Home / ಕವನ / ಕವಿತೆ / ಜಾತೀಯತೆಯು

ಜಾತೀಯತೆಯು

ಸಾತ್ವಿಕರಾಜಸ ತಾಮಸಗುಣಗಳ ತಾತ್ವಿಕವಿಧಿಯಿಂಮಿಶ್ರಣ ಮಾಡುತೆ |
ಸಾತ್ವಿಕ ಬೊಮ್ಮನು ದೇಹಘಟಗಳ ನಿತ್ಯದಿ ನಿರ್ಮಿಪನೂ |
ಆತ್ಮನು ನೆಮ್ಮುದಿ ಪಡೆಯುತೆ ಘಟದೊಳು ವಾಸಿಸಿದೇಹಿಯುಎನಿಸುತ್ತೆ |
ಆತ್ಮನು ಕಾಯಕವೆಸಗಲು ಬರುವನು ಜಗದೊಳು ತಾನಂದೂ || ೧ ||

ಶ್ರಮವಿಭಾಗವ ಮಾಡಲು ಗುಣಗಳ ಹೊಂದಿಸಿ ಸಿರಿರಮಣಾ |
ಶ್ರಮದಿಂ ನಾಲ್ವರ್ಣಗಳನು ಪೇಳಿದ ಪಾಲಿಸೆ ಮಾನವರೂ |
ಶ್ರಮವರಿಯುತೆ ನರಕಾಯಕವೆಸಗಲು ನಿಪುಣತೆ ತಾಪಡೆದು |
ಶ್ರಮವೆನಿಸದೆ ತಾಬಾಳುವ ಜಗದೊಳು ಸಂತಸಪಡೆಯುತ್ತೆ || ೨ ||

ಜಾತಿಯಮೂಲವ ನರಿಯದೆ ಜನಗಳು ಸ್ವಾರ್ಥದಿರೇಗುತ್ತೆ |
ಕೋತಿಯಂದದಿ ಕುಣಿಯುತೆ ವಿಶ್ವದಶಾಂತಿಯ ಕದಡುವರೂ ||
ಜಾತಿಯಜಗಳದ ನಂಜಿನ ಬೀಜವನೂಳುತೆ ವಿಶ್ವದೊಳೂ |
ಕೋತಿಮನದ ಮುಂದಾಳ್ಗಳು ಸ್ವಾರ್ಥದಿ ಬೇಳೆಯ ಬೇಯ್ಸುವರು || ೩ ||

ತಿಳಿದುನೋಡೆ ಮಾನವ ಕುಲವೆಲ್ಲವು ಮನುವಿನ ಸಂತತಿಯೂ |
ಅಳಿದು ಪ್ರೇಮವ ತಮ್ಮೊಳು ಜಗಳವಹೂಡಿಹರೆಲ್ಲೆಲ್ಲೂ ||
ತಳೆದು ಪ್ರೇಮವ ನಡೆದೊಡೆ ಜನತೆಯು ನಲಿವುದು ಸಂತಸದಿ |
ತಿಳುವುಪುಟ್ಟೆ ಜನಮರೆವುದು ಜಾತಿಯ ಕಲಹವನೆಂದೆಂದೂ || ೪ ||

ತಂದೆ ತಾಯಿಗಳ ಜಾತಿಯು ಬಾರದುಮನುಜರನಿನೆಂದೆಂದೂ |
ಒಂದೆಕಾಯಕವ ಸಂತಸಮಾಡಲು ಜಾತಿಯ ಹೊಂದುವನೂ ||
ಹಿಂದೆ ಕೌಸಿಕನು ತಪವನುಗೈಯುತೆ ಪಾರ್‍ವನು ತಾನಾದ |
ನಿಂದ್ಯಕರ್ಮದಿಂ ಪುತ್ತಿನ ಕುವರನು ಬೇಡನು ತಾನಾದ || ೫ ||

ಆರ್ಯ ಜನಗಳೇ ಅಲೆಯುತೆ ವಿಶ್ವದಿ ಸಂಸ್ಕೃತಿ ಬೀರಿದರೂ |
ಬೇರೆಬೇರೆ ಋಷಿಶಿಷ್ಯರೆ ಆದರು ಜಾತಿಯ ಬಾಂಧವರು ||
ಸಾರಿ ಹೇಳುವೆನು ನಡದಿದೆ ಬೆರಿಕೆಯು ವಿಶ್ವದೊಳೆಂದೆಂದೂ
ದೂರುಮಾಡುತೆ ಜಾತಿಯ ಕುರುಡನು ಬಾಳ್ವುದು ಶಾಂತಿಯಲಿ || ೬ ||
*****

Tagged:

Leave a Reply

Your email address will not be published. Required fields are marked *

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...