Home / ಕವನ / ಕವಿತೆ / ಕನ್ನಡದ ವಿಶ್ವರೂಪ

ಕನ್ನಡದ ವಿಶ್ವರೂಪ


ಕನ್ನಡದ ಹೊಸದನಿಯು
ವಿಶ್ವದಾ ವಿವಿಧ ವಿಧ
ವಾಙ್ಮಯಕ್ಕೆಣೆಯಾಗಿ
ಕಾಣದೇನು?
ನವ ನವೋನ್ನತ ಭಾವ-
ವೈಖರಿಯು, ಕಲ್ಪನೆಯು
ಹೊಸ ವೃತ್ತಗಳ ನೃತ್ಯ,
ಈ ಸರ್ವ ಸಾಮಸ್ತೃ-
ದಿಂದೇಕ ಮೂರ್ತಿಯಹ
ಕನ್ನಡದ ನಲ್ಬರೆಹ
ಹೊಸ ಹುಟ್ಟಿನೊಂದುತ್ತ
ಹೊಸ ಹಾದಿವಿಡಿಯುತ್ತ,
ಹೋಗದೇನು?
ಸುವ್ಯವಸ್ಥಿತ ರೀತಿ
ಯಿಂದ, ನಿರ್ಭೀತಿಯಲಿ
ನೀತಿಯಲಿ, ಪ್ರೀತಿಯಲಿ
ನಡೆಯದೇನು?
‘ಕನ್ನಡ ಮನೋಹಾರಿ!
ಮನ್ನಣೆಯ ಕಸ್ತೂರಿ!’
ಎನ್ನುವಾ ಮಾತನ್ನು
ನುಡಿಸದೇನು?


ಕನ್ನಡದ ಹೊಸ ದನಿಯು
ಮೂಢ ರೂಢಿಯನೊಡೆದು,
ಚ್ಛೆತನ್ಯವನು ಪಡೆದು,
ರಸಋಷಿಯ ಮಡಿಲಿನಲಿ,
ಶಾಂತಿಮಯ ಕಾಂತಿಯಲಿ,
ಹಾಸ್ಯ ಲಾಸ್ಯವನೆಸಗಿ,
ವೀರ ತಾಂಡವ ನಾಟ್ಯ
ನಲಿಯದೇನು?
ಮ೦ಜುಳ ಮನೋಹಾರಿ-
ಯಾಗದೇನು?
ರಸಿಕ ಜನ ಮಾನಸವ
ಸಂತೋಷ ಸಾಗರದಿ
ತೇಲಿಸುತ, ನಲವಿನಲಿ
ನಿಲಿಸದೇನು?
ನಲ್ಗನ್ನಡವ ಮುಂದೆ
ತಾರದೇನು?


ವಿಶ್ವ ಸಾಹಿತ್ಯದಲಿ:-
ಗ್ರಂಥಗಳ ಸರಣಿಯಲಿ.-
ಕಾವ್ಯಗಳ ಮಾಲೆಯಲಿ,
ಕವಿತೆಗಳ ಕು೦ಜದಲಿ,
ಗೀತಗಳ ಗುಚ್ಛದಲಿ,
ಕೀರ್‍ತನ ವಿತಾನದಲಿ,
ಗರತಿಯರ ಗೀತಿಯಲಿ,
ಜಾನಪದ ಪದಗಳಲಿ,
ಲಾವಣಿಯ ಲಾಸ್ಯದಲಿ,
ಹಾಡುಗಳ ಹಿ೦ಡಿನಲಿ,
ಆ ಯಕ್ಷಗಾನದಲಿ,
ಹೃದ್ಯವಹ ಗದ್ಯದಲಿ,
ವಚನ ಸಾಹಿತ್ಯದಲಿ,
ಕತೆಗಳ ಕಲಾಪದಲಿ,
ಕಾದ೦ಬರೀ ಪಥದಿ,
ಹಾಸ-ಪರಿಹಾಸದಲಿ,
ಹರಟೆ-ಹುಚ್ಚಾಟದಲಿ,
ಘರ್ಷಣ ವಿಮರ್ಶೆಯಲಿ,
ವಿವಿಧ ವಿಧ ರೂಪಕದಿ,
ಪದ್ಯ ಮಯ ನಾಟಕದಿ,
ಏಕಾಂಕ ದೃಶ್ಯದಲಿ,
ಚಿತ್ರದ ವಿಚಿತ್ರದಲಿ,
ಪತ್ರಿಕೆಯ ಸೂತ್ರದಲಿ,
ಸುದ್ದಿಗಳ ಸ೦ಗ್ರಹದಿ,
ಭಾವಗಳ ಮೇಳದಲ್ಲಿ,
ಕಲ್ಪನೆಯ ವಿವಿಧದಲಿ,
ಕಲೆಗಳ ವಿಲಾಸದಲಿ,
ಕನ್ನಡವು ಮೇಲ್ಮೆಯನು
ಮುಟ್ಟದೇನು?
ಕರ್ಣ ಕಮನೀಯತೆಯ
ಕರೆಯದೇನು?
ಕೀರ್ತಿಯು ದಿಗಂತವನು
ಹಬ್ಬದೇನು?
ಇನ್ನಿತರ ಭಾಷೆಗಳ
ಮುಂಭಾಗದೆಡೆಯಲ್ಲಿ
ಮನ್ನಣೆಯ ಸನ್ನುತಿಯ
ಪಡೆಯದೇನು?
ತಲೆಯೆತ್ತಿ, ಮುಂದೊತ್ತಿ,
ನಿಲ್ಲದೇನು?
ವಿಶ್ವರೂಪವನಾ೦ತು
ಮೆರೆಯದೇನು?
ಕಳೆಯೇರಿ, ನಲವೇರಿ,
ನಲಿಯದೇನು?


ಕನ್ನಡದ ಭಕ್ತರಿಗೆ
ನಲ್ಗನ್ನಡಾಂಬಿಕೆಯು,
ಸಾಹಿತ್ಯ ಶಾರದೆಯು,
ವಾಙ್ಮಯ ಬ್ರಹ್ಮನಾ
ರಸ ಸಮಾಧಿ ಸ್ಥಿತಿಯ
ಭಾವೈಕ್ಯದಾನಂದ-
ರೂಪ ಸುಖ ಸಾಮ್ರಾಜ್ಯ-
ವರವನ್ನು ಕರುಣೆಯಿ೦-
ದೀಯಳೇನು?
ಸಗ್ಗದಾ ಸಿರಿಯನ್ನು
ತೋರಳೇನು?
*****
೧೯೪೦

Tagged:

Leave a Reply

Your email address will not be published. Required fields are marked *

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...