ಅಪ್ಪಯ್ಯನವರ ಪಾದ ಕಂಡೆ

ಅಪ್ಪಯ್ಯನವರ ಪಾದ ಕಂಡೆ ಸ್ವಾಮಿ
ಗುಡಿಪುರ ಗ್ರಾಮದೊಳೇರಿಸಿ ಜಂಡೇ ||ಪ||

ಉಕ್ಕುತಿಹ ಆನಂದ ಭರದಿ
ಸಕ್ಕರೆಯನೋದಕಿಯ ಮಾಡಿ
ಓಂಕಾರ ಪ್ರಣಮವ ನೋಡಿ
ಬಹುಕಾಲ ಭಕ್ತರ ಕೂಡಿ
ಬಸವಾದಿ ಪ್ರಮಥರು ಹಾಡಿ ||೧||

ಅಂಬರಪುರವಿಂಬುಮಾಡಿ
ಸಾಂಬನೂರವಿಲೆ ಬೆಳಿಸ್ಯಾರೊ ಸಾಮಗ್ರಿಗೂಡಿ
ಶಂಭು ಶರಣರು ಸವಿದಾಡಿ
ಹತ್ತುವರ್ಷ ಆದ ಮೇಲೆ
ಸತ್ಯ ಮೆರೆವದು ಮಹಾತ್ಮರಲ್ಲೆ
ಗೊತ್ತುಹಿಡಿ ಗೋವಿಂದರಾಜನ
ಪ್ರಣಮ ಪಂಚಾಕ್ಷರ ಧ್ಯಾನಿಸಿ ನುಡಿ
ಪರಮಾರಾಧ್ಯ ಪಂಚಾಚಾರ್ಯರು ಕೂಡಿ ಆಡವನು ಆಡಿ
ಪರಮೇಶ್ವರ ಪಾರ್ವತಿ ಹಾಡಿ ||೨||

ಪರಲೋಕದವರೆಲ್ಲ ಕೂಡಿ
ಪಂಚಾಗ್ನಿಮಠದೊಳು ಅಡಿಗೆಯ ಮಾಡಿ
ಅನ್ನ ಪ್ರಸಾದವ ನೀಡಿ
ಚೆನ್ನಬಸವೇಶ್ವರರು ಬರುತಿರೆ ಪ್ರಮಥ ಗಣಂಗಳು ಕೂಡಿ
ಕಲ್ಯಾಣಪುರವನು ಮಾಡಿ
ಹರ ಶರಣರ ಲೀಲಾಮೃತ ಪಾಡಿ
ಕಲಿ ಕರ್ಮ ವಿಕಾರಿಗೆ ಜಾಡಿ
ಶಿಶುನಾಳ ಗ್ರಾಮಕ ಕೂಡಿ
ಉಳಿದವರು ಗುರುಪಾದ ಕೂಡಿ ||೩||
* * * *

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆದಿಬಸವ ಅನಾದಿಯಿಂದಲು
Next post ಮೈಲಾರ ಮಹದೇವ ಕೈಲಾಸಪತಿಯೆ

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…