ಗೊರಕೆ ಸಾಕು

“ಗೊರಕೆ ಸಾಕು… ಪೊರಕೆ ಬೇಕು”
ಬಾಚಿದ್ದವರನು ನೋಡಿದ್ದಾಗಿದೆ
ದೋಚಿದ್ದವರನು ಸಹಿಸಿದ್ದಾಗಿದೆ //ಪಲ್ಲವಿ//

ಮಂತ್ರಕ್ಕೆ ಮಾವು ಉದುರುವುದಿಲ್ಲ
ತಂತ್ರಕ್ಕೆ ಅಂತಿಮ ಜಯವಿಲ್ಲ
// ಗೊರಕೆ ಬೇಕು… //

ಬೀದಿಗೆ ಬಂದರೆ ಜಯವೇ ಎಲ್ಲ
ಟೀವಿಯ ಮುಂದೆ ಕ್ರಾಂತಿಯು ಇಲ್ಲ
// ಗೊರಕೆ ಬೇಕು… //

ಹೆಗಲಿಗೆ ಹೆಗಲು ಹೆಜ್ಜೆಗೆ ಹೆಜ್ಜೆ
ಇನ್ಯಾತಕೆ ಆ ಲಜ್ಜೆ ಗೆಜ್ಜೆ
// ಗೊರಕೆ ಬೇಕು… //

ಕಲ್ಲು ಕಂಬಗಳು ನಡುಗಲೆಬೇಕು
ನಮ್ಮ ಧ್ವನಿಯು ಸಿಡಿಲಾಗಲೆಬೇಕು
// ಗೊರಕೆ ಬೇಕು… //

ನಿನ್ನೆಯ ಬಗ್ಗೆ ಚಿಂತೆಯು ಇಲ್ಲ
ನಾಳೆಯು ನಮ್ಮದೆ ಸಂಶಯವಿಲ್ಲ
// ಗೊರಕೆ ಬೇಕು… //
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಳೆದವು ಹತ್ತು ದಿನ
Next post ಧಾರ್ಮಿಕ ಹಿಂಸಾಚಾರಕ್ಕೆ ಕೊನೆ ಎಂದು?

ಸಣ್ಣ ಕತೆ

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…