ಸಿಟ್ಟು ಮಾಡಿ ಸುಟ್ಟು ಬಿಡಿ ಕೆಟ್ಟ ಗುಣಗಳನ್ನ. ಸಂಸ್ಕರಿಸಿ ಕಾಮವೆಂಬ ಕೆಟ್ಟ ದಟ್ಟ ಹೊಗೆಯ ನಡುವೆ ವಿಹರಿಸಿ ಸತ್ತು ಹೋದ ಜನುಮವನ್ನ. ಬಗೆ, ಬಗೆ ಬಟ್ಟೆ ಬರೆ ಮರೆಯಲಿ ತುಂಬು ಜತನದಿಂದ ಅಡಗಿಸಿಟ್ಟಿರುವ ಕಾಳ ಮನಸ ಬಯಲು ಮಾಡಿ ನಿರಾಳವಾಗಿ ಬಿಡಿ. ಹುಟ...

ಹಾತೊರೆಯುತಿದೆ ಮನಸು ಓಡುವೆ ಏಕೆ ದೂರ ಕಾತರಿಸುತಿದೆ ಕನಸು ಕಾಡುವೆ ಏಕೆ ಅಪಾರ ನಗೆ ಚೆಲ್ಲಿದ ನೋಟ ಅಚ್ಚಾಗಿದೆ ಒಳಗೆ ಹುಚ್ಚಾಗಿ ಪಲುಕು ಕಿಚ್ಚಾಗಿದೆ ಬದುಕು ನೀನಿರದ ನಾನು ಶಶಿಯಿರದ ಬಾನು ಇದು ಅಲ್ಲ ಕವಿತೆ ನಂಬು ಇದನು ನೀನು ನೀನಿಡುವ ಹೆಜ್ಚೆ ನವ...

-೧- ಸೀತಾ, ‘ಬೇಗನೆ ಕಾಗದ ಬರಿ; ಕಾಯುತ್ತಿರುತ್ತೇನೆ, ಮರೆಯಬೇಡ’ ಎಂದು ಬರೆದಿರುವೆ. ಕಾಗದ ಬರೆಯದಿದ್ದುದಕ್ಕೆ ಕ್ಷಮಿಸು. ನೀನು ಯೋಚಿಸಿರುವಂತೆ ಬರೆಯದಿರುವುದಕ್ಕೆ ಕಾರಣ ನಿನ್ನನ್ನು ಮರೆತದ್ದೂ ಅಲ್ಲ-ಹೊಸ ಸ್ನೇಹಿತರೂ ಅಲ್ಲ. ನಿನಗಿಂತಲೂ ಹೆಚ್ಚಿನ...

ಹರಿಯುತಿರುವ ನದಿ ಹರಿಯುತಿರಲಿ ಬಿಡು ತಡೆಯನೆಂದೂ ಒಡ್ಡದಿರು ಬದುಕನೆಂದೂ ಕದಡದಿರು ಗಡಿಯನೆಂದೂ ನೀಡದಿರು ಆಶಯವನು ಬಿಡದಿರು ನಿರೀಕ್ಷೆಯನು ಸುಡದಿರು ಮೋಡ ಚಲಿಸುತ್ತದೆ ಬಿಸಿಲು ಬಾಡುತ್ತದೆ. ವರ್ಷಗಳು ಉರುಳುತ್ತವೆ ಅಂಗಾಂಗಗಳು ಕುಸಿಯುತ್ತವೆ. ಉಸಿರ...

ಕನಕ ಕುರಿ ಕಾಯುತ್ತಿದ್ದ ಕೃಷ್ಣ ದನ ಮೇಯಿಸುತ್ತಿದ್ದ ಪರಿಚಯವಾಯಿತು ಹೆಚ್ಚೇನಿಲ್ಲ… ಕನಕ ರೊಟ್ಟಿ ಒಯ್ಯುತ್ತಿದ್ದ ಕೃಷ್ಣ ಬೆಣ್ಣೆ ಹಚ್ಚುತ್ತಿದ್ದ ಹಂಚಿಕೊಂಡು ಉಂಡರು ಹೆಚ್ಚೇನಿಲ್ಲ… ಕನಕನಿಗೆ ಹಾಡು ಕಟ್ಟುವ ಹುಚ್ಚು ಕೃಷ್ಣನಿಗೆ ಕೊಳ...

ತೇಜಾನಿಗೆ ಒಂದೊಂದು ಗಂಟೆ ಒಂದೊಂದು ಯುಗದಂತೆ ಭಾಸವಾಗುತ್ತಿತ್ತು. ಬಹುಕಷ್ಟಪಟ್ಟು ತನ್ನ ಕಾತುರವನ್ನು ಯಾರಿಗೂ ಕಾಣದ ಹಾಗೆ ಅದುಮಿಟ್ಟಿದ. ಆರಾಗುತ್ತಿದ್ದಂತೆ ಎಸ್.ಐ. ಮತ್ತು ಎಚ್.ಸಿ. ಅವನ ಅಪ್ಪಣೆ ಪಡೆದು ರಾಮನಗರಕ್ಕೆ ಹೋಗಿಬಿಟ್ಟಿದ್ದರು. ಏಳಾಗು...

ಕರ ಮುಗಿದು ಬೇಡುವೆನು ನಿನಗೆ ಹರಸು ಬಾರಮ್ಮ ಭೂಮಿ ತಾಯೇ ಮುನಿಸಿಕೊಳ್ಳದಿರು ಅನವರತ ನೀ ನಮ್ಮ ಜೀವದಾತೆ. ಲೆಕ್ಕವಿಲ್ಲದ ದೇವರುಗಳೆಲ್ಲ ನಿನ್ನ ತೆಕ್ಕೆಯಲ್ಲಿ ಬೆಳೆದವರು ಯಾವ ದೇವರು ಕೊಡದಿರುವ ಕಾಣಿಕೆಗಳನ್ನು ನಿನ್ನಿಂದಲೇ ಪಡೆದಿಹೆವು. ಮುಕ್ಕೋಟಿ ...

ಮತ್ತೇರಿಸುವ ಗಾನದ ನಶೆ ಏರಿಸುವ ಪಾನದ ಕನಸಿನ ಲೋಕದಲ್ಲಿ ಉನ್ಮತ್ತರಾಗಿ ನರ್ತಿಸುತ್ತಿದ್ದಾರೆ ಗಾಜಿನ ಮನೆಯವರು. ನರ್ತಿಸದೆ ಇನ್ನೇನು ಮಾಡಿಯಾರು ? ಕಪ್ಪ ಕೊಡದೆ ಬಾಚಿ ಗಳಿಸಿದ್ದಾರೆ ಕಪ್ಪು ಹಣದ ಒಡೆಯರು. ತಿಂದು ಕುಡಿದು ಚೆಲ್ಲುತ್ತಿದ್ದಾರೆ ಉತ್ತ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...