ಬರಕೋ ಪದಾ ಬರಕೋ

ಬರಕೋ ಪದಾ ಬರಕೋ
ಇದರನ್ವಯ ತಿಳಿಕೋ                      ||ಪ||

ಸದಮಲಜ್ಞಾನದ ಕುದಿಉಕ್ಕಿ ಬರುವಾಗ
ನದರಿಟ್ಟು ನಿನ್ನೊಳು ಸದಮಲ ತತ್ವದಿ     ||ಅ.ಪ.||

ಅಡಿಗಣ ಪ್ರಾಸಕೆ ನಿಲುಕದ ಪದವು
ನುಡಿಶಬ್ದಕೆ ನಿಲುಕದ ಪದವು
ಎಡತೆರವಿಲ್ಲದೆ ನಡುವಿನಕ್ಷರದಿ
ಕಡುಶೂನ್ಯದ ಗುರುತದ ಗುರು ಪದವು       ||೧||

ಸರಿಗಮ ಸ್ವರ ಬಳೆದ ಅಸಮ ಸುಪದವು
ಹಸನಾಗಿ ನಿನ್ನೊಳು ಎಸೆಯುವ ಪದವು
ಕುಶಲದ ಐದಕ್ಷರವಿಹ ಪದವು
ರಸಿಕ ಸಾಧುಜನ ಹಾಡುವ ಪದವು         ||೨||

ಗುರುಗೋವಿಂದನ ಧ್ಯಾನದ ಪದವು
ವರ ಓಂಕಾರ ಪ್ರಣಮದ ಪದವು
ಧರೆಯೊಳು ಶಿಶುನಾಳಧೀಶನ ಪದವು
ದುರಿತ ದುರ್ಗುಣ ದೂಡುವ ಪದವು           ||೩||

****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರಣ ಮೃದಂಗ
Next post ಭ್ರಮೆಯೆಂಬ ಸತ್ಯ

ಸಣ್ಣ ಕತೆ