‘ಹುಟ್ಟು ಕುರುಡನು ಇವನು, ಈ ಮಗನಿಗೆಂದೆನ್ನ ಮನೆಗೆ ಮನೆಯೇ ಹಾಳು ಆದ್ ಸಾಲವು ಸಾಲ- ದೆನುವಂತೆ ಆಗಿಹನು ಋಣಗೂಳಿಗಿವ ಮೂಲ ಓದುವದದೇಕಿವನು ಕೊಂಡು ಗ್ರಂಥಗಳನ್ನು? ಕುರುಡರಿಗೆ ಸಾಲೆ! ಭಲೆ! ಏನು ತಿಳಿಯುವದಣ್ಣ, ಆಳರಸುಮನೆತನಕೆ ! ಇದು ಎಂಥ ಅಳಿಗಾಲ? ...

ಸುಖಪಡುವ ಕಾಲದಲಿ ನಿದ್ರೆಯಾತಕೊ ಗೆಳೆಯ ನಿನ್ನ ಗೆಳತಿಯ ಮರೆತು ಯಾಕೆ ಹೋದೆ ಬೇಲಿ ಬನಗಳ ಆಚೆ ನೂರು ಕೆರೆಗಳ ಆಚೆ ಅಡಗಿರುವ ಸುಂದರಿಯ ಯಾಕೆ ಮರೆತೆ ಓ ಗೆಳೆಯ ಬಾ ಇಲ್ಲಿ ಈ ಮಳೆಯ ನಾಡಿನಲಿ ಆ ಹಳೆಯ ಜಂಗುಗಳ ನೀ ತೊಳೆದು ಬಾ ಈ ಹಸಿರ ಹೊಳೆಯಲ್ಲಿ ಈ ಹೂವ...

ಜಡವಾದ ಕವಿತೆಗಳನ್ನು ಬರೆದ ಕವಿಗಳು ಸಾಹಿತ್ಯ ಚರಿತ್ರೆಯಲ್ಲಿ ದಾಖಲಾಗಬಹುದು. ಹದವಾದ ಸಾಲುಗಳನ್ನು ಬರೆಯುತ್ತಲೇ ಶಾಶ್ವತವಾದ ಜಾಗವನ್ನು ಹಿಡಿದು ಕುಳಿತ ಕವಿಗಳೂ ಸಾಹಿತ್ಯ ಚರಿತ್ರೆಯಲ್ಲಿ ಸಿಗಬಹುದು. ಸಾಹಿತ್ಯ ಚರಿತ್ರೆ ಅನೇಕ ಸಾರಿ ತನ್ನ ಅಳತೆಗೋಲ...

ನಾನ್ ಇನ್ನಾರ್‍ಗೋ ನೋಡ್ದೇಂತ್ ಯೋಳಿ ಇಲ್ದಿದ್ ಅತ್ತೀನ್ ಇಂಜಿ ಸಿಕದಿದ್ ಬಿತ್ತಾನ್ ಎತ್ತೋಕ್ ನೋಡಿ ರಾಂಗ್ ಮಾಡ್ಬಾರ್‍ದು ನಂಜಿ. ೧ ನಿದ್ದೇಲ್ ಇಡ್ದಿ ನನ್ನ ಎಬ್ಬಿಸ್ತ ‘ನಿನ್ ಎಸರೇನ್?’ ಅಂತನ್ನು- ‘ಪುಟ್ನಂಜಿ’ ಅಂತನ್ದೆ ಓದ್ರೆ ಮಾತಿನ್ ಮೆಯ್ಗೆ ...

ನೆತ್ತಿಗೇರಿದ ಕಣ್ಣ ಕುರುಡು ದಬ್ಬಾಳಿಕೆಯೆ! ಪೊಳ್ಳು ಬಿಂಕದ ಮೂಗ ಮೇಲೆಮಾಡಿ, ಹಿಂಬರಿಕೆಯಡಿಯಲ್ಲಿ ಸಿಕ್ಕು ತೊತ್ತಳಿಗೊಂಡು ಸಾವವರ ನರಳಿಕೆಯ ಕಿವುಡಗೇಳಿ, ಇಲ್ಲಿಯೂ ಅಲ್ಲಿಯ ಕೊನೆಗಾಣದಾಸೆಗಳ ಅಂತರ ಪಿಶಾಚಿಯೇ! ತಣಿಸಲೆಳಸಿ ರಕ್ಷಕನು ಎಂದು ತಿಳಕೊಂಡ...

ಸಾಧಕನೊಬ್ಬ ಯಾವಾಗಲು ಪ್ರಶ್ನೆ ಉತ್ತರಗಳಲ್ಲಿ ಮಾತಾಡಿಕೊಳ್ಳುತ್ತಿದ್ದ. ಅವನಲ್ಲಿ ಗುರು ಶಿಷ್ಯನ ಎರಡು ಧ್ವನಿ ಮನೆಮಾಡಿತ್ತು. ಇವನಿಗೆ ಎರಡು ಕೊರಲು ಇರಬೇಕು ಎಂದು ಕೆಲವರು, ಇಲ್ಲ ಇವನಿಗೆ ಎರಡು ಹೃದಯ ಎಂದು ಕೆಲವರು, ಇಲ್ಲ ಇವನಿಗೆ ಎರಡು ಮಿದುಳು ...

ರುಚಿ ರುಚಿಯೆಣ್ಣೆ ಬಜ್ಜಿ ಬೋಂಡಗಳಂತೆಮ್ಮ ಬಾಚಿ ಪಿಡಿದಿರ್‍ಪ ಯಂತ್ರ ತಂತ್ರಗಳಿದರ ಔಚಿತ್ಯವನರಿತು ಬಳಸಲು ಬೇಕಷ್ಟಿಷ್ಟು ಯೋಚಿಸುತೂಟದ ಜೊತೆಯೊಳೊಂದಷ್ಟು ರುಚಿ ತಿಂಡಿಗಳನು ಹಿತಮಿತದಿ ತಿನ್ನುವಂತೆ – ವಿಜ್ಞಾನೇಶ್ವರಾ *****...

(ಹೋಗತಿರಲೋ ಬಲಿಗಾರಣ್ಣಾ) ಹೋಗತಿರಲೋ ಬಲಿಗಾರಣ್ಣಾ ಹೋಗತರ ಬೇಲೆ ಮೇಲೆ ಬಿಲ್ಲಿಗೆ ಮೂರ ಶಿನ್ನ || ೧ || ಚಂದ್ರ ನೋಡಿ ಚಾವಡಿ ನೀರ ಮುದ್ದುರಾಮ ನನ್ನ ಮತ್ತುಗಾರ || ೨ || ಅತ್ತೆ ಮಾವ್ನ ಧರ್‍ಮದಿಂದಿ ಹತ್ತು ಹೊನ್ನೊಂದ್ ಮೂಗತಿಯಾ || ೩ || ಬಾವಿಲ್ ...

ಬರೆದವರು: Thomas Hardy / Tess of the d’Urbervilles ನಾಯಕನು ಒಂದು ಸುತ್ತು ತೆಗೆದಿದ್ದಾನೆ ನೋಡಿದವರು “ಅಷ್ಟಿಲ್ಲದೆ ಹೇಳುತ್ತಾರೆಯೇ ರಾಜದೃಷ್ಟಿ ಬೀಳಬಾರದು ಅಂತ” ಎಂದು ಕೊಳ್ಳುವರು. ಆದರೂ ನಾಯಕನು ಆ ನಗುವಿನಲ್ಲಿ ಎ...

ಶ್ಯಾಮ ಬಂದಿಹೆ ನಾನಿಂದು ನಿನ್ನ ಸಾನಿಧ್ಯ ಅಡಿದಾವರೆಯಲಿ ಭಾವಗಳಲಿ ನಾ ತೇಲಿ ಹೋಗಿರುವೆ ಆದರೆ ನಿಂದಿರುವೆ ಬರೀಗೈಯಲಿ ಹೂವಿನ ಪದರು ಪದರುಗಳಲ್ಲೂ ನಿನ್ನ ಮಾಯೆಯ ಮೃದು ಮಂಜಿನ ಮುತ್ತು ಮತ್ತುಗಳಲ್ಲೂ ನಿನ್ನ ರೂಪವಾಗಿದೆ ಜಾದು ಆ ನೀಲಿ ಗಗನದ ತುಂಬ ನಿ...

1...78910

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...