ಅಮ್ಮಮ್ಮ ಲಾಭದಾಯಕವೆಂಬೊಂದು ವಿಶೇಷಣಕೆಂಥ ಸಮ್ಮೋಹನ ಶಕ್ತಿಯೋ? ಸುಮ್ಮನೀ ಪದವನೆಸೆದೊ ಡೆಮ್ಮ ರೈತರು ಹೊಸ ಬೆಳೆಯ ನೆಚ್ಚುವರು ತಮ್ಮನೆ ಅಡವಿಟ್ಟು ನೆಲವ ಕಚ್ಚುವರು ಅಮ್ಮನಭಿಮಾನದಡಿ ಮುಗ್ಗರಿಸಿ ನೋಯುವರು – ವಿಜ್ಞಾನೇಶ್ವರಾ *****...

ಬದುಕಿನ ರಣಾಂಗಣದೆ ಮೋಹಪಾಶಗಳ ಬ್ರಹ್ಮಾಸ್ತ್ರ ಬಂಧನದೆ ಬಳಲುವ ಮನುಜನಿಗುಂಟೇ ಜೀವನ ಹಣ ಅಧಿಕಾರ ಅಂತಸ್ತು ಮಾಯಾಮೃಗದ ಬೆನ್ನೇರಿ ನಿರಾಸೆಯ ಕೂಪಕ್ಕೆ ಬೀಳುವ ಮನುಜನಿಗುಂಟೇ ಸುಖಜೀವನ ನೂರೆಂಟು ಸಮಸ್ಯೆಗಳ ಸುಳಿಯಲಿ ಸಿಕ್ಕು ಚಿಂತೆಯ ಚಿತೆಯ ಮೇಲೆ ಬೇಯು...

ಅರಿಯಬಹುದು ಕುರುಹಿಡಬಾರದು ಭಾವಿಸಬಹುದು ಬೆರೆಸಬಾರದು ಕಾಣಬಹುದು ಕೈಗೆ ಸಿಲುಕದು ಅಖಂಡ ನಿರಾಳವ ಕಪಿಲಸಿದ್ಧಮಲ್ಲಿಕಾರ್ಜುನಾ ನಿಮ್ಮ ಶರಣರು ಬಲ್ಲರು [ನಿರಾಳ-ನೆಮ್ಮದಿ, ಖಚಿತ, ಅವ್ಯಕ್ತ, ಆಕಾಶ] ಸಿದ್ಧರಾಮನ ವಚನ. ಕಪಿಲಸಿದ್ಧಮಲ್ಲಿಕಾರ್ಜುನ ಅಖಂಡ-...

೧ ಕೋಣೆಯ ಮೂಲೆಗೆ ಜಗುಲಿಯ ಕಟ್ಟಿ ! ಬೆಳ್ಳಿಯ ಮಂಟಪ ಮಾಡಿಸುತಿಟ್ಟಿ ! ಚಿನ್ನದ ಮುದ್ದಿಯ ಮೂರ್ತಿಯನಿಟ್ಟಿ ! ಎಡಬಲ ನಂದಾದೀಪಗಳಿಟ್ಟಿ ! ೨ ಹಗಲಿರುಳೆನ್ನದೆ ಕಾಯುತಲಿರುವಿ! ತಾಳ ತಂತಿಗಳ ಬಾರಿಸುತಿರುವಿ ! ಸವಿ ಸವಿ ತಿಂಡಿಯ ತೋರಿಸುತಿರುವಿ ! ಪುಣ್...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....