ದರ್ಗಾದಲ್ಲಿ ಅತ್ತರು ಘಮಘಮಿಸುತ್ತಿದೆ
ದೇಗುಲದಲ್ಲಿ ಗಂಧ ಪರಿಮಳಿಸುತ್ತಿದೆ

ಅವರು ಸರ್ವಶಕ್ತನಲ್ಲಿ
ನಿವೇದಿಸಿಕೊಳ್ಳುತ್ತಿದ್ದಾರೆ
ಇವರು ಸರ್ವಾಂತರ್ಯಾಮಿಯಲ್ಲಿ
ಪ್ರಾರ್ಥಿಸುತ್ತಿದ್ದಾರೆ.

ದೇವರೇ…
ಹಗೆತನದ ಹುಟ್ಟಡಗಲಿ
ಗೆಳೆತನವು ನಿತ್ಯ ಒದಗಿ ಬರಲಿ.
*****
ಗುಜರಾತ್‌ಗೆ ಕವಿ ಸ್ಪಂದನ