ಫ್ಯಾನಿನಡಿಗೆ ಬಿದ್ದಾಗೆಲ್ಲ,
‘ಕೃಷ್ಣ’ ಅವನ ಕಾಲಚಕ್ರದ
ಮಾತುಗಳೆಲ್ಲ ನೆನಪಾಗುತ್ತವೆ
ಚಕ್ಕನೆ ‘ಆಫ್’ ಮಾಡುತ್ತೇನೆ
ಇನ್ನೊಂದಿಷ್ಟು ದಿನಗಳು
ನಾನೇ ನಾನಾಗಿರಲಿಕ್ಕೆ.
*****