ಹೂವಾಡಗಿತ್ತಿ

ಹೂವಾಡಗಿತ್ತಿ ಹೂವಾಡಗಿತ್ತಿ
ಏಕೆ| ಹೀಗೆ ಆಡುತ್ತೀ ||

ಘಮ ಘಮಿಸೋ ಹೂವು
ಮನವ ತಟ್ಟಿತೇ ನಿನಗೆ
ಹೇಳೆ ಮಲ್ಲಿಗೆ ಅರಳೆ ||

ನಿನ್ನವನ ನೆನಪು ಕಾಡಿತ್ತೆ
ನೀನು ಕಟ್ಟಿದ ಹೂ ಮಾಲೆ
ನಾಚಿ ತಗ್ಗಿ ಸೆಳೆಯಿತು ನಿನ್ನ ||

ನೀನು ಕಟ್ಟಿದ ಹೂ ಬಿಡಿ
ಬಿಡಿಯಾಗಿ ಮೊಳಕ್ಕೆ
ಮಾರಿ ಮುಡಿಪಾಯ್ತೆ ಮುಡಿಗೆ ||

ಯಾವ ಹೂ ಯಾರಿಗೆ
ಮುಡಿಪು ನಿನ್ನ ಬುಟ್ಟಿ
ಬೆಲೆಗೆ ಬಾಗಿ ತಾಗಿತ್ತೆ ರೊಕ್ಕ ||

ಸುಗ್ಗಿ ಸಂಭ್ರಮ ಹಿಗ್ಗನ್ನು
ಹೆಚ್ಚು ನಿನ್ನ ಗಲ್ಲಕೆಂಪಾಯ್ತೆ
ಹೂವಾಡಗಿತ್ತಿ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳುದಿಂಗಳಲ್ಲಿ ಸೂರ್ಯಕಾಂತಿಯ ನೆರಳು
Next post ಆಕಾಶದಲ್ಲೊಂದು ನೆಲೆಯ ಹುಡುಕುತ್ತಾ….

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…