ಆ ತರ ಅವನು ಈ ತರ ಇವನು
ನಾನೂ ನೀನೂ ಬೇರೆ ತರ
ಎಲ್ಲರು ಒಂದೇ ತರ ಇರುತಿದ್ದರೆ
ಎಂಥಾ ಬೇಸರ ಇರುತಿತ್ತೋ

ಒಂದೇ ಎತ್ತರ ಒಂದೇ ನಿಲುವು
ಒಂದೇ ಬಣ್ಣ ಒಂದೇ ಕಣ್ಣ
ಎಲ್ಲರು ಒಂದೇ ತರ ಇರುತಿದ್ದರೆ
ಎಂಥಾ ಬೇಸರ ಇರುತಿತ್ತೋ

ಒಂದೇ ಭಾಷೆ ಒಂದೇ ಧರ್‍ಮ
ಒಂದೇ ದೇಶ ಒಂದೇ ವೇಷ
ಒಂದೇ ಯೋಚನೆ ಒಂದೇ ಕಲ್ಪನೆ
ಒಂದೇ ಕತೆ ಒಂದು ಹಾಡು

ಎಲ್ಲವು ಒಂದೇ ತರ ಇರುತಿದ್ದರೆ
ಎಂಥಾ ಬೇಸರ ಇರುತಿತ್ತೋ

ಒಂದೇ ದಾರಿ ಒಂದೇ ಲಕ್ಷ್ಯ
ಒಂದೇ ಅಂಗಡಿ ಒಂದೇ ಭಕ್ಷ್ಯ
ಎಲ್ಲವು ಒಂದೇ ತರ ಇರುತಿದ್ದರೆ
ಎಂಥಾ ಬೇಸರ ಇರುತಿತ್ತೋ

ಒಂದೇ ಗುಡಿ ಒಂದೇ ದೇವರು
ಒಂದೇ ಗಾಡಿ ಒಂದೇ ಚಕ್ರ
ಎಲ್ಲವು ಒಂದೇ ತರ ಇರುತಿದ್ದರೆ
ಎಂಥಾ ಬೇಸರ ಇರುತಿತ್ತೋ

ಒಂದೇ ಹೂವು ಒಂದೇ ಭ್ರಮರ
ಒಂದೇ ಮರ ಒಂದೇ ಶಿಖರ
ಎಲ್ಲವು ಒಂದೇ ತರ ಇರುತಿದ್ದರೆ
ಎಂಥಾ ಬೇಸರ ಇರುತಿತ್ತೋ

ಓಂದೇ ಮನೆ ಒಂದೇ ಹೊಲ
ಒಂದೇ ತೆನೆ ಒಂದೇ ಪೈರು
ಎಲ್ಲವು ಒಂದೇ ತರ ಇರುತಿದ್ದರೆ
ಎಂಥಾ ಬೇಸರ ಇರುತಿತ್ತೋ
*****