ಎರಡು ಹೊಸ ಭೂಗ್ರಹಗಳ ಶೋಧ

ಎರಡು ಹೊಸ ಭೂಗ್ರಹಗಳ ಶೋಧ

ಈಗಿರುವ ಗ್ರಹಗಳಲ್ಲಿ ಜೀವಸಂಕುಲದ ಅನ್ವೇಶಣೆ ಒಂದೆಡೆ ಸಾಗಿದರೆ ಇದರ ಜೊತೆಗೆ ಹೊಸ ಭೂಗ್ರಹಗಳ ಹುಡುಕಾಟವೂ ನಡೆಯುತ್ತಿದ್ದು ಎರಡು ಹೊಸ ಭೂಗ್ರಹಗಳನ್ನು ಸ್ವಿಡ್ಜರ್ ಲ್ಯಾಂಡಿನ ಜಿನಿವಾ ವೇದಶಾಲೆ, ಮತ್ತು ಅಮೇರಿಕನ್ ಖಗೋಳ ವೇದ ಶಾಲೆಗಳು ಕಂಡು ಹಿಡಿದಿವೆ.

ಈ ಎರಡು ಭೂಗ್ರಹಗಳು ನಮ್ಮಿಂದ ೩೫ ಜ್ಯೋತಿವರ್‍ಷಗಳ ಅಂತರದಲ್ಲಿವೆ, ಎಂದು ವಿಜ್ಞಾನಿಗಳು ಅಭಿಪ್ರಾಯ. ಇದರಂತೆ ೭೦ ವರ್ಜಿನಿಸ್, ಮತ್ತು “೪೭ ಉರ್ಸೆ ಮೆಜೋರಿಸ್” ಎಂದು ಹೆಸರಿಸಲಾಗಿದ್ದು ಒಂದು ಕನ್ಯಾರಾಶಿಯಲ್ಲಿಯೂ ಇನ್ನೊಂದು ಸಪ್ತರ್ಷಿ ಮಂಡಲದಲ್ಲಿಯೂ ಇವೆ, ಎಂದು ಖಚಿತಪಡಿಸಿಕೊಳ್ಳಲಾಗಿದೆ. ರೇಡಿಯೋ ತರಂಗಗಳ ಮೂಲಕ ನಾವು ಸಂದೇಶ ಕಳಿಸಿದರೆ ೩೫ ವರ್ಷಗಳು ಬೇಕು. ನಕ್ಷತ್ರವಾಗಿದ್ದು ಸೂರ್ಯನಂತೆ ಇವೆ. ಇದನ್ನು ಸುತ್ತುವ ವರ್ಜಿನಿಯಸ್ – ೭೦, ನಮ್ಮ ಗುರುಗ್ರಹದ ಗಾತ್ರಕ್ಕಿಂತ ೮ ಪಟ್ಟು ದೊಡ್ಡದಿದೆ. ಪ್ರತಿ ೧,೧೦೦ ದಿನಗಳಿಗೊಮ್ಮೆ ತನ್ನ ಸೂರ್ಯನನ್ನು ಪ್ರದಕ್ಷಣೆ ಇವು ಹಾಕುತ್ತಿವೆ. ಇದರ ತಾಪಮಾನ ೮೦ ಸೆಲ್ಸಿಯಸ್‌ನಷ್ಟು ಇದೆ.

ಇವೆರೆಡೂ ಗ್ರಹಗಳಲ್ಲಿ ನೀರು ಇದ್ದು ಮತ್ತು ಜೀವಿ ವಿಕಾಸ ಉಂಟಾಗಿರುವ ಸಾಧ್ಯತೆ ಇದೆ, ಎಂಬುವುದು ವಿಜ್ಞಾನಿಗಳ ಅಭಿಪ್ರಾಯ. ಜೀವಿಗಳು ಅಥವಾ ಮಾನವ ವಾಸಯೋಗ್ಯ ವಾತಾವರಣ ಬಗ್ಗೆ ಯೋಚಿಸುತ್ತಿರುವ ಖಗೋಳಜ್ಞರಿಗೆ ಆಶಾದಾಯಕ ಅಂಶವೆಂದರೆ ಈ ಗ್ರಹಗಳಿಗಿರುವ ಚಂದ್ರರು. ಈ ಚಂದ್ರರ ಮೇಲೆ ವಾಸಯೋಗ್ಯವಾದ ಭೂಮಿ ಇದೆ ಎಂಬ ಆಶಾಭಾವನೆಯನ್ನು ಹೊಂದಿದ್ದಾರೆ. ಈ ಗ್ರಹಗಳ ಚಂದ್ರದಲ್ಲಿ ಸಾಗರ ಮತ್ತು ಮಳೆಯ ವಾತಾವರಣವಿದ್ದುದರಿಂದ ಮಾನವರಿಗೆ ವಸತಿಯೋಗ್ಯವೆಂದು ನಿರೀಕ್ಷಿಸಿದ್ದಾರೆ. ಈಗಾಗಲೇ ಇಂಥಹ ನಕ್ಷತ್ರಗಳನ್ನು ಮತ್ತು ಅಲ್ಲಿನ ಗ್ರಹಗಳ ಬೇಟಿಯಲ್ಲಿ ನಿರತವಾಗಿರುವ ಖಗೋಳ ಶಾಸ್ರಜ್ಞರಿಗೆ ಇದು ಹೊಸತಲ್ಲವಾದರೂ ಏನನ್ನೊ ನಿರೀಕ್ಷಿಸಿದಾರೆ. ಇನೂ ೬೦ ಗ್ರಹಗಳನ್ನು ಈ ತಂಡವು ವೀಕ್ಷಿಸತೊಡಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಲ್ಲರಂತಾನುಂ ಪ್ರಜಾರಾಜನಿರಲೇನು ತಪ್ಪು ? ಗೊಣಗಿದರೆ ?
Next post ಎಷ್ಟು ಜನ್ಮದ ಪುಣ್ಯದ ಫಲವೋ

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…