ನಿನ್ನ ದಯೆಯಿಂದಲೇ

ನಿನ್ನ ದಯೆಯಿಂದಲೇ
ನಾ ನಿನ್ನೀ ಜಗದಲಿ ಕಣ್ಣ ತೆರೆದಿರುವೆ|
ನಿನ್ನ ಕೃಪೆಯಿಂದಲೇ
ನಾನಿಲ್ಲಿ ನರನಾಗಿ ಜನ್ಮ ತಳೆದಿರುವೆ|
ಏನು ಪುಣ್ಯವೊಕಾಣೆ
ಎನ್ನ ತಾಯಿತಂದೆಯ ಮೇಲಾಣೆ
ನಾ ಧನ್ಯನಾಗಿರುವೆ|
ನಿನಗೆ ಸದಾ‌ಋಣಿಯಾಗಿರುವೆ||

ನನ್ನೆಲ್ಲಾ ಇಷ್ಟಾರ್ಥಗಳ
ನನಗರಿವಿಲ್ಲದೆ ನೀ ಪೂರೈಸುತಾಬಂದಿರುವೆ|
ನನಗಸಿವಾದಾಗಲೆಲ್ಲಾ ಸಮಯ ಸಮಯಕೆ
ಅನ್ನಾದಿಗಳನಿತ್ತು ನೀ ಸಂತೊಷ ಪಡಿಸಿರುವೆ||

ನನ್ನನಿಷ್ಟುದಿವಸ ನೀ ಕೈ ಹಿಡಿದು ಸಲಹಿ
ಇಲ್ಲಿಯವರೆಗು ತಂದಿರುವೆ|
ನೀ ಎಲ್ಲಿವರೆಗು ಕರೆದೊಯ್ಯುವೆಯೊ
ಅಲ್ಲಿವರೆಗು ನಾಬರಲು ಸಿದ್ಧನಿರುವೆ||

ನನ್ನ ಕರ್ಮಕ್ಕನುಸಾರವಾಗಿ
ನನ್ನ ಕರ್ತವ್ಯವನು ನೀ ನಿಗದಿಪಡಿಸಿರುವೆ|
ನಿನ್ನಯ ನಿಯಮದಡಿ ನಾ
ನಿಜಕೂ ಸುಖವಾಗಿರುವೆ
ಬೇಕು ಇನ್ನೇನು ಸಾಕು ಈ ನರಜನ್ಮಕೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನವಳು
Next post ಹಾಳು

ಸಣ್ಣ ಕತೆ

 • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

  ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

 • ಗೋಪಿ

  ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

 • ನಿರಾಳ

  ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

 • ಮಂಜುಳ ಗಾನ

  ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

 • ಸಂಶೋಧನೆ

  ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…