ಆರಬ್ ಬರಹಗಾರರು – ಕಲಾಕಾರರು

ಸೌದಿಯ ಬರಹಗಾರರು ಬಹಳ ಕಡಿಮೆ, ಸೌದಿಯ ಅಥವಾ ಅರಬದೇಶಗಳ ಕುರಿತಾಗಿ ಬರೆದವರೆಲ್ಲ ವಿದೇಶಿಗರೇ ಹೆಚ್ಚು. ಹತ್ತೊಂಭತ್ತನೇ ಶತಕದ ಕೊನೆಯಲ್ಲಿದ್ದ ಉಸ್ಮಾನ್-ಇಬ್ನಬಷೀರ ಬಹುಶಃ ಅತಿಮುಖ್ಯ ಸೌದಿ ಲೇಖಕ. ಇತ್ತೀಚಿನ ಬರಹ ಗಾರರಲ್ಲಿ ಕೂಡಾ ಅನುವಾದದವರೇ ಹೆಚ್ಚು. ಸೌದಿ ಅರೇಬಿಯಕ್ಕಿಂತ ಸುತ್ತಮುತ್ತಲಿನ ರಾಷ್ಟ್ರಗಳಾದ ಇಜಿಪ್ತ, ಲೆಬನಾನ್, ಸುಡಾನ್, ಸಿರಿಯಾ, ಇರಾಕ್. ಇರಾನ್ ಬರಹಗಾರರೇ ಹೆಸರು ಮಾಡಿದ್ದಾರೆ. ಇವರ ಕಥೆ, ಕವನಗಳ ಅನುವಾದ ಸ್ಥಳೀಯ ಕೆಲವು ಪೇಪರು-ಮ್ಯಾಗಝಿನ್‌ಗಳಲ್ಲಿ ನೋಡುತ್ತೇವೆ. ಅಂತಹ ವಿಶೇಷತೆ ಏನೂ ಅನಿಸು ವದಿಲ್ಲ. ನಮ್ಮ ದೇಶದ ಎಲ್ಲ ಭಾಷೆಯ ಸಾಹಿತಿ ವಿದ್ವಾಂಸರ ಸಾಹಿತ್ಯಗಳ ಮುಂದೆ ಇಲ್ಲಿಯವೆಲ್ಲಾ  ಸುಮ್ಮನೆ ಅರಬ ದೇಶಗಳ ಸಾಹಿತಿಗಳ ಪರಿಚಯ ಏನು ಎಂದು ಕುತೂಹಲದಿಂದ ಅಲ್ಲಲ್ಲಿ ಪುಸ್ತಕಗಳನ್ನು ನೋಡುತ್ತಿದ್ದೆ ಅಷ್ಟೇ. ಸಾಮಾನ್ಯವಾಗಿ ಬರಹಗಾರರೆಲ್ಲ ಮೊದಲು ಕುರಾನಿನ ಪದ್ಯಗಳನ್ನು ಹಾಕಿ ಮೊದಲು ಸಾಲುಸುರು ಮಾಡಿ ಕೊನೆಗೆ ಕೂಡಾ ಕುರಾನಿನ ಪಂಕ್ತಿಗಳಿಂದಲೇ ಮುಕ್ತಾಯ ಮಾಡುತ್ತಾರೆನ್ನುವ ವಿಷಯವೊಂದು ಗೊತ್ತಾಯಿತು. ಅದರೆ ಒಳನಾಡಿನ ಅನಕ್ಷಸ್ಥರ ನಡುವೆ ಸಾಕಷ್ಟು ಜಾನಪದ ಸಾಹಿತ್ಯ ಪ್ರಚಲಿತವಿದೆ ಎಂದು 1985ರ ಎನ್‌ಸೈಕ್ಲೋ- ಪೀಡಿಯಾ ಬ್ರಿಟಾನಿಕಾ ಕೂಡ ದಾಖಲು ಮಾಡಿದೆ.

ಹಾಗೆಯೇ ಸಮಕಾಲೀನ ಅರಬಕಲಾಕಾರರ ವಿಷಯವಾಗಿ ಒಂದಿಷ್ಟು ಹೇಳಬೇಕೆಂದರೆ ಪಾಶ್ಚಾತ್ಯ ಶೈಲಿಗಳನ್ನು ತಮ್ಮದರಲ್ಲೂ ಅಳವಡಿಸಿಕೊಂಡರೂ ತಮ್ಮ ಇಸ್ಲಾಮಿಕ್ ತತ್ವದ ಹಿನ್ನೆಲೆಯಲ್ಲಿಯೇ ಕಲೆ ರಚಿಸಿರುವರು. ಕ್ರಿಯಾಶೀಲ ಕಲಾಕಾರರು ತಮ್ಮ ತಮ್ಮ ದೃಷ್ಟಿಕೋನದ ಹಿನ್ನೆಲೆಯಲ್ಲಿ ಎಲ್ಲೂ ಇಸ್ಲಾಮ್ ತತ್ವಕ್ಕೆ ಚ್ಯುತಿ ಬರದಂತೆ ನಡೆದುಕೊಂಡಿದ್ದಾರೆ ಅನ್ನೋದೇ ಒಂದು ವಿಶೇಷ.

ಸುಂದರ ಬರವಣಿಗೆಯೇ ಇವರ ಪ್ರಮುಖ ಕಲೆ. ಇಂಗ್ಲೀಷ್‌ನಲ್ಲಿ (Caligraphy) ಕೆಲಿಗ್ರಾಫಿ ಎನ್ನುವ ಹೆಸರಿನಿಂದ ಈ ಕಲೆ ಗುರುತಿಸಲ್ಪಟ್ಟಿದೆ. ಈ ಕೆಲಿಗ್ರಾಫಿ ವಿಧಾನ ಇಸ್ಲಾಮಿನ ಪ್ರಾಚೀನ ಸಂಪ್ರದಾಯದ ಪ್ರಕಾರವೇ ಮುನ್ನಡೆಯುತ್ತಿದೆ. ಇಂದಿಗೂ ಮುಂದುವರಿದಿದೆ. ಧಾರ್ಮಿಕ ಕೆಲವು ಪಂಕ್ತಿಗಳು (ಉಕ್ತಿಗಳನ್ನು) ಕಲಾಕಾರರ ಕೈಚಳಕದ ಬರವಣಿಗೆಯಲ್ಲಿ ವಿವಿಧ ವಿನ್ಯಾಸಗಳೊಂದಿಗೆ ಮೂಡಿ ಬಂದಿದೆ. ಇಸ್ಲಾಂ ಧರ್ಮದಲ್ಲಿ ಪ್ರಾಣಿ ಪಕ್ಷಿಗಳ ಮನುಷ್ಯರ ಚಿತ್ರಗಳು ಕಾಣಿಸುವದೇ ಇಲ್ಲ. ಅಂಥವಕ್ಕೆ ಅವಕಾಶವೇ ಇಲ್ಲ. ಇಲ್ಲಿಯ ಆರ್ಟ್ ಮ್ಯೂಸಿಯಂಗಳನ್ನು ನೋಡುವದೆಂದರೆ ಕೆಲಿಗ್ರಾಫಿಯ ಕಲೆ ನೋಡವದೆಂದರ್ಥ. ಮೊದ ಮೊದಲೆಲ್ಲ ಕಲ್ಲು ಅಥವಾ ಕಟ್ಟಣೆಯಲ್ಲಿ ಕೆತ್ತುತ್ತಿದ್ದರು. ಈಗಲೂ ಕೆತ್ತುತ್ತಾರೆ. ಅದರೆ ಇತ್ತೀಚಿನ ಕಲಾಕಾರರು ಇನ್ನೂ ಸುಂದರಗೊಳಿಸಲು ಬಟ್ಟೆಗಳ ಮೇಲೆ ಪಂಕ್ತಿಗಳನ್ನು ಬರೆದು ಅವಕ್ಕೆಲ್ಲ ಬಂಗಾರ ಅಥವಾ ಬೆಳ್ಳಿಯ ಝರಿಯಿಂದ ಎಂಬ್ರಾಯಿಡರಿ ಮಾಡುತ್ತಿದ್ದಾರೆ. ಪಾಶ್ಚಾತ್ಯರ ಕಲಾಕಾರರ ಪ್ರಭಾವದಿಂದ ಒಳ್ಳೆ ಆಕರ್ಷಕ ಬಣ್ಣಗಳನ್ನೂ ಹಚ್ಚುತ್ತಿದ್ದಾರೆ.

ಗೋಡಗೆ ಹಚ್ಚುವ ಈ ಉಕ್ತಿಪಂಕ್ತಿಗಳಂತೂ ಪೇಟೆಯಲ್ಲಿ ನಾನಾ ವಿಧವಾಗಿ ಇಟ್ಟದ್ದಾರೆ ಕಟ್ಟೆಗೆಗಳಲ್ಲಿ, ಸಂಗಮವರಿಗಳಲ್ಲಿ ತಾಮ್ರ ಹಿತ್ತಾಳೆಯ ಪಟ್ಟಿ ಅಥವಾ ಪ್ಲೇಟುಗಳಲ್ಲಿ ಅದರಂತೆ ಬಟ್ಟೆಗಳ ಮೇಲೆ, ರಟ್ಟಿನ ಮೇಲೆ ಸುಂದರವಾಗಿ ಬರೆದವುಗಳು ಸಾಕಷ್ಟು ಕಾಣುತ್ತವೆ. ಇಸ್ಲಾಂ ಧರ್ಮದ ಪ್ರತಿಯೊಬ್ಬರ ಮನೆಯ ಗೋಡೆಗಳ ಮೇಲೆ ಇಂತಹ ಉಕ್ತಿಗಳ ಪಟಗಳನ್ನು ಕಾಣುತ್ತೇವೆ.

ಮಧ್ಯಪೂರ್ವ ದೇಶಗಳಾದ ಇರಾಕ್‌ದ ದಿಯಾ ಅಲ್ ಅಜಾನಿ, ಸಿರಿಯಾದ ಝಯಾಸ್ ಅಕ್ರಾಸ್, ಇಜಿಪ್ತದ ಅಹಮ್ಮದ್‌ನವಾಬ್, ಹಾಗೆಯೆ ಮೊರೆಕೊ, ಅಲ್ಜೇರಿಯಾ, ಲೆಬನಾನ್‌ದ ಪ್ರಸಿದ್ದ ಹೆಸರುವಾಸಿಯಾದ ಸಮಕಾಲೀನ ಕಲಾಕಾರರೆಲ್ಲ ಈ ಕೆಲಿಗ್ರಾಫಿ ಕಲೆಯಲ್ಲಿ ಕ್ರಾಂತಿಯೆ ಮಾಡಿದ್ದಾರೆ. ದೇಶ ವಿದೇಗಳಲ್ಲಿ ಕೆಲಿಗ್ರಾಫಿ ಕಲೆಯಲ್ಲಿ ವಿಶೇಷತೆಯ ಬಗೆಗೆ ಪ್ರದರ್ಶನಗಳನ್ನೂ ಮಾಡಿದ್ದಾರೆ. ಒಟ್ಟಿಗೆ ಇದೇನೇ ಇದ್ದರೂ ತಮ್ಮ ಸಂಪ್ರದಾಯದ ಹಿನ್ನೆಯಲ್ಲಿ ಗಟ್ಟಮುಟ್ಟಾಗಿ ಹಿಡಿದಿಟ್ಟಿದ್ದಾರೆ.

ಒಳ್ಳೆಯ ಕಲಾಕಾರರ ಕಲೆಗಳನ್ನು ದೊಡ್ಡದೊಡ್ಡ ಹೋಟೆಲ್‌ಗಳಲ್ಲಿ, ಅಫೀಸ್‌ಗಳಲ್ಲಿ, ಪಬ್ಲಿಕ್ ಬಿಲ್ಡಿಂಗ್‌ಗಳಲ್ಲಿ ಗೋಡೆಗೆ ಹಾಕಿದ್ದಾರೆ. ನಮ್ಮ ಕಡೆಗೆ ತ್ರಿತಾರಾ, ಪಂಚತಾರಾ ಹೋಟೆಲ್‌ಗಳಲ್ಲಿ ಹಂಪೆ-ಐಹೊಳೆ-ಪಟ್ಟದಕಲ್ಲು-ಬೇಲೂರು ಹಾಗೆಯೇ ಕೋಣಾರ್ಕದ ಸುಂದರ ಚಿತ್ರಗಳನ್ನು ದೊಡ್ಡ ದೊಡ್ಡ ಪೊಟೋ ಫ್ರೇಮ್‌ಗಳಲ್ಲಿ ಹಾಕಿಸಿ ಗೋಡೆಗೆ ಅಂಟಿಸಿದ್ದನ್ನು ಇಲ್ಲಿ ನೆನಸಿಕೊಳ್ಳುತ್ತೇವೆ.

ಇಲ್ಲಿಯ ಜೆಡ್ಡಾ-ರಿಯಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿಯಂತೂ ಒಳ್ಳೆಯ ಮೂಲ ಪ್ರತಿಗಳ ಸಂಗ್ರಹವೇ ಕಾಣುತ್ತೇವೆ. ಆದರೆ ಇಲ್ಲೆಲ್ಲ ನಮಗೆ ಒಂದು ಓದಲಿಕ್ಕೆ ಬರುವುದಿಲ್ಲ. ಅದರೆ ವಿಮಾನ ನಿಲ್ದಾಣಗಳಲ್ಲಿರುವಾಗ ಸಾಕಷ್ಟು
ಸಮಯ ಬರವಣಿಗೆಯ ವಿವಿಧ ವಿನ್ಯಾಸಗಳನ್ನು ನೋಡಿ ಖುಷಿ ಮಾತ್ರ ಪಡುತ್ತಿದ್ದೆ.

ಇತ್ತೀಚೆಗೆ ಅಲ್ಲಲ್ಲಿ ನಿಸರ್ಗ ಚಿತ್ರಗಳಾದ ಮರುಭೂಮಿ ಒಂಟೆ, ಕುರಿ, ಮರುಭೂಮಿಯ ಮನೆಗಳು, ನೀರು ಸಂಗ್ರಹದ ತೊಗಲಿನ ಚೀಲಗಳು ಬಹುಶಃ ಹೊಟೆಲ್ ಗಳಲ್ಲಿ ಮಾತ್ರ ಕಾಣುತ್ತೇವೆ. ಬಹುಶಃ ಪಾಶ್ಚಾತ್ಯರ ಪ್ರಭಾವ ಬೀಳುತ್ತಿರಬಹುದೇನೊ!

ಪಾಶ್ಚಾತ್ಯರ ಕಲೆಗಳಲ್ಲಿ ಕಲಾಕಾರರು ತಮ್ಮ ಅನಿಸಿಕೆಯನ್ನು ಮನಬಿಚ್ಚಿ ಹರವಿದ್ದಾರೆ. ಅಲ್ಲಿ ಅವರಿಗೆ ಯಾವುದಕ್ಕೂ ಬಂಧನವಿಲ್ಲ. ಗಂಭೀರ ದೈವಿ ಚಿತ್ರಗಳಿಂದ ಬೆತ್ತೆಲೆ ಚಿತ್ರಗಳವರೆಗೆ ಕಲಾಕಾರನ ಮನಸ್ಸಿನ ಕಣ ಕಣವೂ ನಾವು ಸರಳವಾಗಿ ತಿಳಿದುಕೊಳ್ಳಬಹುದು. ಆದರೆ ಅರೇಬಿಯದ.ಕೆಲಿಗ್ರಾಫಿ ಕಲೆ ಹಾಗಲ್ಲ. ಈ ಕಲೆ ಲಕ್ಷ್ಮಿಣರೇಖೆ ಇದ್ದಂತೆ. ಅಷ್ಟೇ ಸೀಮಿತದಲ್ಲಿಯೇ, ಬಂಧನದಲ್ಲಿಯೇ ಇರಬೇಕೆನ್ನುವ ಕಟ್ಟಪ್ಪಣೆ. ಕಲಾಕಾರರಿಗೆ ಬಹುಶಃ ಇದೆಲ್ಲ ಹಿಡಿಸುತ್ತಿಲ್ಲ. ಯೂರೋಪದ ಆರ್ಟ್ ಗ್ಯಾಲರಿಗಳಿಗೆ ಇವರೇನಾದರೂ ಹೋದರೆ ಸೀತೆ, ರೇಖೆ ದಾಟಹೋಗಿ ರಾಮಾಯಣವೇ ಆದಂತೆ ಇವರವೂ ರಾಮಾಣವಾಗಿ ಒಂದು ಹೊಸ ದಾಖಲೆ ನಿರ್ಮಿಸಿದಂತಾಗುತ್ತದೆ. ಅರೇಬಕ್ ಕಲೆಯಲ್ಲಿ ಒಂದು ಹೊಸ ಕ್ರಾಂತಿಯಾದರೂ ಅದೀತು.

ಕೆಲಿಗ್ರಫಿ ಕಲೆಯೊಂದಗೆ ನವ್ಯತೆ ಮೇಳೈಸಿಕೊಂಡರೆ. ಹೆಚ್ಚಾಗಿ ಇಂಥ ಕಲೆ ಓದಲು ಬರೆದ ವಿದೇಶಿಗಳಿಗೆ ಅಶ್ಚರ್ಯವಾಗುವಂತಹ ಕೆಲಸ ಇವರೇಕೆ ಮಾಡಬಾರದು ಎಂದು ನನ್ನ  ಅನಿಸಿಕೆ.

ಕಾವ್ಯ ಹಾಗೂ ಗದ್ಯ ಸಾಹಿತ್ಯದ ರಚನೆ ಹಾಗೂ ಭಾಷಣ ಕಲೆ ಈ ದೇಶದಲ್ಲಿ ಮುಂಚಿನ ದಿನಗಳಿಂದಲೂ ಸಾಕಷ್ಟು ಬೆಳೆದಿತ್ತು ಎಂಬುದು ಸೌದಿಯನ್ನು ಕುರಿತ ಲೇಖನಗಳಿಂದ ಗೊತ್ತಾಗುತ್ತದೆ. ಅದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವ ಮಟ್ಟಕ್ಕೇನೂ ಇಂದಿನ ಸೌದಿಯ ಸಾಹಿತ್ಯವಾಗಲೀ ವಾಗ್ಮಿತೆಯಾಗಲೀ ತಲುಪಿಲ್ಲ.

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೌಡಿಕಾನದ ಪ್ರಕೃತಿ ಆರಾಧನೆ
Next post ದುಡಿಮೆಯೆ ದೇವರು

ಸಣ್ಣ ಕತೆ

 • ಮೇಷ್ಟ್ರು ರಂಗಪ್ಪ

  ಪ್ರಕರಣ ೫ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ… Read more…

 • ಕೆಂಪು ಲುಂಗಿ

  ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

 • ಮೃಗಜಲ

  "People are trying to work towards a good quality of life for tomorrow instead of living for today, for many… Read more…

 • ಜೀವಂತವಾಗಿ…ಸ್ಮಶಾನದಲ್ಲಿ…

  ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

 • ಮಿಂಚಿನ ದೀಪ

  ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…