ಶೂನ್ಯ ಸಂಪಾದನೆಯೆ ಸುಂದರ

ಶೂನ್ಯ ಸಂಪಾದನೆಯೆ ಸುಂದರ
ಬಿಂದು ರೂಪವೆ ಮಂದಿರ
ಸಾಕು ಬಣ್ಣಾ ಕೋಟಿ ಕಣ್ಣಾ
ಪ್ರೇಮ ಪೌರ್ಣಿಮೆ ಸುಖಕರ

ಡೊಂಬು ಡೊಗರು ಡೊಂಕು ಯಾತಕ
ಸಾಕು ಕಾಡಿನ ಯಾತನಾ
ಮ್ಯಾಲ ಧೂಳಿ ಗೂಳಿ ಧಾಳಿ
ಬ್ಯಾಡ ಕಡಲಿನ ಮಂಥನಾ

ಅವರು ಹಾಂಗ ಇವರು ಹೀಂಗ
ಒಳಗ ನಡದಿದೆ ಲಟಿಪಿಟಿ
ನೋಡು ಗೆದ್ದಲು ಹುಳಾ ಹೊಕ್ಕಿದೆ
ಮನದ ಮಂದಿರ ಗಡಿಬಿಡಿ

ಏನು ಯಾಕ ಹೆಂಗ ಎಂಬ
ಭೂತ ಬೆಂತರ ಢಗಢಗಿ
ಸದಾ ಕಸಿವಿಸಿ ಮನದ ಗುಸಿ ಗುಸಿ
ಸಾಕು ಮಂಗನ ಮುಸಿ ಮುಸಿ

ಮ್ಯಾಲ ಮ್ಯಾಲ ಮ್ಯಾಲ ಹಾರಲೆ
ತಳದ ತಳಕ ಇಳಿಯಲೆ
ಅಲ್ಲಿ ಬಯಲು ಇಲ್ಲಿ ಬಯಲು
ಬಯಲ ಲಿಂಗವ ಕಾಣಲೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿಖರ ಸಂಖ್ಯೆ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೯೩

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…