ಕೋಳಿಯೇ ನೀನು ಕೋಳಿಯೇ ಹೀಂಗ
ಹಾಳುಮಾಡುದು ಕಂಡು ತಾಳಲಾರದು ಮನ  |ಪ|

ಅಚ್ಚ ಹಸರು ಕೆಂಪುಪುಚ್ಚದ ಕೋಳಿ
ಅಚ್ಯುತಗೆಚ್ಚರ ಕೊಟ್ಟಂಥ ಕೋಳಿ
ಹೆಚ್ಚಿನ ಬ್ರಹ್ಮನು ಮೆಚ್ಚಿದ ಕೋಳಿ
ಹುಚ್ಚೆದ್ದು ರುದ್ರನ ಕಚ್ಚಿದ ಕೋಳಿ              |೧|

ಬಲ್ಲಿದ ಯಜ್ಞಕ್ಕೆ ಸಲ್ಲದ ಕೋಳಿ
ಎಲ್ಲಾರು ಕೊಯಿಕೊಂಡು ತಿನ್ನುವ ಹಾಗೆ
ಕಲ್ಲಿನೊಳಗು ಪುಟ್ಟಿ ಕೂಗುವ ಕಾಲಕ್ಕೆ
ಮುಲ್ಲಾನ ಕೈಯೊಳು ಮೃತವಾದ ಕೋಳಿ      |೨|

ತಿಪ್ಪಿ ಕೆದರಿ ಹೊಟ್ಟೆಹರಕೊಂಬು ಕೋಳಿ
ಒಪ್ಪುಳ್ಳ ಹುಂಜನ ಹಡೆದಂಥ ಕೋಳಿ
ಛಪ್ಪನ್ನಾರ ದೇಶಕಕೆ ಹೆಸರಾದ ಶಿಶುನಾಳ
ಮುಪ್ಪಿನ ಒಡೆಯನ ಮೋಹದ ಕೋಳಿ          |೩|