ಹೆರಿಗೆ
ಏಕಾಂಗಿಯಾಗಿ ಮಲಗಿದ್ದ ಇರುಳಿನ ಜೊತೆಗೆ ಬೆಳಕು ಬಂದು ಮಲಗಿತು ಮೆಲ್ಲಗೆ ಬಣ್ಣ ಬಂತು ಬಾನಿಗೆ ಹಾಡು ಬಂತು ಹಕ್ಕಿಗೆ ಸಂಪೂರ್‍ಣ ಶರಣಾಯಿತು ಅಬಲೆಯಾಗಿ ಇರುಳು ಬಲಾಢ್ಯ ಬೆಳಕಿಗೆ ಅದರ ಝಳಪಿಗೆ ಬಾಹು ಬಂಧನದ ಬಿಗಿಯಿಂದ ಬಿಡಿಸಿಕೊಂಡು ಏಳುವುದರೊಳಗೆ ಅಗಣಿತ ತಾರೆಗಳ ಹೆರಿಗೆ *****
ಪ್ರಕರಣ ೯ ಹಿಂದೆಯೇ ನಿಶ್ಚೈಸಿದ್ದಂತೆ ಆವಲಹಳ್ಳಿಯಲ್ಲಿ ಉಪಾಧ್ಯಾಯರ ಸಂಘದ ಸಭೆಯನ್ನು ಸೇರಿಸಲು ಏರ್ಪಾಟು ನಡೆದಿತ್ತು. ರಂಗಣ್ಣನು ಹಿಂದಿನ ದಿನ ಸಾಯಂಕಾಲವೇ ಆವಲಹಳ್ಳಿಗೆ ಬಂದು ಮೊಕ್ಕಾಂ ಮಾಡಿದನು. ಸಭೆಯಲ್ಲಿ ಕಾರ್ಯಕ್ರಮಗಳಲ್ಲ ಚೆನ್ನಾಗಿ ನೆರವೇರಬೇಕೆಂದು ಮಾಧ್ಯಮಿಕ ಪಾಠಶಾಲೆಯ ಮುಖ್ಯೋಪಾಧ್ಯಾಯರ ಮತ್ತು ಸಹಾಯೋಪಾಧ್ಯಾಯರ ನೆರವನ್ನು ಪಡೆದುಕೊಂಡಿದ್ದನು. ಜೊತೆಗೆ ಕೆಲವು ದೊಡ್ಡ ಪ್ರಾಥಮಿಕ ಪಾಠಶಾಲೆಗಳ ಅನುಭವಿಗಳೂ ದಕ್ಷರೂ ಆದ ಮುಖ್ಯೋಪಾಧ್ಯಾಯರನ್ನೂ ಸಹಾಯೋಪಾಧ್ಯಾಯರನ್ನೂ […]