ಆಗಿದ್ದಳು ಕನ್ನಡಮ್ಮ ನಮ್ಮ ತಂದೆ, ತಾತ, ಮುತ್ತಾತರಿಗೆ ತಾಯಿ. ಆದಳು ನಮಗೆ, ನಮ್ಮ ಮಕ್ಕಳಿಗೆ ಮಲತಾಯಿ. ನಮ್ಮ ಮೊಮ್ಮಕ್ಕಳು, ಮರಿಮಕ್ಕಳಿಗೆ ಯಾರಾಗುವಳು ? ತಾಯಿ. *****...

ಹಳ್ಳ ಇರುವ ಕಡೆಗೆ ನೀರು ಹರಿವುದು ನಾನು ನಿನ್ನ ಕಡೆಗೆ ಯಾಕೆ ಹರಿವುದು! //ಪ// ಮುಚ್ಚಿದರೂ ಕಣ್ಣು ಅಲ್ಲಿ ತೂರುವೆ ಬಚ್ಚಿಟ್ಟುಕೊಂಡು ಒಳಗೆ ಆಟವಾಡುವೆ ಇದು ನನ್ನ ತಪ್ಪೆ ಹೇಳು ನನ್ನ ನಲ್ಲೆ ನಾ ಏನಾಗುವೆನು ಎಲ್ಲ ನೀನು ಬಲ್ಲೆ! ಇರುವ ಬದುಕು ಒಂದು...

ತುಂಬಿದ ಬಸ್ಸು. ಮಾಸ್ತರರು ಬಹಳ ಪ್ರಯಾಸಪಟ್ಟು ಹೊರಗಿನಿಂದಲೇ ಕೈಚೀಲವನ್ನು ಎದುರಿನ ಸೀಟಿನಲ್ಲಿ ಮೊದಲೇ ಹಾಕಿದ್ದರಿಂದ ಸೀಟಿಗೆ ಸಮಸ್ಯೆಯಾಗಿರಲಿಲ್ಲ. ಸೆಕೆ ವಿಪರೀತವಾಗಿದ್ದುದರಿಂದ ಮಾಸ್ತರರು ಆಗಾಗ ಬೆವರು ಒರೆಸಿಕೊಳ್ಳುತ್ತಾ ಪರಿಚಿತರು ಯಾರಾದರೂ ...

ಕಡಲು ಬೆಟ್ಟಕ್ಕೆ ಹೇಳಿತು: “ನನ್ನ ತಳ ಮಂದರ, ನಿನ್ನ ಮುಡಿ ತಾರ, ನಡುವಿನ ಸ್ವರಸಹಿತ ನಾನೂ ನೀನೂ ಕೂಡಿ ಭೂಮಿ ಏನು ಗಾನಮನೋಹರ!” ಬೆಟ್ಟ ಕಡಲಿಗೆ ಹೇಳಿತು : “ಅದಕ್ಕೆಂದೇ ಆಗಸ ಪ್ರತಿ ರಾತ್ರಿ ತೊಡಿಸುತ್ತದೆ ಇಳೆಯ ಕೊರಳಿಗೆ ನಕ...

ಪಟ್ಟಣದ ತನ್ನ ಬಾಡಿಗೆ ಮನೆಯನ್ನು ಬಹುಮೊದಲೇ ಖಾಲಿ ಮಾಡಿ ಅಲ್ಲಿದ್ದ ತನ್ನ ಸಾಮಾನುಗಳನ್ನೆಲ್ಲಾ ಇಲ್ಲಿಗೆ ತಂದಿದ್ದ ತೇಜಾ. ಅವರೊಡನೆ ಅವನ ಸ್ಕೂಟರ್ ಕೂಡಾ ಬಂದಿತ್ತು. ಪೋಲೀಸು ವಾಹನವಿಲ್ಲದ ಕಾರಣ. ಈಗ ಅದನ್ನೇ ಉಪಯೋಗಿಸಬೇಕಾಗಿ ಬಂತು. ಮೊದಲೇ ಅದನ್ನ...

ಭಾರತ ಮಾತೆಯ ಮಮತೆಯ ಕುಡಿ ಪಿತನ ಪ್ರೀತಿಯಲಿ ಸಾಗುತ ಮುನ್ನಡಿ ಗುರುವಿನ ಗರಡಿಯಲಿ ಸಿದ್ಧಿಯ ನೀ ಪಡಿ ಜಾತಿ ಧರ್ಮಗಳ ಮೆಟ್ಟುತ ನೀ ನಡಿ ಭಾಷೆ ಭಾವನೆಗಳ ಸಂತೈಸುವ ನುಡಿ ನೀನಾಗು ನಮ್ಮೀ ಸಂಸ್ಕೃತಿಯ ಕನ್ನಡಿ ಸಾರು ಜಗಕೆಲ್ಲ ಮಾನವೀಯತೆಯ ಸಿರಿ ನೀನಾಗು ...

ಒಂದು ಕಾಲವಿತ್ತು ಆಗ ನನ್ನ ಕೂಗಿನಿಂದಲೇ ಬೆಳಗಾಗುತ್ತಿತ್ತು ಮುಂಜಾನೆಗೆ ಹೆಸರೇ ಇತ್ತು “ಕೋಳಿ ಕೂಗೋ ಹೊತ್ತು” ಎಂದು. ನಾನು ಕೂಡ ಸುಂದರ ಬಾತುಗಳಂತೆ ರಾಜ ಹಂಸಗಳಂತೆ. ನನಗೂ ಮೋಹಕ ನಡಿಗೆ ಇತ್ತು ದೊಡ್ಡ ಸಂಸಾರವಿತ್ತು ನನ್ನ ಮರಿಗಳೊಂ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...