ನಾನು ನಿನಗೆ ಋಣಿಯಾಗಿ

ನಾನು ನಿನಗೆ
ಋಣಿಯಾಗಿರಲೇ ಬೇಕು
ನನ್ನದೆಂಬುದೇನಿದೆ ಇಲ್ಲಿ!
ಎಲ್ಲಾ ನಿನ್ನಯಾ
ಒಡೆತನದಲ್ಲಿರುವಾಗ ಹರಿಯೇ||

ನೀನೇ ನಮ್ಮೆಲ್ಲರ
ಕೃಪಾಪೋಷಕನಾಗಿರುವಾಗ|
ನೀನು ನಮ್ಮೆಲ್ಲರ
ತಿದ್ದಿ ತೀಡಿ ರೂಪಿಸುತ್ತಿರುವಾಗ|
ಜೀವ ಜಂಗುಳಿಗೆ
ಅನ್ನಾದಿಗಳ ಸೃಷ್ಟಿಸುತಿರವಾಗ||

ಹರಿ ನೀನೆ ಎಲ್ಲರ
ಮೋಕ್ಷಕಾರಕನಾಗಿರುವಾಗ|
ಹರಿ ನೀನೇ ನಮ್ಮೆಲ್ಲರ
ಬಂಧು-ಮಿತ್ರನೆನಿಸಿರುವಾಗ||
ಹರಿ ನೀನೇ ಚರ, ಜಲಾಚರ
ಸ್ಥಿರ ಸುಸ್ಥಿರಕೆ ಕಾರಣನಾಗಿರುವಾಗ||

ಹರಿ ನೀನೇ ನನ್ನಯ
ಜನ್ಮಕಾರಣ ನಾಗಿರುವಾಗ|
ಹರಿ ನೀನೇ ನನ್ನಯ
ಮಾರ್ಗದಶಕನಾಗಿರುವಾಗ|
ಹರಿ ನೀನೇ ನನ್ನಯ
ಆತ್ಮೋದ್ಧಾರಕನಾಗಿರುವಾಗ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೆಂಡದ ಹಾಡು
Next post ಬೇಡವೆನಗಿನ್ನೇನು!

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಮೇಷ್ಟ್ರು ವೆಂಕಟಸುಬ್ಬಯ್ಯ

    ಪ್ರಕರಣ ೧೨ ಜನಾರ್ದನಪುರಕ್ಕೆ ರಂಗಣ್ಣ ಹಿಂದಿರುಗಿದ್ದಾಯಿತು. ತಿಮ್ಮರಾಯಪ್ಪ ಹೇಳಿ ಕೊಟ್ಟಿದ್ದ ಹಾಗೆ ಕಲ್ಲೇಗೌಡರಿಗೆ ಕಾಗದಗಳನ್ನು ಬರೆದದ್ದೂ ಆಯಿತು. ಕಡೆಗೆ ರಿಜಿಸ್ಟರ್ಡ್ ಕಾಗದವನ್ನೂ ಅದಕ್ಕೆ ಒಂದು ಜ್ಞಾಪಕದೋಲೆಯನ್ನೂ ಕಳಿಸಿದ್ದಾಯಿತು.… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…