ಕೆ. ರಾಮ್‌ರಾಮ್ ಅವರ ‘ಗೋಳದ ಮೇಲೊಂದು ಸುತ್ತು’ 35 ವರ್ಷಗಳಷ್ಟು ಮೊದಲೇ (1971) ಯುರೋಪಿನ ಸಮಗ್ರವಾದ ವಿವರಗಳನ್ನು ತಿಳಿಸಿಕೊಟ್ಟಿದ್ದಾರೆ. ಅವರೊಬ್ದ ಒಳ್ಳೇ ಕಾದರಿಬರಿಕಾರರಾಗಿರುವುದರಿಂದ ಅವರ
ಬರವಣಿಗೆ ಶೈಲಿ ಈ ಪ್ರವಾಸಕಥನದಲ್ಲಿಯೂ ಕೂಡಾ ಆಕರ್ಷಕವಾಗಿಯೇ ಮೂಡಿ ಬಂದಿದೆ. ಅಥೆನ್ಸ್‌ನ ಅಕ್ರೋಪೋಲಿಸ್, ರೋಂನ ಭವ್ಯ ಕಲಾಕೃತಿಗಳು, ನೇಪಲ್ಸ್‌ನ ರಮ್ಯತೆ, ವೆನಿಸ್‌ನ ಜಲಸೌಂದರ್ಯ, ಪ್ಯಾರಿಸ್ಸಿನ ಐಫಲ್ ಟಾವರ್‌ಗಳ ಬಗೆಗೆ ವಿವರಣೆಗಳು ಇವೆ. ಮೊದಲು ಏಷ್ಯನ್ ರಾಷ್ಟ್ರಗಳಿಗೆ ಭೇಟಿ ಇತ್ತು ನಂತರ ಯುರೋಪ ಅಮೇರಿಕಗಳನ್ನು ನೋಡುವುದು ಉಚಿತ ಎನ್ನುತ್ತಾರೆ. ಆ ರಾಷ್ಟ್ರಗಳ ಕಾರ್ಯಸಾಧನೆ, ಮುನ್ನಡೆ, ಐಶ್ವರ್ಯ,  ವೇಗಗಳನ್ನು ನೋಡಬಹುದು ಎನ್ನುವರು. ಪಶ್ಚಿಮ ರಾಷ್ಟ್ರಗಳ ಅಶ್ಲೀಲ ಪ್ರಪಂಚವನ್ನು ಸಂಕ್ಷಿಪ್ತವಾಗಿ ತಿಳಿಸಿ ಆ ದೋಷಗಳು ಅನುದಿನದ ಕಾರ್ಯಪಟ್ಟಿಯ ವಿಷಯಗಳಂತೆ ಆಗಿ ಹೋಗಿವೆ. ಅವುಗಳಿಂದ ಅ ಜನತೆ  ವಿಚಲಿತರಾಗುವುದಿಲ್ಲ. ರಾತ್ರಿಯ ಕ್ಲಬ್‌ಗಳು ಅ ಜನರಿಗೆ ಜೀವನದ ಅವಿಭಾಜ್ಯ ಅಂಗಗಳಂತೆ ಅವುಗಳಿಲ್ಲದೆ ಅವರ ಹಣಕ್ಕೆ ದಾರಿಯಿಲ್ಲ. ಅದಕ್ಕೆ ಮೀಸಲಾದ ಹಣದ ವೆಚ್ಚವನ್ನು ಭರಿಸುವ ಶಕ್ತಿಯೂ ಅವರಿಗಿದೆ. ಈ ದೋಷವನ್ನು ಲೇಪಿಸಿಕೊಂಡಿರುವ ಆ ಜನತೆಯಲ್ಲಿ ದೇಶಾಭಿಮಾನ, ಸ್ಥಾಭಿಮಾನ ಹಾಗೂ ಸಾಂಸ್ಕೃತಿಕ ಜಾಗೃತಿ ಇವುಗಳಿಗೆ ಕೊರತೆಯಿಲ್ಲ. ಇದೇ ನಮಗೆ ಇಂದು ಅಗತ್ಯವಾದ ವಿ‍ಷಯ ಎಂದು ನಿರೂಪಿಸಿರುವರು.

‘ಹಾಲೆಂಡಿನಿಂದ ಲಂಡನ್‌ದರೆಗೆ’ ಇದು ಇಂದಿರಾ ಶಿವಣ್ಣ ಅವರ ಪ್ರವಾಸ ಕೃತಿ. ವಿದೇಶ ಪ್ರಯಾಣಕ್ಕೆ ನಮ್ಮ ಹತ್ತಿದ ಹಣ ಇದ್ದರೆ ಸಾಕು. ಪ್ರವಾಸೋದ್ಯಮದವರು ಏನೆಲ್ಲೆ ಸಹಾಯ ಮಾಡುತ್ತಾರೆ ಎನ್ನುವರು. 8-10 ವರ್ಷಗಳ ಮೊದಲು ಪ್ರವಾಸ ಸಾಹಿತಿಗಳು ಇಪ್ತತ್ತೈದೋ ಮೂವತ್ತೋ ಪುಟಗಳು ವಿದೇಶಕ್ಕೆ ಹೊರಡುವಾಗಿನ ತಮ್ಮ ಅನೇಕ ಗೋಳಾಟಗಳನ್ನೇ ತೋಡಿಕೊಂಡಿದ್ದಾರೆ. ಪಾಸ್‌ಪೋರ್ಟು, ವೀಸಾ. ಕರೆನ್ಸಿ, ಊಟ, ವಸತಿ, ಹೊರಡುವ ಸಂದರ್ಭಗಳು ಹೀಗೆ ಹೀಗೆ ಪಟ್ಟ ಪಾಡುಗಳನ್ನು ದಾಖಲಿಸಿ ಸುಸ್ತು ಹೊಡೆದಿದ್ದಾರೆ. ಅದರೆ ಈ ಶತಮಾನದ (21) ಮೊದಲು ಹಂತದಿಂದಲೇ ನಾವು ಗುರುತಿಸಿಕೊಳ್ಳುತ್ತಾ ಬಂದರೆ ಪ್ರವಾಸ ಪ್ರವಾಸೋದ್ಯಮದಲ್ಲಿ ಗಣನೀಯ ಸಾಧನೆ ಕಂಡುಬರುತ್ತದೆ. ಈಗ ವಿದೇಶಕ್ಕೆ ಹೋಗಿ ಬರುವದೆಂದರೆ ಪಕ್ಕದ ಊರಿಗೆ ಹೋಗಿ ಬಂದಷ್ಟೇ ಸಲೀಸಾಗಿದೆ. ಇಂದಿರಾ ಅವರು ಹೇಳಿದಂತೆ ಒಂದಿಷ್ಟು ಹಣ ಇರಬೇಕಷ್ಟೆ. ಇಲ್ಲಿ ಇವರು ಪ್ರವಾಸಿ ಸಂಸ್ಥೆಯ ಮೂಲಕ 18 ದಿನಗಳದ್ದು ಯುರೋಪಿಗೆ ಹೋಗಿ ಬಂದಿದ್ದಾರೆ. ಇಷ್ಟೇ ಅವಧಿಯಲ್ಲಿ ಯುರೋಪನ್ನು ದೀರ್ಘವಾಗಿ ಪರಿಚಯ ಮಾಡಿಕೊಡಲಿಕ್ಕೆ
ಸಾಧ್ಯವಿಲ್ಲವೆಂದು ಅವರು ಮೊದಲೇ ಒಪ್ಪಿಕೊಂಡಿದ್ದಾರೆ. ಪ್ರವಾಸಕ್ಕೆ ಹೊರಡುವ ಮೊದಲು ಯುರೋಪಿನ ಇತಿಹಾಸವನ್ನು ಚೆನ್ನಾಗಿ ಓದಿಕೊಂಡ ಇಂದಿರಾ ಅವರು ಆಯಾ ನಾಡುಗಳ ಭೌಗೋಳಿಕ, ರಾಜಕೀಯ, ಐತಿಹಾಸಿಕ ಪರಿಚಯವನ್ನು ವಿವರಣಾತ್ಮಕವಾಗಿ ಮಾಡಿಕೊಡುತ್ತಾ ಹೋಗಿದ್ದಾರೆ. ಸಾಮಾಜಿಕ ಪರಿಚಯದ (ಜನ ಜೀವನದ ರೀತಿ ನೀತಿಗಳು) ಕೊರತೆ ಇದರಲ್ಲಿ ಕಂಡು ಬಂದರೂ ಇತಿಹಾಸ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಕೃತಿ ಎನ್ನಬಹುದು. ಇದೊಂದು ವಿವರಣಾತ್ಮಕ ಪ್ರವಾಸ ಕಥನ.

ತ್ರಿವೇಣಿ ಶಿವಕುಮಾರ್ ಅವರ ‘ನಿಸರ್ಗ ಪ್ರಿಯರ ನಾಡುಗಳಲ್ಲಿ’ ಪ್ರವಾಸ ಕಥನದಲ್ಲಿ ಯುರೋಪಿನ ಅನೇಕ ದೇಶಗಳನ್ನು ತಮ್ಮ ಯಜಮಾನರ ಜೊತೆಗೆ ಮತ್ತು ಭಾರತದ ಇತರ ಸ್ನೇಹಿತರೊಂದಿಗೆ ಸಂಚರಿಸಿ ತಮ್ಮ ಹಲವು
ಅನುಭವಗಳನ್ನು ದಾಖಲಿಸಿದ್ದಾರೆ. ಸ್ಥಿಟ್ಝರ್‌ಲ್ಯಾಂಡ್, ಇಟಲಿ, ಜರ್ಮನಿ. ಹಾಲೆಂಡ್, ಫ್ರಾನ್ಸ್, ಇಂಗ್ಗೆಂಡುಗಳಲ್ಲಿ  ಸುತ್ತಾಡಿ ಅನೇಕ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾ ಹೇಳುವ ರೀತಿ ಅಪ್ತವಾಗುತ್ತ ಹೋಗುತ್ತದೆ.

ಮೀನಾ ಮೈಸೂರದ ‘ಎತ್ತಣಿಂದೆತ್ತ’ ಪ್ರವಾಸ ಕಥನ ಉಳಿದೆಲ್ಲ ಪ್ರವಾಸ ಕಥನಕಾರರಕ್ಕೆಂತ ಭಿನ್ನವಾಗಿ ಕಾಣುತ್ತದೆ. ನಮ್ಮ ಪ್ರವಾಸಿ ಲೇಖಕರು ಹೆಚ್ಚಾಗಿ ಯುರೋಪಿನ ದೊಡ್ಡ ದೊಡ್ಡ್ದ ನಗರಗಳಲ್ಲಿ ಅಡ್ಡಾಡಿ ವೈಭವೊಪಿತ ಬದುಕನ್ನು
ಕಲೆಯನ್ನು ಕಂಡು ಹಾಡಿ ಹೊಗಳಿದ್ದೇ ಹೆಚ್ಚು. ಅದರೆ ಗ್ರಾಮೀಣ ಬದುಕಿನ ಬಗೆಗೆ ಎಳೆಎಳೆಯಾಗಿ ಒಳಹೊಕ್ಕು ಮೀನಾ ಅವರು ಕಂಡಂತೆ ಬೇರೆಯವರು ಕಂಡದ್ದು ವಿರಳ. ಮೀನಾಳ ಪ್ರಾನ್ಸ್  ಗಂಡ ಫ್ರಾನ್ಸಿನೊಡನೆ ಒಮ್ಮೆ ಹಾಗೂ ಮೈಸೂರಿನಲ್ಲಿ ಪರಿಚಯವಾದ ಸೇವಾಸಂಸ್ಥೆ ಕಟ್ಟಿದ ಪ್ಯಾರಿಸ್ಸಿನ ಗೆಳತಿ ಜೋಸಿಯೊಡನೆ ಒಮ್ಮೆ ಹೀಗೆ ಎರಡು ಸಲ ಪ್ರಾನ್ಸ್‌ಗೆ ಭೇಟಿ ನೀಡಿ ಬಂದು ತಮ್ಮ ಅನುಭವಗಳನ್ನು ಬರೆದಿದ್ಧಾರೆ. ಎರಡೂ ಸಲ ಪ್ರಾನ್ಸ್‌ನಲ್ಲಿ ತಿಂಗಳುಗಟ್ಟಲೇ
ಇದ್ದುದರಿಂದ ಅನೇಕ ವಿಷಯಗಳನ್ನು ತಿಳಿದುಕೊಳ್ಳಲಿಕ್ಕೆ ಸಮಯ ಸಿಕ್ಕಿದೆ ಒಬ್ದರೇ ರೈಲಿನಿಂದ ಅನೇಕ ಊರುಗಳನ್ನು ಸುತ್ತಿದ್ದಾರೆ. ಮೀನಾ ಕವಯಿತ್ರೆ ಆದುದರಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಅಡ್ಡಾಡುವಾಗ ನಿಸರ್ಗ ಚಿತ್ರಗಳನ್ನು ಚೆನ್ನಾಗಿ ದಾಖಲಿಸಿದ್ದಾರೆ. ಇವರೂ ಹೆಚ್ಚಿನ ಸಮಯ ಪ್ರಾನ್ಸ್‌ದ ಗ್ರಾಮದಲ್ಲಿಯೇ (ಗಂಡನ ಮನೆ) ಕಳೆದಿರುವರು. ಅಲ್ಲಿಯ ಸೇವಾ ಸಂಸ್ಥೆಗಳ ಕಾರ್ಯ ನಿರ್ವಹಿಸುವಿಕೆಯ ಬಗ್ಗೆ ಹೇಳುತ್ತಾ ಹಣ ಸಂಗ್ರಹಿಸಿ ದೇಶ ವಿದೇಶಗಳಲ್ಲಿರುವ ಬಡಜನರಿಗೆ ಬಡ ಸಂಘ ಸಂಸ್ಥೆಗಳ ಏಳ್ಗೆಗೆ ಸಹಕರಿಸುತ್ತಾರೆ ಎನ್ನುತ್ತಾರೆ. ಉತ್ತರ ಪ್ರಾನ್ಸ್‌ದ ವೃದ್ಧರ ನಿತ್ಯೋತ್ಸವದ ಬಗೆಗೆ, ರಗ್ಬಿ, ಪುಟ್ಬಾಲ್ ಆಟಗಳ ಬಗೆಗೆ, ಕೋಟೆಗಳ ಬಗೆಗೆ, ನೀಟಾದ ತಿಪ್ಪೆಗುಂಡಿಗಳ ಬಗೆಗೆ, ನೀಟಾದ ಡ್ರೆಸ್‌ಗಳಲ್ಲಿ ಶವಸಂಸ್ಕಾರದಲ್ಲಿ ಪಾಲ್ಗೊಳ್ಳುವಿಕೆಯ ಬಗೆಗೆ, ಅಲ್ಲಿಯವರ ಕುದುರೆ ಮಾಂಸದ ಪ್ರೀಯತೆಯ ಬಗೆಗೆ ಹೀಗೆ ಅನೇಕ ವಿಷಯಗಳು ನಮಗಿಲ್ಲಿ ಕಾಣಸಿಗುತ್ತವೆ. ಪ್ರವಾಸ ಕಥನದ ಕೊನೆಯ ಕೆಲವು ಪಟಗಳಲ್ಲಿ ಪ್ಯಾರಿಸ್ಸ್ ನಗರದ ಕೆಲವು ವಿವರಣೆಗಳಿವೆ.

ಕೊನೆಗೆ ಅವರ ಗೆಳತಿ ಜೋಸಿ ಕ್ಯಾನ್ಸರ್‌ನಿಂದ ತೀರಿಕೊಂಡರಂತೆ. ಅವರು ಸ್ಥಾಪಿಸಿದ ಸೇವಾಸಂಸ್ಥೆ ಇಲ್ಲಿಯವರು (ಭಾರತೀಯರ) ಹೇಗೆ ದುರುಪಯೋಗ ಪಡಿಸಿಕೊಂಡು ಅದನ್ನು ಹಾಳುಗೆಡವಿದರೆನ್ನುವುದು ಬಹಳ ವಿಷಾದದಿಂದ
ಹೇಳಿರುವರು.

ಯುರೋಪಿನ ಸಾಂಸ್ಕೃತಿಕ, ಐತಿಹಾಸಿಕ ಹಿನ್ನೆಲೆಗಳಲ್ಲಿ ಅನೇಕ ಕೃತಿಗಳು ನಮ್ಮ ಲೇಖಕರು ರಚಿಸಿದ್ಧಾರೆ. ಕನ್ನಡ ಪ್ರವಾಸ ಸಾಹಿತ್ಯದ ಪ್ರಭಾವವು ಯುರೋಪಿನ ಇಂಗ್ರಿಷ್ ಸಾಹಿತ್ಯದ ಕನ್ನಡ ಪ್ರಬಾವದಿಂದಲೇ ನಮಗಾದದ್ದು.

****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೆಳದಿ ಚೆನ್ನಮ್ಮಳ ಕವಲೇ ದುರ್ಗಕ್ಕೆ
Next post ಬುಡು ಬುಡುಕಿ ಹಾಡು

ಸಣ್ಣ ಕತೆ

 • ಮಾದಿತನ

  ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

 • ಕೇರೀಜಂ…

  ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

 • ಮೌನವು ಮುದ್ದಿಗಾಗಿ!

  ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

 • ಅವರು ನಮ್ಮವರಲ್ಲ

  ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

 • ಮನೆಮನೆಯ ಸಮಾಚಾರ

  ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

cheap jordans|wholesale air max|wholesale jordans|wholesale jewelry|wholesale jerseys