ಕಾದಲ

ನನ್ನ ಕಾದಲಳಿವಳು ನಿತ್ಯವಿಹಳೆನ್ನ ಸೂರ್‍ಯ
ಅವಳನ್ನು ಸುತ್ತುತಿಹ, ನುತಿಸುತಿಹ ಪೃಥ್ವಿ ನಾನು!
ನನ್ನ ಮನದನ್ನೆ ಕಲ್ಪದ್ರುಮದ ದಿವ್ಯ ಕುಸುಮ,
ದೇವನಿಂದವಳನ್ನು ವಡದ ನೇಹಿಗ ನಾನು!

ನಲ್ಲೆಯಿವಳೆನ್ನ ಕಣ್ಮನವ ತುಂಬಿರುವ ಬೆಳಕು,
ಅವಳ ಕಾಂತಿಯನಿಳೆಗೆ ಬಿಂಬಿಸುವ ಚಂದ್ರ ನಾನು !
ಅಹುದವಳು ದೇವನೊಡನುಡಿವ ಇಡಿಯಾದ ವಾಣಿ,
ಅದರ ಸಂದೇಶವನು ಬೀರ್‍ವ ಮಾರುತ ನಾನು !

ನನ್ನವಳು ಸೌಂದರ್ಯದನನುಕರಣಿಯ ಮೂರ್‍ತಿ,
ಅವಳ ನಲುಮೆಯ ವಡೆದ ಚಿರಮುಕ್ತ ಭಕ್ತ ನಾನು!
ಅವಳ ಕರುಣೆಯಲಿಹುದು ನಂಜೀವಿಸಿರುವ ಶಕ್ತಿ,
ಅದರ ಮಹಿಮೆಯನುಸುರುತಿಹ ವಾಣಿ-ವೀಣೆ ನಾನು!

ಬಣ್ಣನೆಯು ಸಾತಿಶಯವಿರಬಹುದು, ಇದ್ದರೇನು?
ಸತ್ಯ ಸೌಂದರ್‍ಯಗಳು ನುಡಿಸಿಹವು, ಧನ್ಯ ನಾನು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಳೆಯ ನಾಡಿಗೆ ಬಂದೆನೆ
Next post ಕಾಡುತಾವ ನೆನಪುಗಳು – ೧೨

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…