ಹರದಾರಿಯಳತಿ ಹೇಳ್ಕೊಡೋ ಮಕ್ಕಾಮದೀನಕೆ
ಬರದೋದಿ ಅಂಕಿ ಮೇಲ್ಕೊಡೋ ಗುಣಕಾರ ಧ್ಯಾನಕೆ  || ಪ ||

ಮದೀನದ ಪೂರ್ವಕ್ಕೆ ಒಂದು ಬೆಟ್ಟ ಇರುತದೆ
ಹದಿನೆಂಟು ವರ್ಗಡೆ ಆದು ಮೇಲ ಬರುತದೆ    ||೧||

ಆ ಶಹರದ ಉತ್ತರಕ್ಕೆ ಯೋಜನ ಎಷ್ಟು ಗುರುತದೆ
ಭೂವಾರದಾ ಐಸುರ ಲೆಕ್ಕ ಶಹರ ಬೆರಿತದೆ || ೨ ||

ದಕ್ಷಿಣದಿ ಶಿಶುವಿನಾಳಧೀಶನ ಬಿರುದು ಸಾರುತಿದೆ
ಈ ಕ್ಷಣದಿ ಹೇಳಿಹೋಗಲೋ ಐಸುರ ಶರತ ಆದೆ || ೩ ||

*****