ಬೆಳಗಿನ ಹೊತ್ತಿನಲ್ಲಿ
ವಿಧಾನಸೌಧದ ಮುಂದೆ
ಗುಡಿಸುವವರಿಗೆ
ನಿನ್ನೆಯ ಘೋಷಣೆಗಳು ದೊರಕುತ್ತವೆ
ಕುಪ್ಪೆಯನ್ನು
ಪುಟ್ಟಿಗಳಲ್ಲಿ ತುಂಬುವಾಗ
ಗಾಜು ಚೂರುಗಳಂತೆ
ವಾಗ್ದಾನಗಳು ಚುಚ್ಚಿಕೊಳ್ಳುತ್ತವೆ
*****