ಒಬ್ಬ ಶಿಷ್ಯ ಹಸಿ ಜೇಡಿ ಮಣ್ಣಿನಲ್ಲಿ, ಬುದ್ಧನನ್ನು ಮಾಡಿ ಹಸಿವಿಗ್ರಹವನ್ನು ಪೂಜಿಸಿ, ಜಲ ಧಾರೆಯಿಂದ ಅಭಿಷೇಕ ಮಾಡುತ್ತಿದ್ದ. ಕೊಡಗಟ್ಟಲೆ ನೀರು ಸುರಿದಾಗ, ಹಸಿಮಣ್ಣಿನ ವಿಗ್ರಹ ಕರಗಿ ಹರಿದು ಹೋಗುತ್ತಿತ್ತು. ಇದನ್ನು ನೋಡುತ್ತಿದ್ದ ಗುರುಗಳು &#82...

ಅಧ್ಯಾಯ ಏಳು ಹೊಸಪೇಟಿ ಮೂಲೆಯಲ್ಲಿ ಒಂದಂಗಡಿ. ಕರೀಂಖಾನನು ಅಂಗಡಿಯ ಒಡೆಯ. ಅವನು ಮಾಡುತ್ತಿದ್ದುದು ಚಿಲ್ಲರೆ ಅಂಗಡಿಯ ವ್ಯಾಪಾರ. ಆದರೂ ಆ ಸುತ್ತಮುತ್ತಲಿನವರು ಯಾರೇ ಆಗಲಿ ಯಾವಾಗ ಬಂದು ಕೇಳಿದರೂ ಐದು.- ಹತ್ತು ರೂಪಾಯಿ ಸಾಲಕೊಡುವನು. ರೂಪಾಯಿಗೆ ಒಂ...

ಪ್ರಮಿಲಾ; ನಿನಗೇನೆಂದು ಓಲೆ ಬರೆಯಲಿ? ಯಾವ ಬಣ್ಣದ ಮಸಿಯಿಂದ ಓಲೆ ಬರೆಯಲಿ? ಹೊಳೆಯಿತು. ನಾನು ನಿನಗೆ ಯಾವ ಹಸ್ತದಿಂದ ವಚಸನನ್ನಿತ್ತಿದೆನೋ ಆ ಹಸ್ತವನ್ನೇ ಕುಕ್ಕಿ ಅದರ ನೆತ್ತರನನ್ನು ಹೀರಿ ಅದರಿಂದ ಈ ಓಲೆ ಬರೆಯುವದೇ ಉಚಿತವು. ನೀನು ಮರಾಠಾ ಜಾತಿಯವ...

ದಳವಾಯಿ ಪದವಿಯಲ್ಲಿದ್ದು ಹೈದರಲ್ಲಿಯು ನಂಜರಾಜಯ್ಯನನ್ನು ಕೊಣನೂರಿಗೆ ಕಳುಹಿಸಿದ ಬಳಿಕ ರಾಜಧಾನಿಗೆ ಬಂದು ಮೈಸೂರಿನ ಮುತ್ತಿಗೆಯಲ್ಲಿ ನಡೆದ ವೆಚ್ಚಕ್ಕಾಗಿ ತನಗೆ ಇದ್ದ ಆದಾಯ ಸಾಲದೆಂದೂ ಇನ್ನೂ ಹೆಚ್ಚಿನ ಆದಾಯವು ಬೇಕೆಂದೂ ರಾಜರಲ್ಲಿ ಅರಿಕೆ ಮಾಡಿದನು...

ವಸಂತ ಕಾಲ. ಎಲ್ಲೆಲ್ಲೂ ಚೆಲವು, ಶಿಷ್ಯ ಗುರುಗಳಲ್ಲಿಗೆ ಬಂದು “ನನಗೆ ಝನ್ ಬೋಧಿಸಿ” ಎಂದು ಬಿನ್ನವಿಸಿಕೊಂಡ. ಗುರುಗಳು ಹೇಳಿದರು- “ಎಲ್ಲೆಲ್ಲೂ ಹೂವು ಅರಳಿದೆ. ಚೆಲುವು ತುಂಬಿದೆ. ಗಾಳಿಯಲ್ಲಿ ಗಂಧ ಉಯ್ಯಾಲೆಯಾಡುತ್ತಿದೆ. ದುಂಬಿ ಹಾಡುತ್ತಿದ...

ಅಧ್ಯಾಯ ಆರು ಶಾಂಭವನಾನಂದರು ಪೂಜೆಯನ್ನುಮುಗಿಸಿ ಹೋಮಮಾಡಿ ಇಂದು ಬಹು ಸುಖಿಗಳಾಗಿದಾರೆ. ಪೂರ್ಣಾಹುತಿಯ ಕಾಲದಲ್ಲಿ ದೇವಿಯೇ ಬಂದು ಆಹುತಿಯನ್ನು ಸ್ವೀಕರಿಸಿದಳೆಂದು ಅವರ ಆನಂದಕ್ಕೆ ಪಾರವಿಲ್ಲ. ಭರತಾಚಾರ್ಯರು ವಿನಾ ಇನ್ನು ಯಾರೂ ಅಲ್ಲಿ ಇಲ್ಲ. ಅವರೊಡ...

ಆಗಷ್ಟೇ ಹಾಸಿಗೆಗೆ ಅಡ್ಡಾದ ಕೆರೆಕೇರಿಯ ಉಮ್ಮಣ್ಣ ಭಟ್ಟರಿಗೆ ಮಗ್ಗಲು ಬದಲಿಸುವ ಕೆಲಸನೇ ಆಗ್ಹೋಯ್ತು. ನಿದ್ದೆ ಜಪ್ಪಯ್ಯ ಎಂದರೂ ಹತ್ತಿರ ಸುಳಿಯುತ್ತಿಲ್ಲ. ಪಕ್ಕದ ಕೋಣೆಯಲ್ಲಿ ವಯಸ್ಸಾದ ತಾಯಿಯ ಕೆಮ್ಮು ಮುಲುಗುವಿಕೆ.ಉಸ್ಸು.. ಉಸ್ಸು.. ಕೇಳಿ ಬರುತ್...

ಮೈಸೂರಿನ ಸೈನ್ಯದಲ್ಲಿ ದಳವಾಯಿಗಳ ಕಾಲದಲ್ಲಿ ಇವರಿಬ್ಬರೂ ಶೂರರೆಂದು ಹೆಸರುಪಡೆದಿದ್ದವರು. ಹರಿಸಿಂಗನನ್ನು ದಳವಾಯಿ ದೇವರಾಜಯ್ಯನು ಕೆಲಸದಲ್ಲಿ ಸೇರಿಸಿಕೊಂಡು ಸನ್ಮಾನಿಸುತ್ತಲಿದ್ದನು; ಕರಾಚೂರಿ ನಂಜರಾಜಯ್ಯನು ಹೈದರನನ್ನು ಕೆಲಸಕ್ಕೆ ಸೇರಿಸಿ ದೊಡ್ಡ...

“ಸತ್ಯ ದರ್ಶನ ಮಾತಿನಲ್ಲೇ?- ಇಲ್ಲಾ ಮೌನದಲ್ಲೇ?” ಎಂದು ಒಬ್ಬ ಶಿಷ್ಯ ಗುರುಗಳಲ್ಲಿ ಕೇಳಿದ. “ಸತ್ಯಕ್ಕೆ ಕಿವಿ ಬೇಕೆ? ಸತ್ಯಕ್ಕೆ ಬಾಯಿ ಬೇಕೇ?” ಎಂದು ಮತ್ತೆ ಸಂದೇಹದಿಂದ ಕೇಳಿದ. “ಸತ್ಯಕ್ಕೆ ಹೃದಯ ಒಂದೇ ಸಾಕು” ಎಂದರು ಗುರುಗಳು. “ಅದು ಹೇಗ...

ಅಧ್ಯಾಯ ಐದು ಸೆಟ್ಟರಿಗೆ ದಾರಿಯ ಉದ್ದಕ್ಕೂ ನಿಜವಾಗಿ ಯಾವುದೋ ಒಂದು ಲೋಕಕ್ಕೆ ಹೋಗಿಬಂದಿರುವಂತೆ ಆಯಿತು. ಚಿನ್ನಳ ಕೈಹಿಡಿದುಕೊಂಡು ಮುತ್ತಿಟ್ಟಾಗ ಏನೋ ಬಹಳ ಪ್ರಿಯವಾದ ಒಂದು ಚಳುಕು ಹೊಡೆದಂತಾಗಿ ಮೈಯೆಲ್ಲ ಮುಳ್ಳು ಕಟ್ಟಿತು. ಅವರು ಯಾವ ಹೆಂಗಸನ್ನು...

1...1314151617...144

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...