ಮಹರಾಜ ರಾಜ ಸಮರ ಸಲ್ಲದೋ ಶಾಹಿನ್‍ಶಾ || ಪ ||

ಫೌಜ ಯಜೀದನ ವಾಜಗಜಬವ್ರತ
ಮೌಜಿಲೆ ಬರುವದು ತರಗಿಟಿತಾ
ಸಮರಾ ಸಲ್ಲದೋ ಶಾಹಿನ್‍ಶಾ || ೦ ||

ಕರ್ಬಲದಾರಿ ಕಠಿಣಕುಮಾರಿ
ಮಾಬ೯ಲ ಮಹಿಪತಿ ತರಗಿಟಿತಾ
ಸಮರಾ ಸಲ್ಲದೋ ಶಾಹಿನ್‍ಶಾ || ೨ ||

ಆಮರನ ಮೊದಲಾದ ಸುಮರನ ಮಕ್ಕಳು
ನಿಮಗ ತರುಬುವರೇನು ತರಗಿಟಿತಾ
ಸಮರ ಸಲ್ಲದೋ ಶಾಹಿನ್‍ಶಾ || ೩ ||

ಬೇಡಿಕೊಂಬುವೆ ನಾನು ಜೋಡಿಸಿ ಕರವನ್ನು
ಬೇಡೋ ಲಡಾಯಕ್ಕ ತರಗಿಟಿತಾ
ಸಮರಾ ಸಲ್ಲದೋ ಶಾಹಿನ್‍ಶಾ || ೪ ||

ಕತ್ತಲ ಶಹಾದತ್ತು ಮುಕ್ತಿಗೆ ಪಾಯತ
ಉತ್ತಮ ಶಿಶುನಾಳ ತರಗಿಟೀತಾ
ಸಮರ ಸಲ್ಲದೋ ಶಾಹಿನ್‍ಶಾ || ೫ ||
*****