ಹಿಂದೂ ದೇಶ ದೊಡ್ಡದು

ಹಿಂದೂ ದೇಶ ದೊಡ್ಡದು
ಹಿಂದೂ ಧರ್ಮವೆಂದೂ ಹಿರಿದು||
ಎಲ್ಲ ಧರ್ಮಿಯರೊಡನೆ ಬೆರೆತು
ಬಾಳುವ ಹಿರಿಮೆ ನಮ್ಮದು||

ನೂರು ಕುಲ, ನೂರು ಜಾತಿ
ನೂರು ಭಾಷೆ, ಹತ್ತಾರು ಧರ್ಮ |
ಆದರಿಲ್ಲಿ ಎಲ್ಲರೊಂದೇ ಎಂಬ ಭಾವ
ಜಾತಿ ವಿಷಬೀಜವ ಬಿತ್ತಲಿಲ್ಲಿ
ಬೆಳೆಯದೆಂದೆದಿಗೂ ಮೀರಿ ಸತ್ಯ ಧರ್ಮ||

ಉತ್ತರದ ಕಣಿವೆ ಕಾಶ್ಮೀರದಿಂದ
ದಕ್ಷಿಣದ ಕನ್ಯಾಕುಮಾರಿವರೆಗೂ|
ಪೂರ್ವದ ಮೇಘಾಲಯದಿಂದ
ಪಶ್ಚಿಮದ ಗಾಂಧಿಧಾಮವರೆಗೂ
ಹಬ್ಬಿದ ದೇಶ ನಮ್ಮದು|
ನಮ್ಮ ಕಾಯೆ ತಲೆ ಎತ್ತಿ
ನಿಂತಿಹುದು ಮಹಾ ಹಿಮಾಲಯ
ದೇಶವನು ರಕ್ಷಿಸೆ ಸುತ್ತುವರೆದಿಹುದು
ಹಿಂದೂ ಮಹಾಸಾಗರ, ಬಂಗಾಳಕೊಲ್ಲಿ||

ಗಂಗೆ, ಯಮುನೆ, ಸಿಂಧು
ಗೋದಾವರಿ, ಬ್ರಹ್ಮಪುತ್ರ|
ಕಾವೇರಿ, ಕಪಿಲ, ತುಂಗ, ಭದ್ರ
ಹರಿದಿಲ್ಲಿ ಬೆಳೆಸಿಹರು ಸಸ್ಯಕಾಶಿಯ ವನಸಿರಿ|
ರಾಮಾಯಣ ಮಹಾಭಾರತ
ಉದಯಿಸಿಹುದೀ ನೆಲದಲ್ಲಿ |
ಸಪ್ತ‌ಋಷಿಗಳ ನಾಡು, ಸಪ್ತನದಿಗಳ ಬೀಡು
ವಿಷ್ಣು ತನ್ನ ಹತ್ತು ಅವತಾರನೆತ್ತಿಹುದೇ ಇಲ್ಲಿ
ಶಿವನವತರಿಸಿ ಭೂಕೈಲಾಸವೆನಿಸಿಹುದಿಲ್ಲಿ||
*****

ಕೀಲಿಕರಣ :

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಿಂಡಿ ತಿಂದ ತಕ್ಷಣ ಟೀ, ಕಾಫಿ ಕುಡಿಯಬಾರದು
Next post ಜಾಲೀಮರದ ಹಾಡು

ಸಣ್ಣ ಕತೆ

 • ರಣಹದ್ದುಗಳು

  -

  ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… ಮುಂದೆ ಓದಿ.. 

 • ಅವರು ನಮ್ಮವರಲ್ಲ…

  -

  ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… ಮುಂದೆ ಓದಿ.. 

 • ಕರಿ ನಾಗರಗಳು…

  -

  ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… ಮುಂದೆ ಓದಿ.. 

 • ದೊಡ್ಡವರು

  -

  ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… ಮುಂದೆ ಓದಿ.. 

 • ಅವಳೇ ಅವಳು

  -

  ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… ಮುಂದೆ ಓದಿ..