ಶ್ಯಾಮ ಬಂದಿಹೆ ನಾನಿಂದು
ನಿನ್ನ ಸಾನಿಧ್ಯ ಅಡಿದಾವರೆಯಲಿ
ಭಾವಗಳಲಿ ನಾ ತೇಲಿ ಹೋಗಿರುವೆ
ಆದರೆ ನಿಂದಿರುವೆ ಬರೀಗೈಯಲಿ
ಹೂವಿನ ಪದರು ಪದರುಗಳಲ್ಲೂ
ನಿನ್ನ ಮಾಯೆಯ ಮೃದು
ಮಂಜಿನ ಮುತ್ತು ಮತ್ತುಗಳಲ್ಲೂ
ನಿನ್ನ ರೂಪವಾಗಿದೆ ಜಾದು
ಆ ನೀಲಿ ಗಗನದ ತುಂಬ
ನಿನ್ನದೇ ಕಂಗಳ ಛಾಯ
ಆ ಕೋಟಿ ರವಿ ತೇಜದಲಿ
ನಿನ್ನದೇ ಲೀಲೆ ಮಾಯೆ
ನಿನ್ನ ದರುಶನಕ್ಕಾಗಿ ನಿತ್ಯ
ನನ್ನ ಹೆಂಗರಳು ತವಕಿಸಿದೆ
ನನ್ನ ಕಂಗಳ ಮೂಲೆ ಮೂಲೆಯಲಿ
ನಿನ್ನ ರೂಪಕೆ ಹಪಹಪಿಸಿದೆ
ಎತ್ತೆತ್ತ ನೋಡಲಿ ನಿನ್ನ ಹೊಂಬೆಳಕು
ಆ ನಿನ್ನ ಲೀಲೆಗೆ ಕೊನೆಯುಂಟೆ
ಅಂಬೆಗಾಲಿಟ್ಟು ಅಂಗಲಾಚಿರುವೆ
ನೀನು ಎನ್ನ ಕಡೆಗಣಿಸುವ ದುಂಟೆ
ನಾಥ ಹುಸಿಗೊಳಿಸದಿರು ಈ ಭಾವ
ಧರಿಸಿರುವೆ ನಿನಗಾಗಿ ಈ ಜೀವ
ಭಾವಗಳರಿಯುವ ಭಾನು ವಲ್ಲಭ
ಮಾಣಿಕ್ಯ ವಿಠಲ ನೀನಾದೆ ದೇವ
*****