ಪಟ್ಟ ಪುಟಾಣಿ ಹಕ್ಕಿ
ಕೊಕ್ಕಲಿ ಏನೋ ಹೆಕ್ಕಿ
ಹಾರುವೆ ಬಾನಲಿ ನೀನು
ನೋಡುವೆ ನಿನ್ನನು ನಾನು

ಬಣ್ಣ ಬಣ್ಣದ ಪುಕ್ಕ
ಹಾರೋದ್ರಲ್ಲಿ ಪಕ್ಕಾ
ಹಣ್ಣಿನ ಮರವ ಹುಡುಕಿ
ತಿನ್ನುವೆ ಹಣ್ಣನು ಕುಕ್ಕಿ

ದೂರದೂರಕೆ ಹಾರಿ
ಸಾಗುವೆ ಯಾವುದೊ ದಾರಿ
ಟ್ರಾಫಿಕ್ ಪೊಲೀಸ್ರಿಲ್ವಾ
ಯಾರೂ ತಡೆಯೋದಿಲ್ವ

ನಿನ್ನದೆ ತುಂಬಾ ಮಜಾ
ನಿತ್ಯವೂ ನಿನಗಿದೆ ರಜಾ
ಇಲ್ಲದೆ ಪಾಸ್ ಪೋರ್ಟ ವೀಸಾ
ಸುತ್ತುವೆ ದೇಶ ವಿದೇಶ

ಶಾಲೆ ಪಾಠ ಇಲ್ದೆ
ಟೀಚರ್ ಏಟು ತಿನ್ದೆ
ಎಲ್ಲಾ ಕಲಿತು ಬಿಟ್ಟೆ
ಗಗನಕೆ ಹಾರಿ ಬಿಟ್ಟೆ.
*****