ಈ ಗತಿಶೀಲ ಜಗದಲ್ಲಿ

ಈ ಗತಿಶೀಲ ಜಗದಲ್ಲಿ
ಅತಿಯಾಗದೆ ಇರು ಇತಿಯಾಗದೆ ಇರು
ಶ್ರುತಿ ಮಾಡಿದ ವೀಣೆಯ ಹಾಗಿರು

ನುಡಿಸುವ ಗಾಯಕ ನುಡಿಸುವ ವೇಳೆಗೆ
ನಡೆಸುವ ಗುರು ನಡೆಸುವ ವೇಳೆಗೆ
ತಡವರಿಸುವ ಭಯ ಯಾತಕೆ ಹೇಳು

ಮಗುವಿನ ಸೋಜಿಗ ಅಂತೆಯೆ ಇರಲಿ
ನಗುವಿನ ಚೆಲುವು ಮಾಯದೆ ಇರಲಿ
ಮುಗಿಲ ರೂಪಗಳು ಬದಲಾಗುತ ಇರಲಿ
ಹಗಲಿರುಳುಗಳು ಮುಗಿಯದೆ ಇರಲಿ

ಮಿಡಿಯಲಿ ಮನ ಮೋಹನ ಮುರಲಿಗೆ
ತುಡಿಯಲಿ ಎದೆ ಜೀವನ ಪ್ರೀತಿಗೆ
ಒಡಲಾಳದ ನಿಜ ಕ್ಷಣದಿಂದ ಕ್ಷಣಕೆ
ತಡೆಯಾಗಲಿ ಸಂಕಲ್ಪ ಹಿಂಸೆಗೆ

ಇರು ದಾರಿಯ ಬೆಳಕಿನ ಹಾಗೆ
ಸುರಿ ಅರೆಗಾಲದ ಮಳೆಯ ಹಾಗೆ
ಆರ್ದ್ರವಾಗು ಬುದ್ಧ ಭಗವಾನನ ಕರುಣೆಯ ಹಾಗೆ
ನಿದ್ರಿಸುವುದಾದರೆ ನಿದ್ರಿಸು
ತಾಯ ತೊಡೆಯಲಿ ಹಸುಳೆ ನಿದ್ರಿಸುವಂತೆ
*****

One thought on “0

Leave a Reply to ಆನಂದ(ಜಾನಕಿತನಯಾನಂದ) Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೪
Next post ನನ್ನಯ ಪ್ರೀತಿಯನು

ಸಣ್ಣ ಕತೆ

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

cheap jordans|wholesale air max|wholesale jordans|wholesale jewelry|wholesale jerseys