ತಪ್ಪು ಮಾಡ್ದೋರು ಯಾರವರೆ ತಪ್ಪೆ ಮಾಡ್ದೋರು ಎಲ್ಲವರೆ?

ನಿಮಗೆ ಸಿಟ್ಟು ಬಂದ್ರೂ ಬಲಿ. ಕಂಡೋರ ಮಕ್ಕಳ್ನ ಬಾವಿಗೆ ತಳ್ಳಿ ಆಳ ನೋಡೋದು ಹಲಕ್ಟಟ್ ಬುದ್ದಿ ಕಣ್ರಿ. ಈ ನಾಡಿನ ಎಂಗೇಜ್ ಸಿ‌ಎಂ ಟೀನೇಜ್ ಮಗ ಹೋಟ್ಲಿಗೆ ನುಗ್ಗಿ ನಾಕುಜನ ಸಪ್ಲೈಯರ್ ತಾವ ಒದೆ ತಿಂದಿದ್ದೆ ದೊಡ್ನ ಇಶ್ಯು ಮಾಡೋದಾ? ಈ ಪೇಪರ್ಮಂದಿ! ಅಸಲು ಯಾರು ಮಕ್ಕಳು ತಂದೆ ತಾಯಿ ಮಾತು ಕೇಳ್ತಾವ್ರಿ ಈಗ….? ಒಂದ್ಕಡೆ ಅಪ್ಪ ಹಳ್ಳಿ ಹಳ್ಳಿ ಅಲಿತಾ, ಅಮ್ಮ ತಾಯಿ ಮುದ್ದೆ ಕೊಡ್ರಮ್ಮ ಅಂತ ಕೇಳಿ ಇಕ್ಕಿಸಿಕೊಂಡು ಉಂಡು ಸಿಕ್ಕ ಜಗಲಿ ಮ್ಯಾಗೆ ಮಕ್ಕತಿದ್ರೆ, ಅಮ್ಮ ಇನ್ನೊಂದು ಕಡೆ ಸೀರೆ ಸೀಯಿಂಗು ಜೂಯಲ್ಸ್ ಪರಚೇಸ್ ಅಂತ ಶಾಪಿಂಗ್ ಮಾಡ್ತಾ ಇದ್ದರೆ ಇದ್ದ ಒಬ್ಬ ಮಗ ಮನಿಯಾಗಿದ್ದೇನು ಗೆಣಸು ಕದಾನೆ. ಯಂಗ್‌ಬ್ಲಡ್ಡು ಮನೆಯಾಗೆ ಸಿಗದಿದ್ದ ಪ್ರೀತಿನಾ ಫ್ರೆಂಡ್ಸ್‌ತಾವ ಪಡ್ಕಂತಾನೆ. ಮೊದ್ಲೆ ಲವ್‌ಸ್ಪಾಟ್‌ನಂಗಿರೋ ಮಾವೀರ್ ಜೈನ್ ಕಾಲೇಜಿನಾಗೆ ಹೆಂಗೂ ಅಲ್ಟ್ರಾಮಾಡರನ್ ಹುಡ್ಗೀರೂ
ಸಿಗ್ತಾರೆ. ಸಿ‌ಎಂ ಮಗ ಅಂತ ಪ್ರೀತಿ ತೋರಿಸ್ತಾರೆ. ಆದ್ರೆ ಪಿರೀತಿ ಹೊಟ್ಟೆ ತುಂಬಿಸಿತಾ? ಹಾಳು ಹೊಟ್ಟೆ ಹಸಿದ್ರೆ ಮನಿಯಾಗೆ ಯಾರವರೆ? ಹೋಟ್ಲಿಗೆ ನುಗ್ದ. ಶಿವಪ್ಪ ಕಾಯೋ ತಂದೆ ಎಂಪೈರು ಹೋಟ್ಲು ಸಾವುಕಾರ ಹಸಿವೇಯನ್ನು ತಾಳಲಾರೆ ಕಾಪಾಡಪ್ಪ ಅಂತ ಉಣ್ಣಾಕೆ ಕೇಳ್ದ. ಇದ್ದರೆ ಇಕ್ಕಬೇಕು ಅದುಬಿಟ್ಟು ಮಕ್ಕೆ ಇಕ್ಕೋದಾ! ಹುಡ್ಗಂದೂ ಹಾಟ್ ಬ್ಲಡ್ಡು ವಾಪಸ್ ಹೋದೋನು ಫ್ರೆಂಡ್ಸ್ ಕಟ್ಟಿಕಂಡು ಬಂದು ಗಾಜು, ಟಿವಿ ಹೊಡ್ದ. ಅಲ್ರಿಯಪಾ ಸುವರ್ಣ ಕರ್ನಾಟಕದ ಹಬ್ಬಂವಾ ಅಪ್ಪ ಗ್ರಾಂಡಾಗಿ ಸೆಲಬ್ರೇಟ್ ಮಾಡೋವಾಗ ಈ ನಾಡಿನ ಸಿ‌ಎಂ ಮಗನಿಗೆ ಒಂದು ತುತ್ತು ಅನ್ನಕ್ಕೆ ಗತಿ ಇಲ್ವೆ. ಎಷ್ಟು ಕೊಬ್ಬು ಆ ಬ್ಯಾರಿಗೆ? ಹುಡ್ಗ ಏನ್‌ ಬಿಟ್ಟಿ ಕೇಳಿದ್ನೆ. ಗೆಳೆಯರ ಎದುರು ಹುಡ್ಗನ ಇಜ್ಜತ್ ಕಳೆಯೋದಾ? ಹಸಿದೋಗೆ ಅನ್ನ ಇಲ್ಲ ಅಂದ್ಮೇಲೆ ಬೆಂಗ್ಳೂರಿಗ್ಯಾಕ್ರಿ ರಾಜಧಾನಿ ಪಟ್ಟ? ಕಟ್ರಿ ಚಟ್ಟ. ಮಾಡ್ರಿ ಬೆಳಗಾಂವ್‌ನೇ ರಾಜಧಾನಿ ಅಂತ ಅರಚಾಡ್ಲಿಕತ್ತಾರೆ ಜೆಡಿ‌ಎಸ್ ಮಂದಿ. ಅಪ್ಪ ಹಳ್ಳಿನಾಗೆ ೨.೩೦ ಮಧ್ಯ ರಾತ್ರಿ ಉಂಡ್ರೆ ತಪ್ಪು ಅಂದೋರಿಲ್ಲ. ಅದೇ ಅವರ ಸನ್ನು ೩.೩೦ಕ್ಕೆ ಉಣ್ಣಾಕೆ ಕೇಳಿದ್ರೆ ತಪ್ಪಾ? ಗೊಗ್ಗರು ದನಿಯಾಗೆ ಚೆನ್ನಿಗಪ್ಪ ಗುರುಗಟ್ತಾನೆ. ಮೆತ್ತನೆ ಕಳ್ಳ ಪ್ರಕಾಸು ಏನಂತಾರೆ? ಹುಡುಗ ಭಾಳ ಸಣ್ಣೋನ್ರಿ.. ಬಾಲಾಪರಾಧ ಕ್ಷಮ್ಯ. ಮಕ್ಕಳು ಕುಡಿದು ಕುಣಿದು ಫೈಟ್ ಮಾಡ್ದೆ ನಾವ್ ನೀನ್ ಮಾಡ್ಲಿಕ್ಕೆ ಆದಾತೇನ್ರಿ? ಜನಕ್ಕೇ ಕೂಶ್ಚನ್ ಇಡ್ತಾರೆ, ಇರೋಧ ಪಕ್ಷದ ಲೀಡರ್ ದಬರಿ ಧರ್ಮು ಅದ್ನೆ ಬ್ಯಾರೆ ಟ್ಯೂನ್ನಾಗೆ ಗೊಣಗ್ತಾರೆ. ಈಗೋರಿ, ಮಕ್ಕಳು ಅಂದ್ಮೇಲೆ ತಪ್ಪು ಮಾಡ್ತಾವೇಳ್ರಿ. ಅದು ಅವರ ಮಮ್ಮಿ ಡ್ಯಾಡಿಗೆ ಸಂಬಂಧಪಟ್ಟ ಮ್ಯಾಟರದೆ. ಆದ್ರೆ ಎಲ್ಲದಕ್ಕೂ ಕಾಂಗ್ರೆಸ್ನ ಎದಕ್ಕಿ ದೂರೋದು. ನಮ್ಮೋರು ೧೧.೩೦ ಗಂಟೆ ರಾತ್ರಿ ಹೋಗಿ ಮೆಸ್ಮರಿಸಂ ಮಾಡಿ ಮನೆಯಾಗಿರೋ ನಿಖಿಲ್‌ನ ಕರ್ಕೊಂಡು ಹೋಗಿ ಹೊಡೆದಾಟಕ್ಕೆ ಹಚ್ಚ್ಯಾರಂತೆ. ಸಮಯ ಬಂದಾಗ ಎಲ್ಲಾ ಹೇಳ್ತೀನಿ ಅಂತಾನಲ್ರಿ ಈ ಕೊಮಾಸಾಮಿ. ಅದಾ ನಾ ಒಪ್ಪಂಗಿಲ್ ಬಿಡ್ರಿ. ನಮ್ಮ ಹುಡ್ಗನೂ ಒಂದಪ ಹಿಂಗೆ ಮಾಡಿ ಕೈಕಾಲು ಜಖಂಮಾಡಿಸ್ಕಂಡಿದ್ದ. ಮಕ್ಳು ತಪ್ಪು ಮಾಡ್ಲಿಕ್ಕೇ ಅದಾರ್ರಿ. ನಾವ್ ಮಾಡ್ಲಿಕ್ ಆತದೇನು? ಅಗ್ದಿ ಸಿಪಂಥಿ ತೋರಿಸ್ಯಾರೆ ಧರ್ಮು. ಇದಕ್ಕೆ ಕೊಮಾಸಾಮಿ ರಿಯಾಕ್ಷನ್ ಏನಂತೀರಾ? ಕೇಳ್ರಲಾ… ಯಾವ ಪಕ್ಷದ ದೊಡ್ಡ ಮನುಷ್ಯರ ಮಗ ತಪ್ಪು ಮಾಡಿಲ್ಲೇಳ್ರಿ? ಇಂದಿರಾಗಾಂಧಿ ಮಗ ಸಂಜಯ್ ಏನು ಕಡಿಮೆ ಉರಿದ್ನೆ ಮೆರಿದ್ನೆ ಬ್ರದರ್! ಪ್ರಮೋದ್ ಮಹಾಜನ್ ಸನ್ನು ರಾಹುಲ್ ಡ್ರಗ್ ಆಡಿಕ್ಟ್ ಆಗಿ ಕೋಟು ಹತ್ತಲಿಲ್ವೆ. ಡ್ರಮ್ ಜಯಲಲ್ತಳ ದತ್ತು ಮಗ ಪ್ರಭಾಕರ ಎಮ್ಮೆ ಕರುವಾಗಿ ಕೋಟು ಮೆಟ್ಟಿಲು ಅಲಿತಿಲ್ವೆ. ಕರುಣಾನಿಧಿ ಫಸ್ಟ್ ಸನ್ನು ಆಕ್ಟರ್ ಬಾಲಕೃಷ್ಣ ಯಾರಮೇಲೋ ಗುಂಡು ಹಾರಿಸ್ದ. ಕೇಸು ಹಳ್ಳ ಹಿಡಿಲಿಲ್ವೇನ್ರಿ ನಮ ನಿಖಿಲ್ ಯಾನಾರ್ ಕಿಲ್ ಮಾಡಿದ್ನಾ ಬ್ರದರ್ ?

ಉಣ್ಣಾಕೇನರ ಇದ್ರೆ ಮಡಗಿ ಅಂದ್ರೆ ಹೋಟ್ಲಾರು ಹಂಗಾ ಮಡಗೋದು ಇದು ನ್ಯಾಯವಾ? ಇದು ಧರ್ಮಾಮಾ. ಇದೇನು ಘನ ಘೋರ ಕ್ರೈಮಾ ಬ್ರದರ್. ಪೇಪನೋಗೆ ಉದ್ಯೋಗಿಲ್ಲ. ಹಾಳೆ ಪೆನ್ನು ಜತೆ ಅಂತ ತೋಚಿದ್ದನ್ನ ಗೀಚ್ಚವೆ. ಬಿ.ಟಿ. ಲಲಿತನಾಯ್ಕೆ ಸಚಿವಳಾಗಿದ್ದಾಗ ಆಕಿ ಮಗ ಅಂಬೇಡ್ಕರ್ ಗೊಂಬಿ ಮ್ಯಾಗೆ ಸರಾಯಿ ಸುರಿಲಿಲ್ವಾ. ದೇವರಾಜು ಅರಸು ಅಳಿಯ ಅವ್ನೆ.. ನಟ್ರಾಜ ಮಿಲ್ಟ್ರಿ ಅಧಿಕಾರಿ ಹೆಂಡರ ಕಿಂಡಲ್ ಮಾಡ್ಲಿಲ್ವಾ. ಅರಸು ಮಗಳ್ನೆ ಮರ್ಡರ್ ಮಾಡಿ ಬಚಾವ್ ಆಗ್ಲಿಲ್ವಾ. ಪ್ರಕಾಸ್ ಸನ್ನು ಗಣಿ ಲೆಕ್ಕದಾಗೆ ಸಿಗಿ ಹಾಕ್ಕಂಡಿಲ್ವಾ? ಫ್ಯಾಶನ್ ಬಿದ್ದಪ್ಪನ ಮಗ ಆಡ್ಯಂಬಿದ್ದ ನಂಗೆ ಪೋಲಿಸಿನೋಗೆ ಸಮ ಇಕಿದ್ನೆ? ಒದೆ ತಿಂದು ಬಂದು ನಳ್ತಾ ಅವ್ನೆ. ಪೇಪರಿನೋಗೆ ಒಂದೀಟಾರ ಕನಿಕರ ಬ್ಯಾಡ್ವಾ? ಫೋಟೋ ಹಾಕಿ ಏನೆಲ್ಲಾರ ಬದು ಇನ್‌ಸಲ್ಟ್ ಮಾಡಿದ್ರೆ ಆ ಎಳೆ ಹುಡ್ಗ ಮೊದ್ಲೆ ಹಾಟ್ ಟೆಂಪರ್. ಎಲ್ಲಾರ ಅಪ್‌ಸೆಟ್ ಆಗಿ ನೇಣು ಹಾಕ್ಕೊಂಡು ನೆಗ್ದು ಬಿದ್ದು ಹೋದ್ರೆ ಯಾವನ್ಗಾನ ಪ್ರಾಣ ಕೂಡೋ ಸಗ್ತಿ ಐತಾ? ಹಿಂಗಂತ ಸ್ವಯಂ ಸಿ‌ಎಂನೇ ಪುತ್ರ ವ್ಯಾಮೋಹ ತಾಳಲಾರದೆ ಕಣ್ಣೀರು ಹಾಕವ್ರೆ. ಖುದ್ ಗೋಡ್ರೆ ಈಗ ಅಗ್ದಿ ಅಂಗಾರ್ ಆಗವರೆ. ಕೊಮಾರನ ಮಗನ ಬದ್ಲು ರೇವಣ್ಣನ ಮಗನ ಫೋಟೋ ಜಡಿಯೋದೇನ್ರಿ ಪೇಪನೋರು? ಇದು ತಪ್ಪು ಅಲ್ವೆನ್ರಿ? ಅರಸು ಅಳಿಯ ತಪ್ಪು ಮಾಡ್ದಾಗ ನಾನು ವಿರೋಧ ಪಕ್ಷದಲ್ಲಿದ್ರೂ ವಿರೋಧ ಮಾಡ್ದೆ ಕನ್ಸೇಶನ್ ತೋರಿಸ್ದೆ. ನಂದು ದೊಡ್ಡ ರುದಯ ಕಣ್ರಿ. ಆದರೆ ನನ್ನ ಕುಟುಂಬದವರಿಗೆ ಮಾತ್ರ ಕನ್ಸೇಶನ್ ಬ್ಯಾಡ್ವಾ? ಇದೆಲ್ಲಾ ಕಾಂಗ್ರೆಸ್ನೋದೆ ಕೈವಾಡ ನನ್ನ ಮೊಮ್ಮಗ ಏನೂ ಅರಿಯದ ಕಂದಮ್ಮ. ಇವರೇ ಏನೋ
ಮಾಟ ಮಾಡಿಸಿರೋ ಡೌಟಿದೆ ನಂಗೆ. ಡೀಸೆಂಟಾಗಿದ್ದೋನು ರೀಸೆಂಟಾಗಿ ಹಿಂಗೆಲಾ ಆಡ್ತಿದಾನೆ. ನನ್ನ ಒಂಭತ್ತು ಮೊಮ್ಮಕ್ಕಳು ನವಗ್ರಹಗಳಿದ್ದಂಗೆ. ಎಲ್ಲ ಸವರನ್ನು ಕಣ್ರಿ. ನಿಖಿಲ್‌ನಂತೂ ಏನೂ ತಿಳೀದ ಹಸಿಗೂಸು ಅಂತ ಕಾಂಗ್ರೆಸ್ನೋರ ಮೇಲೆ ಕೆಂಡ ಕಾತಾ ಕಣ್ಣು ಮುಚ್ಚಿ ಸ್ವಾಂಟೆ ಓರೆ ಮಾಡಿ ವಿಷಾದ ನಗೆ ಚೆಲ್ಲುತ್ತಾರೆ. ಏನೂ ತಿಳೀದ ಈ ಹಸಿಗೂಸಿನ ಬಳಿ ಕೋಟಿಗಟ್ಟಲೆ ಬೆಲೆ ಬಾಳೂ ಲ್ಯಾನ್ಸರ್ ಕಾರು, ನಿಸ್ಸಾನ್ ಸ್ಪೋರ್ಟ್ಸ್, ಲೆಕ್ಸಸ್, ಹಮ್ಮರ್, ಭಿ ಎಂ ಡ್ಬ್ಲೂ೭ ಸೀರಸ್ ಕಾರು, ೨೨ ಲಕ್ಷದ ವಿದೇಶಿ ಬೈಕುಗಳು. ಕನಿಷ್ಠ ಒಂದು ಕೋಟಿ ಬಾಳೋ ಮೊನ್ನೆ ತಾನೆ ಸಚಿವ ಜಮೀರ ಗಿಫ್ಟ್ ಆಗಿ ಕೊಟ್ಟ ಲ್ಯಾಂಡ್ ಕುಯ್ಸಸ್ ನೈಟ್ ಮಿಷನ್ ಕಾರೂ ಇದೆ. ನಾಡಿನ ಯಾವ ಬಾಲಕನ್ತಾವ ಹಸಿಗೂಸೀನ್ತಾವ ಇದೆಲ್ಲಾ ಐತೇಳ್ರಿ? ಹುಡುಗ ದಾರಿ ತಪ್ಪಲು ಇನ್ನೇನ್ ಬೇಕೇಳಿ. ಇದೆಲ್ಲಾ ಹಾಳು ಬಿದ್ದು ಹೋಗ್ಲಿ ಅಸಲಿಗೆ ಫೋಲೀಸ್ನೋರು ಏನಂತಾರೆ? ಅವರ ಗಾಂಧಿತಾತನ ಮೂರು ಮಂಗಗಳ ಕತಿ ಹೇಳ್ತಾರೆ. ನಿಖಿಲ್‌ನ ನಾವ್ ನೋಡಿಲ್ಲ. ಅವನ ಬಗ್ಗೆ ಆಡೋಲ. ದೂರಿದ್ರೂ ನಾವೇ ಕೇಳಲ್ಲ. ಅಧಿಕಾರಿ ಸಿಯಾಲ್, ಬಿಪಿನಂ ಗೋಪಾಲ ಕಿಸ್ಣ, ಎಸ್ ಐ ರತ್ನಾಕರ ಸೆಟ್ಟಿ ಕಂಠಪಾಠ ಒಪ್ಪಿಸ್ತಾರೆ. ಹೋಟಲಿನೋರು ಏನೂ ಬಾಯಿ ಬಿಡ್ತಾನೇ ಇಲ. ದೊಡ್ಡಪ್ಪ ಸಚಿವ ರೇವಣ್ಣ ಇದಕ್ಕೆಕಾ ಮೆಕಾನಿಕ್ ಸಯ್ಯದ್ ಕಾರಣ ಅನ್ನುತ್ಲು ಫೋಲೀಸರು ಸರ್ಚ ಮಾಡ್ಲಿಕತ್ತಾರೆ. ಹಿಂಗಿರೋವಾಗ ನಿಖಲ್ ಗೋಡ್ನ ತಪ್ಪಾರ ಎಲ್ಲೈತಿ? ತಪ್ಪು ಮಾಡ್ದೋರು ಯಾರವರೆ… ತಪ್ಪೇ ಮಾಡ್ದೋರು ಎಲ್ಲವರೆ….? ಅಂತ ಸಿ‌ಎಂ ಪಟಾಲಂಗಳು ಸಾಂಗ್ ಹಾಡ್ಲಿಕತ್ತಾರೆ…. ನೀವೇನಂತೀರ್ರಿ?
*****
(೧೬-೧೧-೨೦೦೬)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಟ್ಟ ಏಣಿಗಳ ಕಥೆ
Next post ಅಪ್ಪ

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…