ಮಾನಸ ಲೋಕದ ಪ್ರಭುವೆ ಮನ ಮಾನಸದ ಹೊನಲಿನ ವಿಭುವೆ  ||ಪ|| ಮುಗಿಲಿಗೂ ಮಿಗಿಲು ನಿನ್ನಯ ಹರವು ಕಡಲಿಗೂ ಹಿರಿದು ತಿಳಿವಿನ ಅಳವು ಸಮೀರನ ಹಿಂದಿಕ್ಕೂ ವೇಗದ ಲೀಲೆ ಅನಲನ ದಾಟಿಸೋ ಅಪುವಿನ ಓಲೆ ಮಾಯಾ ಮೃಗದ ನಯನದ ಮಿಂಚೊ ನಾನಾ ಛಾಯೆಯ ಥಳುಕಿನ ಸಂಚೋ ಕಾಂತ...

ಕರ್ಪುರದಾತಿ ಬೆಳಗಿರೆರ ಹರಗೆ ಕಾಮಿನಿಯಿರೆಲ್ಲಾ ಕರುಣಸಾಗರಗೆ || ಪ || ಅಪ್ಸರ ಸ್ತ್ರೀಯರು ಹರುಷಮನಸದಿ ರೂಪ ಲಕ್ಷಣವಂತರೆಲ್ಲರು ಮುಪ್ಪರ ಮನ ಮುಂದಿಟ್ಟು ಮಹಾಗುರು ಸರ್ಪಭೂಷಣ ಸಾಂಬಗೆ || ಅ. ಪ. || ವಾರಿನೋಟದ ವನಜಾಕ್ಷಿಯರು ಚಾರುತರದ ಚನ್ನಿಗ ಪ್ರ...

ಅಗ್ಗದರವಿ ತಂದು ಹಿಗ್ಗಿ ಹೊಲೆಸಿದೆನಂಗಿ ಹೆಗ್ಗಣ ವೈತವ್ವ ತಂಗಿ ಈ ಅಂಗೀ ||ಪ|| ಅಗಣಿತ ವಿಷಯದ ಆರು ಗೇಣಿನ ಕವಚ ಬಗಲು ಬೆವರನು ಕಡಿದು ಸಿಗದೆ ಹೋಯಿವ್ವ ತಂಗಿ ಈ ಅಂಗೀ ||೧|| ಬುದ್ಧಿಗೇಡಿಗಳಾಗಿ ನಿದ್ದಿ ಕೆಡಿಸಿಕೊಂಡು ಎದ್ದು ನೋಡಲು ಕರ್ಮ ಗುದ್ದಿ...

ಉಗ್ರಪ್ಪ ನಾಲ್ಕನೆಯ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಹ್ಯಾಟ್ರಿಕ್ ಸಾಧಿಸಿದ್ದ. ಅಭಿಮಾನಿಗಳು ಅತ್ಯಂತ ವೈಭವದಿಂದ ಅವನ ವಿಜಯೋತ್ಸವ ಆಚರಿಸಿದರು. ತೆರೆದ ವಾಹನದಲ್ಲಿ ಊರ ತುಂಬ ಮೆರೆಸಿದರು. ಗೆಲುವಿನಿಂದ ಬೀಗಿಕೊಂಡಿದ್ದ ಉಗ್ರಪ್ಪನ ಬಳಿಗೆ...

ಕಾರ್ಯಾಲಯದಲ್ಲಿ ಶಿಕ್ಷಣಾಧಿಕಾರಿಗಳು ಕಡತ ನೋಡುವಲ್ಲಿ ಮಗ್ನರಾಗಿದ್ದರು. ಹೊರಗೆ ಕೂಗಾಟ ಕೇಳಿಸಿತು. “ಧಿಕ್ಕಾರ…. ಧಿಕ್ಕಾರ…. ಹಲ್ಕಾ ಶಿಕ್ಷಕನಿಗೆ ಧಿಕ್ಕಾರ.” ಧ್ವನಿ ಜೋರಾಗಿತ್ತು. ಸಾಹೇಬರು ಎದ್ದು ಹೊರಗೆ ಬಂದರು. ಆ...

ಆಗ ನಾವೆಲ್ಲರೂ ರೈಲಿನಲ್ಲಿ ಪ್ರಯಣ ಮಾಡುತ್ತಿದ್ದೆವು; ಆಲಿಕಲ್ಲುಗಳು ಬಂಡೆಗಲ್ಲಿನಂತೆ ಬಿದ್ದು ನೀರಾಗುತ್ತಿದ್ದವು. ಲಾವಣಿ ಪದ, ಒಣಗಿಸಿ ಸುಟ್ಟ ಹಸುಮಾಂಸ, ಕಾಯಿಸಿದ ರಮ್ ಹೀರುತ್ತಿದ್ದೆವು. ಅವನ ತರಡಿನ ದರಿದ್ರ ಹೇನುಗಳು ನಮ್ಮ ತಲೆ ತಿನ್ನುತ್ತಿದ...

ಜಾತಿ ಮಾಡಬ್ಯಾಡಿರಿ ಪಂಚಾಯ್ತಿ ವಳಗೆ || ಜಾತಿ ಎಂಬುದು ಒಳರೋಗ ನ್ಯಾಯ ನೀತಿಗದು ಮೋಸಾದಗ ಜಾತಿ ಮಾಡಬ್ಯಾಡಿರಿ ಓಟು ಹಾಕುವಾಗ || ನಮ್ಮವನೆಂಬುದು ಸರಿಯಲ್ಲ ಒಂದೆ ಜಾತಿಗೆ ಅಧಿಕಾರವಲ್ಲ ಜಾತಿ ಮಾಡಬ್ಯಾಡಿರಿ ಸವಲತ್ತು ಕೇಳುವಾಗ || ಜಾತಿ ಮೀರಬೇಕೊ ಅಣ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....