ತಾಯಿ ಸರಸ್ವತಿ

ಬೇಗನೆ ಬಾರಮ್ಮಾ ತಾಯಿ ಸರಸ್ವತಿ
ಬೇಗನೆ ಬಾರೇ ಮನಮಂದಿರಕೆ || ಪ ||

ಚಿತ್ತ ಸರಸಿಯನು ತಿಳಿಗೊಳಿಸಮ್ಮಾ
ನಿತ್ಯವು ಅರಳಲಿ ಹೃದಯಕಮಲವಲ್ಲಿ
ಭಾವ ಸುಗಂಧವ ಎಲ್ಲಿಡೆ ಬೀರಲಿ
ಪಾವನಗೊಳಿಸೇ ಅದರಲಿ ಕುಳಿತು || ೧ ||

ಎದೆಯ ಬಟ್ಟಲು ಭಕ್ತಿ ತೀರ್ಥದಿ ತುಂಬಿ
ಹದವಾಗಿ ತುಳುಕಲಿ ಕಂಬನಿ ಧಾರಾ
ತೊಳೆದು ಹೋಗಲಿ ನನ್ನ ಮಲಿನತೆಯೆಲ್ಲಾ
ಹೂ ಹಗುರಾಗಲಿ ಜೀವನ ಭಾರಾ || ೨ ||

ಪಾಪ ಕೂಪಗಳು ಅಳಿಯಲಿ ತಾವೇ
ತಾಪ ತಲ್ಲಣಗಳು ಬಾಧಿಸದಿರಲಿ
ದೋಷರಾಶಿ ಕಸ ಉರಿದು ಹೋಗಲಿ
ಪೋಷಿಸುತಲಿ ನೀ ನೆಲೆಸಿರು ತಾಯಿ || ೩ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೂಲಿಯಾನ
Next post ಹಿಂದೂಮುಸಲ್ಮಾನರ ಐಕ್ಯ – ೩

ಸಣ್ಣ ಕತೆ

 • ತಿಥಿ

  "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

 • ಬಸವನ ನಾಡಿನಲಿ

  ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

 • ಕೊಳಲು ಉಳಿದಿದೆ

  ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

 • ಅಜ್ಜಿಯ ಪ್ರೇಮ

  ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

 • ಕಲಾವಿದ

  "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…