ಮಾತಲಿ ಮಮತೆ ತುಂಬಿರಬೇಕು

ಮಾತಲಿ ಮಮತೆ ತುಂಬಿರಬೇಕು
ಮಾತಲಿ ಕರುಣೆ ಕಾಣುತಿರಬೇಕು|
ಮಾತಲಿ ಹಿತ ತೋರುತಿರಬೇಕು
ಮಾತು ಮಾತಲಿ ಸತ್ಯಮೆರೆಯುತಿರಬೇಕು||

ಮಾತಲಿ ಪ್ರೀತಿ ತೇಲುತಿರಬೇಕು
ಮಾತಲಿ ವಾತ್ಸಲ್ಯ ಕಾಣಸಿಗಬೇಕು|
ಮಾತಲಿ ಸ್ನೇಹಹಸ್ತವದು ಸಿಗಬೇಕು
ಮಾತು ಅಂತರಂಗದ ಕದವ
ತೆರೆಯುವಂತಿರಬೇಕು|
ಮಾತಲಿ ಭಕ್ತಿ ಮನೆಮಾಡಿರಬೇಕು
ಮಾತು ಸೂರ್ಯಪ್ರಭೆಯಂತೆ ಪ್ರಕಾಶಿಸುತಿರಬೇಕು|
ಮಾತು ಹುಣ್ಣಿಮೆಯ ರಾತ್ರಿಯಲಿ
ಬೆಳಗುವ ತುಂಬು ಚಂದ್ರಮನಂತಿರಬೇಕು||

ಮಾತಲಿ ಔಚಿತ್ಯ ಔದಾರ್ಯತೆ ಇರಬೇಕು
ಮಾತು ಮುತ್ತಿನಂತೆ ಹೊಳೆಯುತಿರಬೇಕು|
ಮಾತಲಿ ಆಮಂತ್ರಣ ಆಹ್ವಾನತೆ ಬರಬೇಕು
ಮಾತು ನೊಂದವರ ಮನಮುಟ್ಟುತಿರಬೇಕು|
ಮಾತು ದೇವರ ಗುಡಿಯಲಿ ನಂದಾದೀಪದ
ಜೊತೆ ಆಗಾಗ ಮೊಳಗುವ ಘಂಟಾನಾದದಂತಿರಬೇಕು|
ಮಾತು ಮಡಕೆಯ ತೂತಾಗದೆ ಮೌನದ
ಬೆಲೆಗಿಂತ ಬೆಳ್ಳಿ ಬೆಳಕಾಗಬೇಕು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉತ್ತರ ಹೇಳು
Next post ಶುದ್ಧವಾಗಲಿ ಅಂತರಂಗ

ಸಣ್ಣ ಕತೆ

 • ವಾಮನ ಮಾಸ್ತರರ ಏಳು ಬೀಳು

  "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

 • ಮುದುಕನ ಮದುವೆ

  ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

 • ಆ ರಾತ್ರಿ

  ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

 • ಬಲಿ

  ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

 • ಕೊಳಲು ಉಳಿದಿದೆ

  ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…