
ಹೂಡಬೇಡ ಬಾಣ
ಕಣ್ಣ ಅಂಚಿನಲ್ಲಿ
ಕಾಡಬೇಡ ಹೀಗೆ
ಮೋಹ ಪಾಶದಲ್ಲಿ
ಗೊತ್ತು ಪ್ರೀತಿ ಕಡಲು
ಅದರ ಚರಿತೆ ಬಹಳ
ನಾನೋ ಅಸಮರ್ಥ
ತಿಳಿಯಲದರ ಆಳ
ನಿನ್ನ ಪ್ರೀತಿ ಕೆಂಪು
ಅದಕೆ ನಾನು ದೂರ
ತಿಳಿಯಬೇಡ ತಪ್ಪು
ಬೇಡ ಹೃದಯ ಭಾರ
ನಿನ್ನ ಕುರಿತ ಮಾತು
ಆಗುತಿಹುದು ಕವಿತೆ
ಇಷ್ಟೆ ಸಾಕು ನಲ್ಲೆ
ಬೇಡ ನಾಳೆ ಚರಿತೆ
ಪ್ರೀತಿಗಿಲ್ಲ ಎಲ್ಲೆ
ಅದನು ನಾನು ಬಲ್ಲೆ
ಬದುಕು ಮಾತ್ರ ಬೇರೆ
ಅಲ್ಲವೆ ಹೇಳು ನಲ್ಲೆ?
ನಾನು ನಿನಗೆ ಋಣಿ
ನಿನ್ನ ಪ್ರೀತಿಗಾಗಿ
ಸೋಲು ಆಯ್ತು ನನಗೆ
ಅದರ ನೀತಿಗಾಗಿ
*****


















