ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ ಇದು ನಿಜವಾಗಿಯೂ ನನ್...

ಒಮ್ಮೆ ದುಃಖದ ಕಣ್ಣೀರು ಸುರಿಯುವಾಗ ಆಕಾಶ, ಭೂಮಿ, ಗಾಳಿ ಎಲ್ಲರು ಗೆಳೆಯರಾಗಿ ಬಂದರು. ಗಾಳಿಯ ಸ್ಪರ್ಶದಲ್ಲಿ ಕಣ್ಣೀರು ಆರಿದರು ಸಾಂತ್ವನ ಸಿಗಲಿಲ್ಲ. ಆಕಾಶದ ಸ್ಪರ್ಶದಲ್ಲಿ ಕಣ್ಣೀರು ಹೆಪ್ಪು ಗಟ್ಟಿತಾದರು ಸಮಾಧಾನ ಸಿಗಲಿಲ್ಲ. ಧಾವಿಸಿಬಂದ ಭೂಮಿಯ ಮ...

ಮುಖ್ಯ ರಸ್ತೆಯಿಂದ ಐದು ಕಿ.ಮೀ. ದೂರವಿದ್ದ ಕತ್ತಲ ಹಳ್ಳಿಗೆ ಬಸ್ ಇರಲಿಲ್ಲ. ಮುಖ್ಯರಸ್ತೆಯಲ್ಲಿಳಿದು ‘ಕತ್ತಲ ಹಳ್ಳಿಗೆ ದಾರಿ’ ಎಂದು ಸೂಚಿಸುವ ನಾಮಫಲಕದ ಜಾಡು ಹಿಡಿದು ನಡೆಯಬೇಕು. ಎತ್ತಿನಗಾಡಿಗಳು ಹರಿದಾಡಿ ಇತ್ತ ಗಾಡಿಗಳಿಗೂ ತ್ರಾಸ ನಡೆವ ಹಳ್ಳಿ...

ಅವರು ಪ್ರೇಮಿಗಳು, ತಮ್ಮ ಪ್ರೇಮದ ಅಮರತೆಯ ಸೂಚಿಸಲು ವೃಕ್ಷದ ಮೇಲೆ ಹೃದಯವನ್ನು ಕೊರೆದು ಅದನ್ನು ಛೇದಿಸುವ ಬಾಣವನ್ನು ಬರೆದು ತಮ್ಮ ಹೆಸರನ್ನು ಕೆತ್ತಿದರು. ವೃಕ್ಷದ ಮೇಲೆ ಅವರ ಕಣ್ಣು ಹಾಯಿದಾಗ ಮರಕುಟಕ ಕೊಕ್ಕಿನಿಂದ ಕೊಕ್ಕಿ ಕೊಕ್ಕಿ ಗೂಡ ಕಟ್ಟಿ ತ...

ಬೋರ್ಡು ಒರಸುವ ಬಟ್ಟೆ ಸುತ್ತಮುತ್ತಲಿನ ಕೆಲವು ಪಾಠಶಾಲೆಗಳನ್ನು ನೋಡಿಕೊಂಡು ರಂಗಣ್ಣ ಜನಾರ್ದನಪುರಕ್ಕೆ ನಾಲ್ಕು ದಿನಗಳ ನಂತರ ಹಿಂದಿರುಗಿದನು. ರೇಂಜಿನಲ್ಲಿ ಹಲವು ಸುಧಾರಣೆಗಳಾಗಬೇಕೆಂಬುದು ಅವನ ಅನುಭವಕ್ಕೆ ಬಂದಿತು. ತನಗೆ ತೋರಿದ ವಿಷಯಗಳನ್ನೆಲ್ಲ...

ಒಂದು ಮರದ ದೊಡ್ಡದೊಡ್ಡ ಶಾಖೆಗಳನ್ನು ಮನುಷ್ಯ ಕಡಿದು ಹಾಕಿ ಮರವನ್ನು ಬೋಳು ಮಾಡಿದ. “ನನ್ನ ಮೈ ಕೈ ಹೀಗೆ ಕತ್ತರಿಸಿ ಹಾಕಿದರೆ ನಾನು ಮತ್ತೆ ಚಿಗುರಿ ಬೆಳೆಯ ಬಲ್ಲೆ. ಒಮ್ಮೆ ಯೋಚಿಸು”, “ನಿನ್ನ ಕೈ ಕಾಲು ಕತ್ತರಿಸಿ ಹಾಕಿದರೆ ಮ...

ಬೆಳಗಿನ ಜಾವದಲ್ಲಿ ಸುಖಕರವಾದೊಂದು ಕನಸು. ನಾನು ಸತ್ತದ್ದು. ನನ್ನ ಕಳೇಬರ ನಾನು ಮಲಗುವ ಹಾಸಿಗೆಯಲ್ಲಿ, ನಾನು ಯಾವಾಗಲೂ ಮಲಗುವ ರೀತಿಯಲ್ಲಿ, ಅಂಗಾತ, ಮೇಲ್ಮುಖವಾಗಿ, ಮುಖದಲ್ಲಿ ಅಪೂರ್ವಶಾಂತಿ, ಬಲಗೈ ಬಲಯಕೃದಲ್ಲಿ ಹಾಸಿಗೆಯ ಮೇಲೆ, ಎಡಗೈ ಎದೆಯ ಮೇಲ...

ಆಕೆಗೆ ಹುಟ್ಟಿದ್ದು ಹತ್ತು ಮಕ್ಕಳು. ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆ ಸೇರಿದ್ದರು. ಗಂಡು ಮಕ್ಕಳು ಮದುವೆಯಾಗಿ ಬೇರೆ ಸಂಸಾರ ಹೂಡಿದ್ದರು. ಅವಳು ಸಾಕಿದ ಎರಡು ಸಂತಾನವೆಂದರೆ ಹಿತ್ತಲ ಮಾವು, -ಅಂಗಳದ ತೆಂಗು ವೃಕ್ಷಗಳು- ಒಂದು ಕಾಮಧೇನು ಇನ್ನ...

ಡಾ|| ಸುಧೀರಕೃಷ್ಣ ರಾವ್ ಕಪಿಲಳ್ಳಿ, ಗಂಡಸರ ಸಮಸ್ಯೆ ಕಾಯಿಲೆಗಳ ತಜ್ಞ ವೈದ್ಯರು ಎಂಬ ಬೋರ್ಡೊಂದು ಹಠಾತ್ತನೆ ಪುರಾತನ ಮುಳಿ ಮಾಡಿನ ಚಿಕ್ಕ ಕಟ್ಟಡವೊಂದರ ಮುಂದೆ ನೇತು ಬಿದ್ದದ್ದು ಕಪಿಲಳ್ಳಿಯಲ್ಲಿ ಬಹುದೊಡ್ಡ ಚರ್ಚೆಗೆ ವಿಶಾಲವಾದ ವೇದಿಕೆಯನ್ನು ಒದಗ...

ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು. ತಂದೆಯ ಸಾವಿನೊಂದಿಗೆ ನಿರಾಶ್ರಯವಾಯಿತು ದೊಡ್ಡ ಸಂಸಾರ. ಕಬ್ಬಿನ ಹಾಲ...

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...