ಓ ಗೆಳತಿ ನೀ ಹರೆಯದ ಒಡತಿ

ಓ ಗೆಳತಿ ನೀನು
ಹರೆಯದ ಒಡತಿ ||
ಎತ್ತ ನೋಡಿದರತ್ತ ರೆಕ್ಕೆಪುಕ್ಕ
ಹಚ್ಚಿ ಹಾರಾಡುವ ಹಕ್ಕಿ ||ನೀ||

ಭಾವನೆಗಳ ಹಿಡಿ ಬಿಟ್ಟಿಯಲ್ಲೇ
ಭಾಗ್ಯವಂತರ ಜೀವ ರಹದಾರಿಯಲ್ಲಿ
ಸುತ್ತಮುತ್ತ ತೂರಿ ಬಿಟ್ಟ ಕನಸುಗಳ
ನನಸಾಗುವ ಸಾಗುವಾ ಭ್ರಮಣೆಯಲ್ಲಿ ||

ಮನಸ ತಿಳಿಯೇ ನೀನು
ಮನಸಾಗಿನ ಮನಸು ಸ್ವಾರ್ಥಕಣಿವೆಯಲ್ಲಿ
ಆಗಸದೆ ಹಾರುವ ಹಕ್ಕಿ ನೀನು
ಹಿಡಿಯಲಾರೆ ಮನಸು ಚಂಚಲ ಓಟದಲ್ಲಿ || ಗೆಳತಿ ||

ಬಿಟ್ಟು ಬಿಡು ಗೆಳತಿ ಜಾಗೃತ ಸ್ವಪ್ನ
ಕಾಣ ಸಿಗುವೆ ಹಣತೆ ಬೆಳಕಲ್ಲಿ
ಪ್ರಖರತೆ ನಿಲ್ಲುವ ಬಾಳ ಹಾದಿ
ಪಯಣ ಭಾಗ್ಯವಂತರ ರಹದಾರಿಯಲ್ಲಿ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಯುತ್ತೇವೆ ನೀ ಬರುವ ತನಕ
Next post ಬುದ್ಧ ಬಂದ ದಾರಿಯಲ್ಲಿ

ಸಣ್ಣ ಕತೆ