ನನ್ನೊಳಗೆ ನಾನಿಲ್ಲ
ವೇದನೆ ತಾಳಲಾಗುತ್ತಿಲ್ಲ.

ಸತ್ಯವನು ದರ್ಶಿಸಿ
ಸಾರಿ, ಸಾರಿ ನಿಲಿಸಲು
ಆಗುತ್ತಿಲ್ಲ.

ನನಗೇ
ನಾನು
ವ್ಯರ್ಥನೆನಿಸುತ್ತಿದೆ.

ಸುತ್ತಲಿನ ಕತ್ತಲಿನಲಿ
ಕರಗಿ
ಹೋಗುತ್ತಿದ್ದೆನೇನೋ…
ಎನಿಸುತಿದೆ.
*****