ಗಾಂಧಿ.
ಸತ್ತು ಹೋಗಿರುವ ಗಾಂಧಿ
ನೀನೂ ಒಬ್ಬ ಮನುಷ್ಯ
ಭೇದ ಭಾವವ ಅಳಿಸಲು
ಹರಿಜನೋದ್ಧಾರದ
ಮಾತುಗಳನ್ನುದುರಿಸಿದ ಗಾಂಧಿ;
ತುಂಡು ಲಂಗೋಟಿಯ ಉಟ್ಟು
ಆಸರೆಗಾಗಿ ಕೈಯಲ್ಲಿ
ಕೋಲು ಹಿಡಿದ ಗಾಂಧಿ.
ಆಸಮತೆಯ ಅಗ್ನಿಗೆ
ಆಹುತಿಯರಾಗಿರುವೆವು ನಾವು
ಆ ಧಣಿಯರ ಕಾಲೀಗೆ
ಚಪ್ಪಲಿ ಮೆಟ್ಟು ಹೊಲಿದು
ಬರಿಗಾಲಿನಿಂದ
ತಿರುಗುತ್ತಿದ್ದೇವೆ ಗಾಂಧಿ;
ನಮ್ಮ ಕೆಂಪನ್ನು ರಕ್ತ ಸುಟ್ಟು
ಕಪ್ಪನ್ನ ಮೋಡವಾಗುತ್ತಿದೆ.
ಈ ದೇಶದ ಚರಿತ್ರೆಯಲ್ಲಿ
ಗುಡಿಸಲುಗಳ ಸುಡಿಸಿಕೊಂಡ
ಜೀವಂತ ಬೇಯಿಸಿಕೊಂಡ
ದುಡುಮೆಯನು ಮಾಡಿಕೊಂಡ
ಜನತೆ;
ಗಾಂಧಿ, ಗಾಂಧಿಗಳ ಬಗ್ಗೆ
ಸತ್ಯ ಅರಿಯುವದು
ಸರಿಯಲ್ಲವೇ ಗಾಂಧಿ?
*****