ಮುಗಿಲ ಮಲ್ಲಿಗಿ ಅರಳಿತ್ತ
ಬೆಳ್ಳಿ ಬಣ್ಣ ಹರಡುತ ರಾತ್ರಿ ಕರಿಯನೇರಿ ಬರುತ್ತಿತ್ತ
ಬೆಳ್ಳಿಮೋಡ ಚದುರಿ ಬೆಳ್ಳಿ ಚುಕ್ಕಿ ಮೂಡಿ
ಬಾನು ಪುಷ್ಪಗಳ ರಮ್ಯ ತಾಣವಾಗಿತ್ತ
ಪ್ರಾಣಿ ಪಕ್ಷಿ ಗೂಡಸೇರತಿರಲು
ಜಗಕೆ ನಿಶೆಯು ದಾದಿಯಾಗಿ ಬಂದಿತ್ತ
ಮೊದಲ ರಾತ್ರಿ ಸಂಗಾತಿ ಕಂಡು ಸ್ಪರ್ಶಕೆ
ಮನ ಮಿಡುಕಿ ಪ್ರಶ್ನೆಯೊಂದು ಕಾಡುತಿತ್ತ
ನಿದ್ದೆಯೊಳಗಿದ್ದ ಕಾಗೆಗಳ ಮ್ಯಾಗ
ಶರವೇಗದಲಿ ಬಂದೊಂದು ಗೂಗಿ ಕುಕ್ಕುತಿತ್ತ
ಗೌಡರ ಆಳೊಂದು ಕರೆಯಲು
ಉಸಿರು ಮೆತ್ತಗಾಗಿ ಸ್ವಾತಂತ್ರ್ಯ ಕೈ ಬಿಟ್ಟಿತ್ತ
ಕಟು ರೋಷ ಉಕ್ಕಿ
ಕಣ್ಣು ಕೆಂಪಡರಿ
ಹಲ್ಲು ಕಟ-ಕಟನೆ ಕಡಿದಿತ್ತ
ಆದರೇನು ಮಾಡಲಿ
ನಾನಾಗಿದ್ದೆ ಜೀತದೆತ್ತ
*****