ಕವಿತೆ ಓದಿ ಎಂದರು ಅವರು
ಹಾಡಿ ಹಾಡಿ ಎಂದರು ಇವರು
ಓದುವುದೋ ಇದು ಹಾಡುವುದೋ
ಒಟ್ಟನಲ್ಲಿ ಹೃದಯ ತಟ್ಟಿದರೆ ಸರಿ
ಅದೊಂದು ಸೇತುವೆ
ಸೇತುವೆಗಳಿರುವುದೇ ದಾಟುವುದಕ್ಕೆ
ಅದನ್ನೇಕೆ ಕೆಡಹುವಿರಿ ಬಿಡಿ
ಪ್ರವಾಹ ಬಂದರೆ ಅದೇ ಬೀಳುತ್ತದೆ
ಮತ್ತೆ ಕಟ್ಟಿದರಾಯಿತು
ಕಟ್ಟುವುದಕ್ಕೇ ಅಲ್ಲವೇ ಬೀಳುವುದು
*****