ಬುದ್ಧ ಬಂದ ದಾರಿಯಲ್ಲಿ ನಾನು ಬಂದೆ ಬುದ್ಧ ನಿಂದ ದಾರಿಯಲ್ಲಿ ನಾನು ನಿಂದೆ ಬುದ್ಧ ಕೊನೆಗೆ ಹಿಡಿದ ದಾರಿ ಹಿಡಿಯದಾದೆ ಅವನು ಕಂಡ ಬೆಳಕ ನಾನು ಕಾಣದಾದೆ //ಪ// ಬುದ್ಧ ನುಡಿದ ಪ್ರತಿ ಮಾತು ಪಾರದರ್ಶಕ ಅದಕೆ ವ್ಯಾಖ್ಯಾನ ಗ್ರಂಥ ಅನಾವಶ್ಯಕ ನನ್ನ ಮೀರಿ...

ಓ ಗೆಳತಿ ನೀನು ಹರೆಯದ ಒಡತಿ || ಎತ್ತ ನೋಡಿದರತ್ತ ರೆಕ್ಕೆಪುಕ್ಕ ಹಚ್ಚಿ ಹಾರಾಡುವ ಹಕ್ಕಿ ||ನೀ|| ಭಾವನೆಗಳ ಹಿಡಿ ಬಿಟ್ಟಿಯಲ್ಲೇ ಭಾಗ್ಯವಂತರ ಜೀವ ರಹದಾರಿಯಲ್ಲಿ ಸುತ್ತಮುತ್ತ ತೂರಿ ಬಿಟ್ಟ ಕನಸುಗಳ ನನಸಾಗುವ ಸಾಗುವಾ ಭ್ರಮಣೆಯಲ್ಲಿ || ಮನಸ ತಿಳಿಯ...

ನೀ ಹುಟ್ಟಿದ್ದು ಇನ್ನೂ ಮೊನ್ನೆ ಎನ್ನುವಂತಿದೆ. ಪಿಳ ಪಿಳ ಕಣ್ಣು ಬಿಟ್ಟಿದ್ದು ಬುಳ ಬುಳ ಮೂತ್ರ ಬಿಟ್ಟಿದ್ದು ತಿಂಗಳು ಮುಂಚೆ ಹುಟ್ಟಿದ್ದೆಂದು ನಿನ್ನನ್ನ ನಾಲ್ಕು ದಿನ ದಪ್ಪ ಹತ್ತಿಯಲ್ಲಿ ಸುತ್ತಿಟ್ಟಿದ್ದು ಇನ್ನೂ ಕಣ್ಣಲ್ಲಿದೆ, ಪುಟ್ಟ ಕಂಠದಿಂದ ...

(ಶಿಶುನಾಳ ಷರೀಫ್ ಸಾಹೇಬರನ್ನು ನೆನೆದು) ಕುಣಿಕುಣಿವಳು ನಮ್ಮ ಕುಂಬಾರಗಿತ್ತಿ ಕೈಕಾಲಿಗೆ ಕೆಂಪು ರಂಗು ಹತ್ತಿ ನೋವು ನಲಿವುಗಳೆಂಬ ಭೇದ ಮರೆತು ಮಣ್ಣಿಗೆ ಮಣ್ಣು ಹದನಾಗಿ ಬೆರೆತು ತಿರುಗಿಸಿ ಭೂಲೋಕದ ತಿಗರಿ ಅದರೊಳಗೆ ಸಂಸಾರವೆಂಬ ಬುಗರಿ ಹೊಟ್ಟೆ ಹಸಿ...

ಸ್ವಾತಂತ್ರ್ಯಾ ನಂತರದ ಭಾರತ ದೇಶದಲ್ಲಿ, ಅದು ಕನ್ನಡನಾಡಿನಲ್ಲಿ ಕನಸುಗಳಿಗೇನು ಕೊರತೆಯಿರಲಿಲ್ಲ. ಜಾಗತಿಕ, ಪಾಶ್ಚಾತ್ಯ ದೇಶಗಳಂತೆ ನಾವು ಕೂಡ, ಶಕ್ತಿಶಾಲಿ, ಬಲಿಷ್ಠರಾಗಿ, ಹೆಚ್ಚು ಹೆಚ್ಚು ವೈವಿಧ್ಯಮಯ ವಸ್ತುಗಳನ್ನು ಉತ್ಪಾದಿಸಿ ಉಪಯೋಗಿಸುತ್ತಾ ಕ...

ಗುಂಡ: ಅಮ್ಮಾ ಯು.ಕೆ.ಜಿ ನಂತರ ನಾನು ಶಾಲೆಗೆ ಹೋಗೊಲ್ಲಾ ಅಮ್ಮ: ಯಾಕೋ ಗುಂಡ: ನಾನು ಜಾಬ್ ಮಾಡ್ತಿನಿ ಅಮ್ಮ: ಬರಿ ಯು.ಕೆ.ಜಿ.ಗೆ ಏನು ಕೆಲಸ ಸಿಗುತ್ತೆ? ಗುಂಡ: ಎಲ್.ಕೆ.ಜಿ. ಗರ್ಲ್ಸಗೆ ಟ್ಯೂಷನ್ ಮಾಡ್ತಿನಿ. *****...

ಉದ್ದ ಅಗಲಕ್ಕ ಲಕಲಕ್ಕ ಚೊಕಚೊಕ್ಕ ನಿನಕಂಡು ಆಗ್ಯಾರೆ ಹುಂಚಿಪಕ್ಕ ಪಾತರಗಿ ಪಕ್ಕಕ್ಕ ಲಕ್ಕಕ್ಕ ಲಡಿಯಕ್ಕ ಚಕಚಕ್ಕ ತೂಯ್ಯಾರೆ ರೊಕ್ಕಪಕ್ಕ ||೧|| ನಿನ ಸೆರಗು ಗಗನಕ್ಕ ನಿನ ತುರುಬು ಸಾಗರಕ ನೀಬಂದಿ ಓಗರಕ ನಗಿಮಾರೆ ಕಣ್ಣಾಗ ಕಂಡೋರು ಕಣ್ಣಾಗ ಸತ್ತಾರೆ ...

ಅವಳಿಗೆ ಬೇರೆ ಕೆಲಸವಿರಲಿಲ್ಲ. ತನ್ನ ಗೆಳತಿಯರ ಗಂಡಂದಿರನ್ನು ಗಡಸು, ಕುಡುಕ, ಮೋಸಗಾರ, ನಿರ್‍ದಯಿ, ಕಪಟಿ ಎಂದು ಹೇಳಿ ಲೇಬಲ್ ಹಚ್ಚುತ್ತಿದ್ದಳು. ಅವಳ ಗಂಡನ ಬಗ್ಗೆ ಯಾರಾದರು ಟಿಕೀಸಿದರೆ ಒಡನೆ “ನನ್ನ ಗಂಡ ಹೇಗಿದ್ದರೇನು? ನೀವು ಏನು ಹೇಳಬೇ...

ಕತ್ತಲ ಮಗ್ಗದಲ್ಲಿ ಬೆಳಕು ನೆಯ್ದವರು ಬೆವರಿನ ಜನ, ನಾವು ತವರಿನ ಜನ. ನಾಡ ಒಳಿತಿಗೆ ಸುಖವೆಲ್ಲ ಸುಟ್ಟು ರಕುತದ ಹನಿಹನಿಯನು ಕೊಟ್ಟು ಕನಸಿಗೆ ಕಿವಿ ಕಣ್ಣು ಕೊಟ್ಟೆವು ಬರಿ ಬೆತ್ತಲೆಯ ಉಟ್ಟೆವು. ಗುಡಿ ಗುಡ್ಡಗಳಲ್ಲಿ ಬರೆಸಿಕೊಂಡರು ಹೆಸರು ತುಳಿವ ನೆ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...