‘ಜಾಂಡೀಸ್’ ಇದೊಂದು ಅಪಾಯಕಾರಿರೋಗ. ಇದನ್ನು ತೊ‌ಡೆದುಹಾಕಲು ಇತ್ತೀಚೆಗೆ ಹೈದರಾಬಾದಿನ ಶಾಂತಾಬಯೋಟೆಕ್ನಿಕ್, ಎಂಬ ಸಂಸ್ಥೆಯವರು ಹೆಪಾಟೈಟಿಸ್- ವಿಷಾಣುಗಳನ್ನು ತೊಡೆದು ಹಾಕಲು ಹೊಸ ಚುಚ್ಚುಮದ್ದನ್ನು ವಿಶೃತಗೊಳಿಸಿದೆ. ಹೆಪಾಟೈಟಿಸ್ -ಬಿ ವಿಷಾಣುಗಳನ್ನು ಘಾತುಕ ಕಾಮಾಲೆ ಮತ್ತು ಯಕೃತ್ತು ರೋಗಗಳಿಗೆ ಕಾರಣವಾಗುತ್ತದೆ. ಸ್ವದೇಶಿ ಸಂಶೋಧನೆಯ ಮೂಲಕ ಅಭಿವೃದ್ಧಿಪಡಿಸಿದ ಇದು ರಿಕಾಂಬೀನೆಟ್ ಡಿ. ಎನ್. ಎ. ಎಂಬ ತಂತ್ರಜ್ಞಾನವನ್ನು ಆಧರಿಸಿದೆ. ಈ ಚುಚ್ಚುಮದ್ದುನ್ನು ಹೈದರಾಬಾದಿನ ನಿಜಾಮ್ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆಯಲ್ಲಿ ಪರೀಕ್ಷೆಗೆ ಒಳಪಡಿಸಿ ಯಶಸ್ವಿಹೊಂದಿದೆ. ಭಾರತ ಸರಕಾರ ವಿಜ್ಞಾನ ಮತ್ತು ತಂತ್ರಜ್ಞಾನದ ಇಲಾಖೆಯು ಈ ಚುಚ್ಚುಮದ್ದು ಅಭಿವೃದ್ಧಿಗೆ ತಾಂತ್ರಿಕ ಮತು ಆರ್‍ಥಿಕ ನೆರವು ನೀಡಿದೆ. ಕೊರಿಯಾ ಜಪಾನ್ ಮತ್ತು ತೈವಾನ್ ದೇಶಗಳಲ್ಲಿ ಪ್ಲಾಸ್ಮಾದಿಂದ(ರಕ್ತದ್ರವ) ಇದನ್ನು ತಯಾರಿಸಲಾಗುತ್ತದೆ.
*****