
ಮನವ ಗೆದ್ದೆವೆಂದು ತನುವ ಕರಗಿಸಿ, ಕಾಯವ ಮರಗಿಸಿ ನಿದ್ರೆಯ ಕೆಡಿಸಿ, ವಿದ್ಯೆಯ ಕಲಿತೆನೆಂಬ ಬುದ್ಧಿಹೀನರಿರಾ, ನೀವು ಕೇಳಿರೋ, ನಮ್ಮ ಶರಣರು ಮನವನೆಂತು ಗೆದ್ದರೆಂದರೆ, ಕಾಮ, ಕ್ರೋಧವ ನೀಗಿ, ಮೋಹ ಮದ ಮತ್ಸರವ ನಿಶ್ಚೈಸಿ, ಆಕೆ ರೋಷವಳಿದು, ಜಗದ ಪಾಶವ...
ಕಂಗಳ ಮುಂದೆ ಮಾಣಿಕವಿದ್ದು, ಕಾಣಲರಿಯರಯ್ಯ. ಬಾಗಿಲ ಮುಂದೆ ಹಾಲಸಾಗರವಿದ್ದು, ಒರತೆಯ ನೀರಿಗೆ ಹಾರುವರಂತೆ, ಕಂಗಳ ಮುಂದೆ ಮಹಾಶರಣಿನಿದ್ದು, ಕತ್ತಲೆ ಎನಲೇಕೆ? ಇನ್ನು ಬೇರೆ ಲಿಂಗವನರಸಿಹೆನೆನಲೇಕೋ ಆ ಮಹಾಶರಣ ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. ***...
ಆಗದಾಗದು ಮರ್ತ್ಯದ ಮನುಜರಿಗೆ ಶಿವಸುಖ. ಅದೆಂತೆಂದರೆ ಕಾಳು ವಿಷಯದಲ್ಲಿ ಬಿದ್ದು ನುಡಿವುತ್ತ, ಮರವೆ ನಡೆವುತ್ತ, ಮರವೆ ಮುಟ್ಟುತ್ತ, ಮರವೆ ಕೇಳುತ್ತ, ಮರವೆ ನೋಡುತ್ತ, ಮರವೆ ಇಂತು ಮರಹಿನೊಳಗಿರ್ದು, ಅರುಹ ಕಂಡಿಹೆನೆಂಬ ಅಣ್ಣಗಳಿರಾ, ನೀವು ಕೇಳಿರೋ....
ತುಂಬಿದ ಕೆರೆಗೆ ಅಂಬಿಗ ಹಂಗೋಲಹಾಕಿ, ಬಲಿಯ ಬೀಸಿದಂತೆ ತುಂಬುತ್ತ ಕೆಡೆವುತ್ತಲಿದ್ದ ಲಿಂಗವ ನೋಡಿ ಕೊಡೆವೆಂದು ಜಂಗಮದ ನೆಲೆಯ ಕಾಣದೆ ಸಂದು ಹೋದರಲ್ಲ ಈ ಲೋಕವೆಲ್ಲವು ಲಿಂಗದ ನೆನೆಯ ಕಾಂಬುದಕ್ಕೆ ಹರಿಗೋಲನೆ ಹರಿದು, ಹುಟ್ಟ ಮುರಿದು, ಆ ಬಲೆಯೊಳಗೆ ಸಿ...
ಜಂಗಮವೇ ಗುರು, ಜಂಗಮವೇ ಲಿಂಗ, ಜಂಗಮವೇ ಪ್ರಾಣವೆಂದರೆ, ಇಲ್ಲವೆಂಬ ಅಂಗಹೀನರಿರ ನೀವು ಕೇಳಿರೋ. ಜಂಗಮವು ಗುರುವಲ್ಲದಿದ್ದರೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರವ ಹಿಂಗಿಸುವನೆ? ಜಂಗಮ ಪ್ರಾಣವಲ್ಲದಿದ್ದರೆ, ಪ್ರಾಣಕ್ಕೆ ಪ್ರಸಾದವ ಕೊಡುವನೆ? ಜಂಗಮ...
ಮಾಯದ ಬೊಂಬೆಯ ಮಾಡಿ, ಕಂಗಳಿಗೆ ಕಾಮನ ಬಾಣವ ಹೂಡಿ, ನಡೆನುಡಿಯೊಳಗೆ ರಂಜಕದ ತೊಡೆಗೆಯನೆ ತೊಡಿಸಿ, ಮುಂದುಗಾಣಿಸದೆ ಹಿಂದನರಸದೆ. ಲಿಂಗವ ಮರಹಿಸಿ, ಜಂಗಮವತೋರಿಸದೆ, ಸಂದೇಹದಲ್ಲಿ ಸತ್ತುಹುಟ್ಟುವ, ಈ ಭವ ಬಂಧನಿಗಳೆತ್ತ ಬಲ್ಲರೋ ಈ ಶರಣರ ನೆಲೆಯ? ಅವರ ನೆ...
ಜಂಗಮವೆ ಜಗತ್ಪಾವನವಯ್ಯ! ಜಂಗಮದ ನೆನಹೆ ಲಿಂಗವಾಯಿತ್ತು. ಅವರ ತನುವೆ ಎನ್ನ ಕಾಯವಾಯಿತ್ತು. ಅವರ ದರ್ಶನವೆನಗೆ ಪರುಷವಾಯಿತ್ತು. ಆ ಪರುಷವಿಡಿದು ಮನ ಲಿಂಗದಲ್ಲಿ ಬೆರಸಿ, ಕನಸು ಕಳವಳಿಕೆ ಹೆಸರುಗೆಟ್ಟು ಹೋದವಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. *****...
ನಿರ್ಮಳವಾದ ದೇಹದಲ್ಲಿ ಇನ್ನೊಂದು ಕಲ್ಪಿಸಲುಂಟೆ? ಲಿಂಗವಾದ ತನುವಿನೊಳಗೆ ಜಂಗಮದ ನೆನಹಲ್ಲದೆ, ಇನ್ನೊಂದರ ನೆನಹುಂಟೆ? ಪ್ರಸಾದವಾದ ಕಾಯದೊಳಗೆ ತನ್ನ ಪ್ರಾಣಲಿಂಗದ ನೆನಹಲ್ಲದೆ, ಇನ್ನೊಂದರ ನೆನಹುಂಟೆ? ಈ ಸರ್ವಂಗವು ಲಿಂಗವಾಗಿ, ಜಂಗಮವೆ ಪ್ರಾಣವಾಗಿ, ...
ಕರುಳು ಒಣಗಿತ್ತು. ತನು ಕರಗಿತ್ತು. ಮನ ನಿಂದಿತ್ತು. ವಾಯು ಬರತ್ತಿತ್ತು. ಅಪ್ಪು ಅರತಿತ್ತು. ಹಿಪ್ಪೆ ಉಳಿಯಿತ್ತು. ನೆನಹು ನಿಷ್ಪತ್ತಿಯಾಗಿ, ಬೆಳಗನೆ ಬೆರೆದ ಶರಣರ ಜನನ ಮರಣಕ್ಕೊಳಗಾದ ಮನುಜರೆತ್ತ ಬಲ್ಲರೊ ಅಪ್ಪಣಪ್ರಿಯ ಚನ್ನಬಸವಣ್ಣಾ? *****...
ನಿಶ್ಚಿಂತವಾದವಂಗೆ ಮತ್ತಾರ ಹಂಗುಂಟೆ? ಚಿತ್ತ ಸುಯಿಧಾನಿಯಾದವಂಗೆ ತತ್ವವ ಕಂಡಿಹೆನೆಂಬುದುಂಟೆ? ತಾನು ತಾನಾದವಂಗೆ ಮಾನವರ ಹಂಗುಂಟೆ? ಭಾವ ಬಯಲಾದವಂಗೆ ಬಯಕೆ ಎಂಬುದುಂಟೆ? ಗೊತ್ತ ಕಂಡವಂಗೆ ಅತ್ತಿತ್ತ ಅರಸಲುಂಟೆ? ಇಂತು ನಿಶ್ಚಿಂತವಾಗಿ ನಿಜವ ನಂಬಿದ ...














