
(ಇನ್ನೊಂದು ಸಂವಾದ)
ಲೋಕದೊಳಗೆಲ್ಲರೂ ಸೌಖ್ಯದಿಂದಿರುತಿಹರು
ಮೂಕ ಜೀವವೆ ನಿನಗು ಸಕಲವೂ ಕುಶಲವೇ?
ಏಕೆ ಸಖನೇ ಈ ತದೇಕಚಿತ್ತವು ಏಕೆ?
ಏಕಾಕಿಯಾಗಿರುವೆಯಾ ?
***
ಶೋಕ-ಯೋಗಕ್ಷೇಮ ಕೇಳುವವರಾರವರು
ಏಕಾಂತದೊಳಗೆ ಇರುವವರೆ ಇಲ್ಲದ ಮೇಲೆ?
ಏಕಾಕಿಯಾಗಿರುವೆಯಾ ಎಂಬ ಮಾತೇಕೆ?
ಮಾತಿನಾ ಮೊನೆಯದೇಕೆ?
*****

















