ಬಳುಕುವ ಬಳ್ಳಿಗಳಿಗೆ
ಕಾಲುಗಳಿಲ್ಲ ಕೈಗಳೂ ಇಲ್ಲ
ಆದರೂ ಹತ್ತಿ ಕೂರುತ್ತವೆ
ಮರಗಳ ತಲೆ ಮೇಲೆ
ಬಿಗಿಯಾಗಿ ತಬ್ಬಿ ಬೀಸುತ್ತವೆ
ಅಪ್ಪುಗೆಯ ಬಲೆ
*****